ಶೀ ಶಾರದಾಂಬೆ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ.
ಅಂಜುಟಗಿ ಮಾರ್ಚ್.1

ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಶ್ರೀ ಶಾರದಾಂಬೆ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪೂವ೯ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . ಶ್ರೀ ನಂದಲಾಲ ರಾಜು ಗುಜ್ಜರ ಉದ್ದಿಮೆದಾರರು ಇಂಡಿ ಇವರು ರ್ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಫೋಟೊ ಪೂಜೆಯನ್ನು ಶ್ರೀ ಮತಿ ಸುವಣ೯ ಬ ಕವಡಿ ಅಧ್ಯಕ್ಷರು ಗ್ರಾ.ಪಂ.ಅಂಜುಟಗಿ ಇವರ ಅನುಪಮ ಸ್ಥಿತಿಯಲ್ಲಿ ಶ್ರೀ ಬಸವರಾಜ ಕವಡಿ ಅವರು ನೆರವೇರಿಸಿದರು. ತದನಂತರ ಉದ್ಘಾಟನೆಯನ್ನು ಪಿಕೆಪಿಎಸ್ ಉಪಾಧ್ಯಕ್ಷರಾದ ಶ್ರೀ ಅಣ್ಣಾರಾಯ ರೇ ಬಬಲಾದಿಯವರು ಮಾಡಿ ಕಾಯ೯ಕ್ರಮವನ್ನುದ್ದೇಶಿಸಿ-ಶಿಲ್ಪಿ ತಾನು ವಿಕಾರವುಳ್ಳ ಕಲ್ಲು ಕಟೆದು ಒಳ್ಳೆಯ ಮೂತಿ೯ ಮಾಡುವಂತೆ , ಶಿಕ್ಷಕರು ವಿದ್ಯಾರ್ಥಿಗಳನ್ನು ಜೀವಂತ ಮೂರ್ತಿ ಮಾಡುವ ಶಿಲ್ಪಿಯಿದ್ದಂತೆ .ಅಂತಹ ಶಿಲ್ಪಿ ದೇಶದ ಕೀತಿ೯ . ಮಕ್ಕಳಿಗೆ ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ಸಿಗಬೇಕು,ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಶಿಕ್ಷಣ ಪಡೆದು ಗುರಿ ಮುಟ್ಟುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು. ಶಾಲೆಯ ಮುಖ್ಯಗುರುಗಳಾದ ಶ್ರೀ ಆರ್.ಎಚ್.ಆಲೂರ ಇವರು ಮಾತನಾಡಿ -ಯಾರೂ ಮಕ್ಕಳಿಗಾಗಿ ಆಸ್ತಿ, ಅಂತಸ್ತು,ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿರಿ ಅಷ್ಟೇ ಅಲ್ಲದೆ ಯಾವುದೇ ಒಂದು ಕಟ್ಟಡಕ್ಕೆ ತಳವಿನ್ಯಾಸ ನೀಲ ನಕ್ಷೆ ಎಷ್ಟು ಮುಖ್ಯವೋ ಅಷ್ಟೇ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪ್ರಮುಖ ತಳಪಾಯ ಈ ಪ್ರಾಥಮಿಕ ಹಂತವಾಗಿದೆ. ಮನೆಯೇ ಮೊದಲು ಪಾಠ ಶಾಲೆ ,ಜನನೀ ತಾನೆ ಮೊದಲು ಗುರು ಎಂಬಂತೆ ನಂತರ ಮಕ್ಕಳ ಎರಡನೆಯ ಹಂತವೇ ಶಾಲೆಯಾಗಿದೆ.ಅಷ್ಟೇ ಅಲ್ಲದೆ ನಮ್ಮ ಈ ಶಾರದಾಂಬೆ ಶಾಲೆಯಿಂದ ಪ್ರತಿವಷ೯ ವಿವಿಧ ವಸತಿ ಶಾಲೆಗಳಿಗೆ ಸಿ.ಇ.ಟಿ ಪಾಸು ಮಾಡಿಕೊಂಡು ಹೋಗುತ್ತಿರುವುದು ನಮ್ಮ ಗ್ರಾಮಕ್ಕೂ ಶಾಲೆಗೂ ಖುಷಿ ವಿಷಯ ಇದು ಪಾಲಕ -ಮಿತ್ರರ -ಗ್ರಾಮಸ್ಥರ ಶಾಲೆಯ ಎಸ್.ಡಿ.ಎಮ್.ಸಿ.ಸದಸ್ಯರ ಆಶಿವಾ೯ದ ಎಂದು ಹೇಳಿದರು. ವೇದಿಕೆಯ ಮೇಲೆ ವೇ//ಮೂ ಶ್ರೀ ದಉಂಡಯಯ್ಯ ಶಾಸ್ತ್ರೀಗಳು(ಚೋರಗಿ). ಶ್ರೀ ಶಿವಯ್ಯ ಮ ಹಿರೇಮಠ.ಶ್ರೀ ಬಸಯ್ಯ ರೇ ಮಠ. ಶ್ರೀ ಶಂಕರ ಪೂಜಾರಿ ಸಾದುಮುತ್ಯಾ . ಶ್ರೀ ಸುನೀಲ ಅ ಖೇಡ.ಶ್ರೀ ಭೀಮರಾಯ ಸು ಬಬಲಾದ.ಶ್ರೀ ಬಸವರಾಜ ಕವಡಿ .ಶ್ರೀ ಸುಭಾಸ ಅಚ್ಚಿಗಾರ.ಶಿವಾನಂದ ಭೀ ಹರಿಜನ.ಸುರೇಶ ಕೆ ಕಾಂಬಳೆ. ಶ್ರೀ ರಮೇಶ ವಡರೆ.ಶ್ರೀ ಯಶವಂತರಾಯ ಪಾಟೀಲ . ರಮೇಶ ಚ ಪರಗೊಂಡ ಶಾಲೆಯ ಅಧ್ಯಕ್ಷರಾದ ಶ್ರೀ ವಿಜಯಕುಮಾರ ಮಡಿವಾಳಕರ . ಶ್ರೀ ಭೀಮಾಶಂಕರ ಶಾ ಕಾಡೆ . ಶ್ರೀ ಸಂಜೀವ ನಾ ಮಾಶ್ಯಾಳ . ಶ್ರೀ ರೇವಣಸಿದ್ಧ ಪೂಜಾರಿ.ಸುರೇಶ ಹತ್ತಿ . ಶ್ರೀ ಶಿವಪ್ಪ ಕವಡಿ . ಪ್ರಲ್ಹಾದ ಇಚ್ಚುರ. ಅನಿಲಕುಮಾರ ಪರಗೊಂಡ .ಸುರೇಶ ಉಪಾಸೆ.ಸಿದ್ಧು ಬಿರಾದಾರ.ರೇವಪ್ಪ ಗಾಣಿಗೇರ.ಸ್ವಾಗತವನ್ನು ಶ್ರೀ ಮತಿ ಶೃತಿ ಬಿರನಳ್ಳಿ.ಶಿಕ್ಷಕಿಯರು.ನಿರೂಪಣೆ ಶ್ರೀ ಶಿಕ್ಷಕರು.ವಂದನಾಪ೯ಣೆಯನ್ನು ಶ್ರೀ ಆರ್ ಎಚ್ ಆಲೂರ ನೆರವೇರಿಸಿದರು.ಕಾಯ೯ಕ್ರಮದಲ್ಲಿ ಅವರಿವರೆನ್ನದೆ ಸವ೯ ಆಡಳಿತ ಮಂಡಳಿ ನಿಧೇ೯ಶಕರು ,ಸಮಸ್ತ ಶಿಕ್ಷಕ ವೃಂದ,ಹಾಗೂ ಗ್ರಾಮದ ಗಣ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡುಗರನ್ನು ರಂಜಿಸಿತು.ಕಾರ್ಯಕ್ರಮವನ್ನು ಶಾಲಾ ಶಿಕ್ಷಕರು ಉತ್ತಮವಾಗಿ ನಡೆಸಿ ಕೊಟ್ಟರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ