ಕರ್ನಾಟಕ ರಾಜ್ಯ ನಧಾಫ್/ಪಿಂಜಾರ ಸಂಘ (ರಿ) ಶಿವಮೊಗ್ಗ ನೂತನವಾಗಿ ಆಯ್ಕೆಯಾದ ವಿಜಯನಗರ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಜನ ಜಾಗೃತಿ ಸಮಾವೇಶ.
ಹೊಸಪೇಟೆ ಮಾರ್ಚ್.4

ಹೊಸಪೇಟೆಯ ಕಮ್ಮವಾರಿ ಭವನ ಹೊಸಪೇಟೆಯಲ್ಲಿ ನಡೆದ ಕರ್ನಾಟಕ ರಾಜ್ಯ ನದಾಫ್ /ಪಿಂಜಾರ ಸಂಘದ ವಿಜಯನಗರ ಜಿಲ್ಲಾ ಘಟಕದ ನೂತನ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಜನಜಾಗೃತಿ ಸಮಾವೇಶಕ್ಕೆ ನಾಡಗೀತೆ ಹಾಗೂ ರೈತಗೀತೆ ಮುಖಾಂತರ ಚಾಲನೆ ನೀಡಿದರು ಮತ್ತು ಸಂಸ್ಥಾಪಕ ದಿವಂಗತ ಹಾಜಿ ಹೀರೆಹಾಳ್ ಇಬ್ರಾಹೀಂ ಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗುಲಾಬಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಪಿಂಜಾರ್ ಸಮಾಜವನ್ನ ಕಡೆಗಣಿಸಲಾಗುತ್ತಿದೆ, ನಿಗಮದಲ್ಲಿ ನಮ್ಮ ಸಮಾಜಕ್ಕೆ ಯಾವೊಂದು ಸೌಲಭ್ಯಗಳು ಸಿಗುತ್ತಿಲ್ಲ, ಹಾಗಾಗಿ ನಮ್ಮ ನದಾಫ್ /ಪಿಂಜಾರ್ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಬಯಸಿದ್ದೇವೆ. ಇಸ್ಲಾಂ ಧರ್ಮದಲ್ಲಿ ಶೇಖಡ 35 ರಷ್ಟು ಜನಸಂಖ್ಯೆ ಪಿಂಜಾರ್ ನದಾಫ್ ಸಮಾಜದ ಜನಗಳಿದ್ದಾರೆ, ಹೀಗಿದ್ದರು ಶೈಕ್ಷಣಿಕವಾಗಿ ನಮ್ಮ ಸಮಾಜ ಹಿಂದುಳಿದಿದೆ ಎಂದು ರಾಜ್ಯಧ್ಯಕ್ಷ ಹೆಚ್. ಜಲೀಲ್ ಸಾಬ್ ಕಳವಳ ವ್ಯಕ್ತಿಪಡಿಸಿದರು.ಕರ್ನಾಟಕ ರಾಜ್ಯ ನದಾಫ್ / ಪಿಂಜಾರ್ ಸಂಘದ ವಿಜಯನಗರ ಜಿಲ್ಲೆಯ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಜನಜಾಗೃತಿ ಸಮಾವೇಶ ಹೊಸಪೇಟೆ ನಗರದ ಕಮ್ಮಾ ಭವನದಲ್ಲಿ ಇಂದು ನಡೆಯಿತು. ಸಮಾರಂಭದಲ್ಲಿ ಬೆಂಗಳೂರಿನ ಭಾವೈಕ್ಯ ಗುರು ಪೀಠದ ಪ. ಪೊ. ಶ್ರೀ ಸಂಗಂ ಪೀರ್ ಜಿಸ್ತಿ ಗುರುಗಳು ಭಾಗವಹಿಸಿ ಸಂಘದ ಸಂಸ್ಥಾಪಕ ಅಧ್ಯಕ್ಷರು ಆದ ದಿ. ಹಾಜಿ ಹೆಚ್. ಇಬ್ರಾಹಿಂ ಅವರ ಕಾಂಗ್ರೆಸ್ ಮುಖಂಡರು ಹಾಗೂ ಅಂಜುಮನ್ ಖಿದ್ಮತ್-ಎ-ಇಸ್ಲಾಂ ಸಂಘಟನೆಯ ಹೊಸಪೇಟೆ ಅಧ್ಯಕ್ಷರು ಆದ ಹೆಚ್. ಏನ್. ಎಫ್. ಇಮಾಮ್ ನಿಯಾಜಿ ಭಾಗವಹಿಸಿ ಮಾತನಾಡಿ, ಪಿಂಜಾರ್ ಸಮಾಜ ಸರ್ಕಾರದ ಸೌಲಭ ಪಡೆಯುವ ಸಂಬಂಧ ಯಾವುದೇ ಹೋರಾಟ ಹಮ್ಮಿಕೊಂಡರು ನಮ್ಮ ಅಂಜುಮನ್ ಸಂಸ್ಥೆ ಬೆಂಬಲ ಸೂಚಿಸಿ ಜೊತೆಗೆ ನಿಲ್ಲುತ್ತದೆ ಎಂದು ಬೆಂಬಲದ ಭರವಸೆ ನೀಡಿದರು.ಇದೇ ಸಂರ್ಭದಲ್ಲಿ ವಿಜಯನಗರ ಜಿಲ್ಲೆಗೆ ನೂತನವಾಗಿ ಆಯ್ಕೆಯಾದ ನದಾಪ್ /ಪಿಂಜಾರ್ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನದಾಫ್/ಪಿಂಜರ್ ಸಮಾಜದ ಮುಖಂಡರು ಸದಸ್ಯರು ಸೇರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಾಲತೇಶ್.ಶೆಟ್ಟರ್.ಹೊಸಪೇಟೆ