ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವಿಜಯಾನಂದ ಕಾಶಪ್ಪನವರ.
ಇಲಕಲ್ಲ ಮಾರ್ಚ್.3

ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಇಳಕಲ್ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಶಾಸಕ ಸನ್ಮಾನ್ಯ ಶ್ರೀ ವಿಜಯನಂದ್ ಎಸ್ ಕಾಶಪ್ಪನವರ್ ಅವರು ಶಶಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪಲ್ಸ್ ಪೋಲಿಯೊ ಒಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಪ್ರತಿಯೊಂದು ಮಗುವಿಗೂ ಪಲ್ಸ್ ಹನಿ ಹಾಕುವುದು ಅಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ . ನಮ್ಮ ದೇಶದಾದ್ಯಂತ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯುಅತ್ತಿದ್ದು ಐದು ವರ್ಷದೊಳಗಿನ ಮಕ್ಕಳಿಗೆ ಅವರು ವಾಸಿಸುವಲ್ಲಿಯೇ ಹತ್ತಿರದಲ್ಲಿ ಇರುವ ಪಲ್ಸ್ ಪೋಲಿಯೊ ಬೂತ್‌ನಲ್ಲಿ ಹೋಗಿ ಪೋಲಿಯೊ ಹನಿ ಹಾಕಿಸಿ ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೊ ಹನಿಯನ್ನು ಹಾಕಿಸಿ ಕೊಳ್ಳಬೇಕು ಎಂದು ಕರೆ ನೀಡಿದರು. ಭಾಗವಹಿಸುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ನಾವು ಹಿಂದೆ ಅನೇಕ ಮಕ್ಕಳು ಪೋಲಿಯೊ ಪೀಡಿತರಾಗಿ ಶಾಲೆಗೆ ಬರುವುದನ್ನು ನೋಡಿದ್ದೆವು. ಅಂದು ಕೇವಲ ಆ ಮಕ್ಕಳು ಮಾತ್ರವಲ್ಲ, ಅವರೊಂದಿಗೆ ಓದುತ್ತಿದ್ದ ನಮಗೂ ಕೂಡಾ ಅವರ ಕಷ್ಟ ನೋಡಿ ಸಂಕಟವಾಗುತ್ತಿತ್ತು. ಆದರೆ ಇಂದು ಪೋಲಿಯೊ ಮುಕ್ತ ಭಾರತದತ್ತ ಹೆಜ್ಜೆ ಹಾಕುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾಕ್ಟರ್ ಮಾಂತೇಶ ಅಕ್ಕಿ ಶರಣಪ್ಪ ಇನ್ನುಳಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಾರ್ವಜನಿಕ ಸಂಘ ಸಂಸ್ಥೆಗಳ ಪೋಲಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ