ಶೌಚಾಲಯದ ಕೆಲಸ ಪ್ರಾರಂಭಿಸದಿದ್ದರೆ ಮಹಿಳೆಯರಿಂದ ಬೀಗ್ ಮುರಿವುದಾಗಿ ಎಚ್ಚರಿಕೆ.
ಕಲಕೇರಿ ಫೆಬ್ರುವರಿ.29





ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಬಸ್ ನಿಲ್ದಾಣದಲ್ಲಿ ಮಹಿಳೆಯರ ಶೌಚಾಲಯ ಎರಡರಿಂದ ಮೂರು ತಿಂಗಳು ಶೌಚಾಲಯ ಬಂದಾದ ಕಾರಣ ಮಹಿಳೆಯರಿಗೆ ತುಂಬಾ ತೊಂದರೆಯಾಗಿದೆವಿಜಯಪುರ ಜಿಲ್ಲಾ. K.K.R.T.C. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎರಡು ದಿನದಲ್ಲಿ ಕೆಲಸ ಪ್ರಾರಂಭ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದರು ಆದರೂ ಅಧಿಕಾರಿಗಳು ಮೂಗಿಗೆ ತುಪ್ಪ ಹಚ್ಚುವ ಭರವಸೆ ಕೊಟ್ಟರು ಕಲಕೇರಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಶೌಚಾಲಯ ಇಲ್ಲದ ಕಾರಣ ಮಹಿಳೆಯರಿಗೆ ತುಂಬಾ ತೊಂದರೆಯಾಗಿದೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹತ್ತು ದಿನ ಆದರೂ ಇದರ ಬಗ್ಗೆ ಯಾವ ಕ್ರಮ ಕೈಗೊಂಡಿಲ್ಲ ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳು ಎರಡು ದಿನದಲ್ಲಿ ಈ ಕೆಲಸ ಮುಗಿಸಬೇಕು ಎಂದು ಮಹಿಳೆಯರ ಶೌಚಾಲಯ ಪ್ರಾರಂಭ ಮಾಡಬೇಕು ಇಲ್ಲದಿದ್ದರೆ ನಾವು ಬೀಗ ಮುರಿಯುತ್ತೇವೆ ಎಂದು ಮಹಿಳೆಯರು ತಿಳಿಸಿದರು.ಜಿಲ್ಲಾ ಅಧ್ಯಕ್ಷರು ಮೈಬುಬಬಾಷ ಮನಗೂಳಿ ಮಹಿಳೆಯರಿಗೆ ವಿಚಾರಣೆ ಮಾಡಿದಾಗ ಮಹಿಳೆಯರು ಯಾರೇ ಅಧಿಕಾರಿಗಳಿರಲಿ ಅವರನ್ನು ಕರೆಸಿ ಅವರು ಜೊತೆ ನಾವು ಮಾತನಾಡುತ್ತೇವೆ ಎಂದು ತಿಳಿಸಿದರು. ಕಲಕೇರಿ ಬಸ್ ನಿಲ್ದಾಣದ ಪರಿಸ್ಥಿತಿ ಎಲ್ಲಿಗೆ ಬಂತು ನೋಡಿ ಮೂರು ತಿಂಗಳು ಕಳೆದರೂ ಮಹಿಳೆಯರ ಶೌಚಾಲಯ ಬಂದಾದ ಮೇಲೆ ಅಧಿಕಾರಿಗಳಿಗೆ ತಿಳಿಸಿದರೆ ನಾಳೆ ಬರುತ್ತೇವೆ ನಾಡದು ಬರುತ್ತೇವೆ ಎಂದು ಹೇಳುತ್ತಾರೆ. ಕಲಕೇರಿ ಬಸ್ ನಿಲ್ದಾಣಕ್ಕೆ ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳು 2 ದಿನದಲ್ಲಿ ಬಂದು ಕೆಲಸವನ್ನು ಪ್ರಾರಂಭಿಸ ಬೇಕು ಇಲ್ಲವಾದಲ್ಲಿ ಶೌಚಾಲಯ ಕೋಣೆಯ ಬೀಗ್ ಮುರಿವುದಾಗಿ ಮಹಿಳೆಯರು ಊರಿನ ಗ್ರಾಮಸ್ಥರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮೂಲಕ ಎಚ್ಚರಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟೆ