ವಿಜಯಪುರದಲ್ಲಿ 25. ಅಡಿ ಚಿನ್ನದ ಪ್ರತಿಮೆ ಸ್ಥಾಪನೆ – ಜಿತೇಂದ್ರ ಕಾಂಬಳೆ.

ವಿಜಯಪುರ ಮಾರ್ಚ್.6

1950 ರಲ್ಲಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಡಿ. ದೇವರಾಜ ಅರಸು ಅಂಬೇಡ್ಕರರ ಇಷ್ಟದಂತೆ ಬೆಂಗಳೂರಿನ ಶಿವಾಜಿ ನಗರದಲ್ಲಿ 5 ಎಕರೆ ಜಮೀನನ್ನು ಜಗತ್ತಿನ ಎಲ್ಲಾ ಧರ್ಮಗಳ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ಸ್ಥಾಪಿಸಲು ನೀಡಿದ್ದರು ಆದರೆ ಇದು ಕಾರ್ಯಗತವಾಗಲಿಲ್ಲ ಆದರೆ ಇಂದು ಬಾಬಾ ಸಾಹೇಬ ಅಂಬೇಡ್ಕರರ ಅಂದಿನ ಕನಸನ್ನು ನನಸು ಮಾಡಲು ಇಂದು ವಿಜಯಪುರದಲ್ಲಿ ಆರ್,ಪಿ,ಐ (ಅಂಬೇಡ್ಕರ)ರಾಜ್ಯ ಕಾರ್ಯಧ್ಯಕ್ಷರು ದೀಪಕ್ ಭಾವು ನಿಕಾಳಜೆ ಟ್ರಸ್ಟ್ ನ ಅಧ್ಯಕ್ಷರು ಜಿತೇಂದ್ರ ಕಾಂಬಳೆ ಅವರು ಸ್ಥಾಪನೆಯನ್ನು ಮಾಡಲಾಗುವುದು ಎಂದು ಮದುವನ ಹೋಟೆಲ್ ನಲ್ಲಿ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದರು. ಇದಲ್ಲದೆ ಇಂಡಿ ಭಾಗದ ಲಿಂಬೆ ಬೆಳೆಗಾರರಿಗೆ ಲಿಂಬೆಗೆ ಸೂಕ್ತ ಬೆಲೆಯನ್ನು ಕೊಟ್ಟು ವಿಶ್ವ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ ಆದ್ದರಿಂದ ವಿಶ್ವ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ನೇರವಾಗಿ ರೈತರ ಖಾತೆಗೆ ಜಮಾ ಮಾಡುವ ಕಾರ್ಯವನ್ನು ಮಾಡಲಾಗುವದು ರೈತರಿಗೆ ಅನೂಕುಲ ಮಾಡಿ ಕೊಡಲಾಗುವುದು ರೈತ ಮತ್ತು ಶೋಷಿತರ ವರ್ಗಕ್ಕೆ ಜಿತೇಂದ್ರ ಕಾಂಬಳೆ ತಮ್ಮ ಸೌಹಾರ್ದ ಬ್ಯಾಂಕಿನಿಂದ ಹಾಗೂ ಟ್ರಸ್ಟ್ ನಿಂದ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ವಸತಿಯೊಂದಿಗೆ ಮತ್ತು ಊಟ ಕೊಡುವ ನಿರ್ಧಾರ ಮಾಡಲಾಗಿದೆ.ಈ ಜಿಲ್ಲೆಯ ಜನರ ಸಹಕಾರ ದಿಂದ ನಾನು ಇಂದು ದೀಪಕ್ ಭಾವು ನಿಕಾಳಜೆ ಟ್ರಸ್ಟ್ ನ ವತಿಯಿಂದ ಬಸವನಾಡಿನ ವಿಜಯಪುರದಲ್ಲಿ 25 ಅಡಿ ಎತ್ತರದ ಬಾಬಾ ಸಾಹೇಬ ಅಂಬೇಡ್ಕರರವರ ಚಿನ್ನದ ಪುತ್ಥಳಿ ಮಾಡಿ ಇಡೀ ವಿಶ್ವದಾದ್ಯಂತ ವಿಜಯಪುರ ಜಿಲ್ಲೆಯ ಕರ್ನಾಟಕ ರಾಜ್ಯದ ಈ ದೇಶದ ಹೆಸರು ಕೇಳಿ ಬರುವಂತೆ ಮಾಡಲಾಗುವುದು ಎಂದರು.1939 ರಲ್ಲಿ ಅಂಬೇಡ್ಕರವರು ಸೋಮನಗೌಡ ಪಾಟೀಲ (ಬೀಳಗಿ) ಪರವಾದ ಮಾಡಲು ವಿಜಯಪುರಕ್ಕೆ ಆಗಮಿಸಿ ವಾದ ಮಾಡಿದ ನಂತರ ದಲಿತರ ಸಭೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಷಯ ನಂತರ ಡಾ ಬಾಬಾ ಸಾಹೇಬ ಅಂಬೇಡ್ಕರವರು 1948 ರಲ್ಲಿ ಇಂದಿನ ಬಸವನ ಬಾಗೇವಾಡಿ ತಾಲೂಕಿನ ಸಾಸನೂರ ಗ್ರಾಮದಲ್ಲಿ 14 ಜನ ದಲಿತರನ್ನು ಕೊಲೆ ಮಾಡಲಾಗಿತ್ತು ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಅಂಬೇಡ್ಕರವರು 1948 ಸಾಸನೂರ ಗ್ರಾಮಕ್ಕೆ ಭೇಟಿ ನೀಡಿದ್ದರು ಆಗ ಅಂದಿನ ಭಾಗೇವಾಡಿ ಪೊಲೀಸ್ ಠಾಣೆಯ ಪಿಎಸ್ಐ 1948 AC basavana bhagevadi police station village crime (VCP) ಅಲ್ಲಿ ತಮ್ಮ ಸ್ವಂತ ಅಕ್ಷರಗಳಿಂದ ಅಪರೂಪವಾಗಿ ನಮೂಧಿಸಿದ್ದಾರೆ.ಹೀಗೆ ಡಾ ಬಾಬಾ ಸಾಹೇಬ್ ಅಂಬೇಡ್ಕರವರು ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದು ಮತ್ತು ಅದರಲ್ಲೂ ಇಂಡಿ ತಾಲೂಕಿನ ಬರಡೋಲ ಗ್ರಾಮಕ್ಕೆ ಭೇಟಿ ನೀಡಿದ್ದರು.ಈ ಸಂದರ್ಭದಲ್ಲಿ ಜಿತೇಂದ್ರ ಕಾಂಬಳೆ, ಬ್ಯಾಂಕಿನ ಜೂಲಿಲಕ್ಷ್ಮಿ ಕಾಂಬಳೆ, ಬ್ಯಾಂಕ್ ನ ಮುಖ್ಯ ಪ್ರವರ್ತಕ ಚಂದ್ರಶೇಖರ ಮೇಲಿನಮನಿ, . ಕಾರ್ಯದರ್ಶಿ ಸುಖದೇವ ಮೇಲಿನಕೇರಿ, ಶಂಕರ ನಾಯ್ಕರ,ಪರಶುರಾಮ ಉಕ್ಕಲಿ, ಸೋಮು ರಣದೇವಿ, ಇನ್ನೂ ಅನೇಕರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button