“ನಿವೇಶನ ರಹಿತ ಮತ್ತು ವಸತಿ ಕಲ್ಪಿಸುವಂತೆ ಮನವಿ”
ಕೊಟ್ಟೂರು ಫೆಬ್ರುವರಿ.28

ನಿವೇಶನ ರಹಿತ ಮತ್ತು ವಸತಿ, ತಾಲೂಕಾ ಸಮಿತಿ ಕೊಟ್ಟೂರು ಇವರಿಂದ ಬಸ್ ಸ್ಟಾಂಡ್ ಹತ್ತಿರದ ಬಸವಣ್ಣನ ದೇವಸ್ಥಾನ ದಿಂದ ಪಟ್ಟಣ ಪಂಚಾಯತಿ ಯವರಿಗೂ ಕಾರ್ಯಕರ್ತರು ಘೋಷಣೆ ಕೂಗುತ್ತಾ ಪ್ರತಿಭಟನಾ ರ್ಯಾಲಿ ನಡೆಯಿತು.ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಿಗೆ ಬುಧವಾರ ರಂದು ಮನವಿ ಪತ್ರವನ್ನು ಸಲ್ಲಿಸಿದರು ಈ ಕುರಿತು ಜಿಲ್ಲಾ ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತಂದು ಕಲ್ಪಿಸಿ ಕೊಡುವಂತೆ ಮನವಿ ಸಲ್ಲಿಸಲಾಗಿತ್ತು.

ಈ ಸಂದರ್ಭದಲ್ಲಿ ವಸತಿ ಮತ್ತು ನಿವೇಶನದ ರೈತ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷರು ಎಚ್ ವೀರಣ್ಣ, ವಸತಿ ಮತ್ತು ನಿವೇಶನದ ರೈತ ಹೋರಾಟ ಸಮಿತಿ ರಾಜ್ಯ ಮಹಿಳೆ ಉಪಾಧ್ಯಕ್ಷೆ ಕೆ ರೇಣುಕಮ್ಮ,ಗುಡಿಹಳ್ಳಿ ಹಾಲೇಶ ವಸತಿ ಮತ್ತು ನಿವೇಶನದ ರೈತ ಹೋರಾಟ ಹರವನಹಳ್ಳಿ ತಾಲೂಕು ಹಲಗಿ ಸುರೇಶ ವಸತಿ ಮತ್ತು ನಿವೇಶನದ ರೈತ ಹೋರಾಟ ಹಡಗಲಿ , ರಾಜು ಗೌಡ, ತಿಮ್ಮಪ್ಪ ,ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು