ಗಣೇಶ ಹಬ್ಬ, ಈದ್ ಮಿಲಾದ್ – ಶಾಂತಿ ಪಾಲನ ಸಭೆ.
ಕಾನ ಹೊಸಹಳ್ಳಿ ಆ.22

ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗಣೇಶೋತ್ಸವ ಹಾಗೂ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಪಾಲನ ಸಭೆಯಲ್ಲಿ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾತನಾಡಿ ಗಣೇಶ ಹಬ್ಬದಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಾರದ ನಿಯಮಗಳನ್ನು ಗಣೇಶ ಪ್ರತಿಷ್ಠಾಪನಾ ಸಮಿತಿಯವರು ಪಾಲನೆ ಮಾಡಬೇಕು. ಗಣೇಶ ಮೂರ್ತಿಗಳ ವಿಸರ್ಜನೆಗೆ ಸಣ್ಣ ಪುಟ್ಟ ಮಕ್ಕಳು ಮೆರವಣಿಗೆ ಹೋಗದಂತೆ ಪೋಷಕರು ಗಮನಹರಿಸಿ ಹಾಗೂ ಮೂರ್ತಿಗಳ ವಿಸರ್ಜನೆ ನಮ್ಮ ಇಲಾಖೆ ಬೇಕಾದ ಅಗತ್ಯ ಸಿಬಂದಿಯನ್ನು ನಿಯೋಜನೆ ಮಾಡಲಾಗುವುದು. ಪಿ.ಒ.ಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದು, ಯಾರೂ ಕೂಡಾ ಪಿ.ಒ.ಪಿ ಗಣೇಶ ಮೂರ್ತಿಗಳನ್ನು ಖರೀದಿಸದೇ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು.

ಹಬ್ಬದ ಸಂದರ್ಭದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಸಮುದಾಯದ ಜನರು ಪರಸ್ಪರ ಸಹಕಾರ ಮತ್ತು ಸಹಾನುಭೂತಿಯೊಂದಿಗೆ ನಡೆದು ಕೊಳ್ಳಬೇಕು. ಗಣೇಶ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗೆ ಕಡ್ಡಾಯ, ಮೂರ್ತಿ ಪ್ರತಿಷ್ಠಾಪನೆ ಬಳಿಕ ಪ್ರತಿ ದಿನ ಮೂರ್ತಿಯನ್ನು ಕಾಯಲು 1-2 ಮಂದಿ ಕಡ್ಡಾಯವಾಗಿ ಇರತಕ್ಕದ್ದು ವಿಸರ್ಜನೆ ವೇಳೆ ಪಟಾಕಿ ಸಿಡಿ ಮದ್ದು ಹಚ್ಚುವ ಸಂದರ್ಭದಲ್ಲಿ ಮಕ್ಕಳು ಏಚ್ಚರ ವಹಿಸುವುದು ಅಗತ್ಯ ಹಾಗೂ ಕರ್ಕಶ ಡಿಜೆ, ನಿಷೇಧ ಎಂದು ಸ್ಪಷ್ಟ ಸೂಚನೆ ನೀಡಿದರು.ಈ ವೇಳೆ ಕೊಟ್ಟೂರು ಸಿ.ಪಿ.ಐ ಡಿ.ದುರುಗಪ್ಪ ಮಾತನಾಡಿ ಗಣೇಶ ಹಬ್ಬದಲ್ಲಿ ಧ್ವನಿ ವರ್ಧಕ ಬಳಕೆ ಉಪಯೋಗಿಸಲು ಹೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ನೀರಪೇಕ್ಷಣಾ ಪತ್ರ ಪಡೆಯುವುದು ಕಡ್ಡಯಾವಾಗಿದೆ. ಗಣೇಶ ಪ್ರತಿಷ್ಠಾನದ ಜಾಗದ ಸುತ್ತ ಮುತ್ತ ಕಾನೂನು ಬಾಹಿರ ಚಟುವಟಿಕೆಗೆ ಆಸ್ಪದ ನೀಡಬಾರದು. ಶಾಂತಿಯುತವಾಗಿ ಹಬ್ಬ ನಡೆಯುವ ಉದ್ದೇಶ ದಿಂದ ಪೋಲಿಸ್ ಇಲಾಖೆ ಬಿಗಿ ಬಂದೋಬಸ್ತ್ ಕೆಗೊಂಡಿದ್ದು ಅಹಿತಕರ ಘಟನೆಗೆ ಕಾರಣವಾದವರ ಮೇಲೆ ನಿರ್ಧಾಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿ.ಎಸ್.ಐ ಸಿದ್ರಾಮ ಬಿದರಾಣಿ ಮಾತನಾಡಿ ಹಬ್ಬದ ಸಂದರ್ಭದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಸಮುದಾಯದ ಜನರು ಪರಸ್ಪರ ಸಹಕಾರ ಮತ್ತು ಸಹಾನುಭೂತಿಯೊಂದಿಗೆ ನಡೆದು ಕೊಳ್ಳಬೇಕು ಎಂದರು. ಈ ಸಭೆಯಲ್ಲಿ ಹಬ್ಬಗಳನ್ನು ಶಾಂತಿಯುತವಾಗಿ, ಸಮುದಾಯದ ಎಲ್ಲಾ ಸದಸ್ಯರು ಸಹಭಾಗಿಯಾಗಿ ಆಚರಿಸುವ ಮಹತ್ವವನ್ನು ಎಲ್ಲಾ ನಾಯಕರು ಪ್ರಸ್ತಾಪಿಸಿದರು.ಈ ಸಭೆಯಲ್ಲಿ ಕಾನ ಹೊಸಹಳ್ಳಿ ಗ್ರಾ.ಪಂ ಅಧ್ಯಕ್ಷ ಕೆ.ಜಿ ಸಿದ್ದನಗೌಡ, ಸೂರ್ಯ ಪ್ರಕಾಶ್, ದಲಿತ ಮುಖಂಡ ಗಂಗಣ್ಣ ರೆಹ್ಮದ್, ರಿಯಾಜ್, ಆರ್.ಎನ್ ಬಾಷಾ, ವೀರಭದ್ರ ಶಾಂತನಹಳ್ಳಿ ಸೇರಿದಂತೆ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಎಲ್ಲಾ ಸಮಾಜದ ಮುಖಂಡರು, ಗಣೇಶ ಸಮಿತಿಯ ಸದಸ್ಯರು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ