ವಿದ್ಯುತ್ ಶಾಕ್ ತಗುಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸಾವು.
ಹುನಗುಂದ ಮಾರ್ಚ್.3

ವಿದ್ಯುತ್ ಶಾಕ್ ತಗುಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ದಾರುಣ ಸಾವನ್ನಪ್ಪಿದ ಘಟನೆ ಶನಿವಾರ ತಾಲೂಕಿನ ಧನ್ನೂರ ಗ್ರಾಮದಲ್ಲಿ ನಡೆದಿದೆ.ವಿದ್ಯುತ್ ಅವಘಡದಲ್ಲಿ ನಿಖಿಲ್ ಸಂಗಪ್ಪ ಗೌಂಡಿ (೧೫) ದಾರುಣ ಸಾವನ್ನಪ್ಪಿದ ದುರ್ದೈವಿ ವಿದ್ಯಾರ್ಥಿ ಯಾಗಿದ್ದಾನೆ. ಘಟನೆ ವಿವರ: ಇದೇ ಮಾ.೨೫ ರಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆಯ ಬೇಕಿದ್ದ ವಿದ್ಯಾರ್ಥಿ ನಿಖಿಲ್ ಗೌಂಡಿ ವಿದ್ಯುತ್ ಅವಘಡದ ವಿಧಿಯಾಟಕ್ಕೆ ಬಲಿಯಾಗಿದ್ದಾನೆ.ಮಾ.೨ ರಂದು ಶನಿವಾರ ಶಾಲೆ ಬಿಟ್ಟ ನಂತರ ಸಂಜೆ ೬.೪೫ ರ ಸರಿ ಸುಮಾರಿಗೆ ತಮ್ಮ ಹೊಸದಾಗಿ ನಿರ್ಮಿಸುತ್ತಿದ್ದ ಮನೆಯ ಕಟ್ಟಡಕ್ಕೆ ಅಲ್ಲಿಯೇ ನಿರ್ಮಿಸಿದ ಸಂಪ್‌ನಿಂದ ಸಣ್ಣ ಕರೆಂಟ್ ಮೋಟರ್ ಜೋಡಿಸಿ ಎಲ್ಲ ಗೋಡೆಗಳಿಗೆ ನೀರು ಹೊಡೆದು ಕರೆಂಟ್ ಬೋರ್ಡ್ನಲ್ಲಿ ಅಳವಡಿಸಿದ್ದ ವಾಯರ್‌ನ್ನು ತಗೆಯದೇ ಕೇವಲ ಬಟನ್ ಬಂದ್ ಮಾಡಿ ಹಸಿ ಕೈಯಿಂದ ಮೋಟರ್‌ಕ್ಕೆ ಜೋಡಿಸಿದ್ದ ವಾಯರ್‌ನ್ನು ತಗೆಯಲು ಹೋಗಿ ಬಲಗೈಗೆ ವಿದ್ಯುತ್ ಶಾಕ್ ತಗುಲಿದ ಪರಿಣಾಮ ಗಾಯಗೊಂಡು ಕೆಳಗೆ ಬಿದ್ದ ವಿದ್ಯಾರ್ಥಿಯನ್ನು ಹುನಗುಂದ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವ ವೇಳೆಯಲ್ಲಿ ರಸ್ತೆ ಮದ್ಯದಲ್ಲಿ ನಿಖಿಲ್ ಮೃತ ಪಟ್ಟಿದ್ದಾನೆ.ಸ್ಥಳಕ್ಕೆ ಸಿಪಿಐ ಸುನೀಲ ಸವದಿ,ಪಿಎಸೈ ಲಕ್ಕಪ್ಪ ಜೋಡಟ್ಟಿ,ಕ್ರೆö ಪಿಸೈ ಬಿ.ವೈ ಅಂಬಿಗೇರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ