ನಾಳೆ ಶ್ರೀರಾಮುಲು ರವರಿಂದ ಕೂಡ್ಲಿಗಿಯ ಬಿಜೆಪಿ ಕಾರ್ಯಕರ್ತರಿಗೆ ಔತಣಕೂಟ.
ಬಣವಿಕಲ್ ಫೆಬ್ರುವರಿ.29





ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ನಾಳೆ ಶುಕ್ರವಾರ ರಂದು ಬೆಳಿಗ್ಗೆ 10:30 ಕ್ಕೆ ಬಣವಿಕಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಣವಿಕಲ್ಲುಯಿಂದ 1k.m ದೂರದಲ್ಲಿರುವ ವೀರಣ್ಣ ನವರ ತೋಟದ ಮನೆಯಲ್ಲಿ ಬಿ ಶ್ರೀ ರಾಮುಲು ರವರು ಕೂಡ್ಲಿಗಿಯ ಎಲ್ಲಾ ಬಿಜೆಪಿ ಮುಖಂಡರಿಗೂ ಮತ್ತು ಪದಾಧಿಕಾರಿಗಳಿಗೂ ಹಾಗೂ ಕಾರ್ಯಕರ್ತರಿಗೆ ಔತಣಕೂಟವನ್ನು ಏರ್ಪಡಿಸಿದ್ದು. ಈ ಬಾರಿ 2024 ಸಾಲಿನ ಲೋಕಸಭಾ ಚುನಾವಣೆಯ ರಣತಂತ್ರ ರೂಪಿಸಲು ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಬಿ. ಶ್ರೀರಾಮುಲು ರವರು ಮುಂದಾಗಿದ್ದಾರೆ.ನೂತನವಾಗಿ ಬಿಜೆಪಿ ಪಕ್ಷದಲ್ಲಿ ಹೊಸ ಯುವಕರನ್ನು ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು ಆಯ್ಕೆ ಮಾಡಿದ್ದು ಪಕ್ಷದಲ್ಲಿ ನಿಷ್ಠೆಯಿಂದ ದುಡಿದಂತಹ ಕಾರ್ಯಕರ್ತರಿಗೂ ತಾಲೂಕಾ ಮಟ್ಟದ ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷದ ಹುದ್ದೆಗಳನ್ನು ನೀಡಿದ್ದು. ಈ ಬಾರಿ ಲೋಕಸಭಾ ಚುನಾವಣೆಯ ಬಿಜೆಪಿ ಪಕ್ಷ ಗೆಲ್ಲಿಸುವ ಉದ್ದೇಶ ದಿಂದ ತಳಮಟ್ಟದಿಂದಲೂ ಪಕ್ಷ ಸಂಘಟನೆ ಮಾಡಲು ಎಲ್ಲಾ ಕಾರ್ಯಕರ್ತರಿಗೆ ತಿಳಿಸಲು ಮುಂದಾಗಿದ್ದಾರೆ ಹಾಗೆ ಔತಣ ಕೂಟವನ್ನು ಆಯೋಜಿಸಿದ್ದಾರೆ. ಆದಕಾರಣ ಎಲ್ಲಾ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಈ ಔತಣಕೋಟಕ್ಕೆ ಭಾಗವಹಿಸುವಂತೆ ನೂತನ ಕೂಡ್ಲಿಗಿ ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷರು ಬಣವಿಕಲ್ ಕೆ.ನಾಗರಾಜು ತಿಳಿಸುವುದರೊಂದಿಗೆ ಹಾಗೆ ಪಕ್ಷದ ಗೆಲುವಿನ ಬಗ್ಗೆ ಸಮಾಲೋಚನೆ ಮಾಡಲಾಗುವುದು ಎಂದು ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ