ನಾದ ಶಾಲೆಯಲ್ಲಿ 7. ವರ್ಗದ ಬೀಳ್ಕೊಡುಗೆ ಸಮಾರಂಭ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ.

ನಾದ ಬಿಕೆ ಮಾರ್ಚ್.8

ಇಂಡಿ ತಾಲೂಕಿನ ನಾದ ಬಿಕೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7. ನೇ ವಗ೯ದ ಬೀಳ್ಕೊಡುವ ಸಮಾರಂಭ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾಯ೯ಕ್ರಮ ಆಯೋಜಿಸಲಾಗಿತ್ತು . ಶಾಲೆಯ ಎಸ್ .ಡಿ.ಎಮ್ .ಸಿ ಅಧ್ಯಕ್ಷರಾದ ಶ್ರೀ ಸೋಮಯ್ಯ ಮಠಪತಿ ಇವರು ಶ್ರೀ ಶಾರದಾಂಬೆ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು.ಶ್ರೀ ಎಸ್ ಡಿ ಪಾಟೀಲ (ಸ .ನೌ.ಸಂ.ಇಂಡಿ) ಇವರು ರ್ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಉದ್ಘಾಟನೆಯನ್ನು ಪಿಕೆಪಿಎಸ್ ಅಧ್ಯಕ್ಷರಾದ ಶ್ರೀ ಧಮ೯ಗೌಡ ಸಿ ಅವಜಿ ನೆರವೇರಿಸಿದರು .ನಂತರ ಕಾಯ೯ಕ್ರಮವನ್ನುದ್ದೇಶಿಸಿ- ಜೀವ ಜಗತ್ತಿನಲ್ಲಿ ಎಲ್ಲಾ ಪ್ರಾಣಿಗಳಿಗಿಂತ ಬುದ್ಧಿವಂತ ಸೃಜನ-ಶೀಲ ಜೀವಿ ಎಂದರೆ ಅದು ಮಾನವ ಮಾತ್ರ. ಮನುಷ್ಯ ಹಕ್ಕಿಯಂತೆ ಹಾರುವುದು ಕಲಿತ, ಮೀನಿನಂತೆ ಈಜುವುದು ಕಲಿತ, ಹೀಗೆ ಕಲಿಕೆ ಎನ್ನುವುದು ಜನನದಿಂದ ಮರಣದವರೆಗೆ ಸತತವಾಗಿ ಯಾವುದೇ ರೀತಿಯ ಅನುಭವವೇ ಕಲಿಕೆ. ಆದರೆ ಕಲಿವುವ ಅನುಭವದ ಹಂತಗಳು ಮರೆಯಬಾರದು. ವಿದ್ಯಾಥಿ೯ಗಳಾದ ತಾವು ಶಿಕ್ಷಣದಲ್ಲಿ ಮುಂಬಡ್ತಿ ಹೊಂದಿ ಶಾಲೆಗೆ ಹಾಗೂ ಗ್ರಾಮದ ಹೆಸರು ಪಸರಿಸುವ ಜ್ಞಾನಿಗಳಂತೆ ವಿಜ್ಞಾನಿಗಳಾಗ ಬೇಕೆಂದು ಹೇಳಿದರು. ಶಿಲ್ಪಿ ತಾನು ವಿಕಾರವುಳ್ಳ ಕಲ್ಲು ಕಟೆದು ಒಳ್ಳೆಯ ಮೂತಿ೯ ಮಾಡುವಂತೆ.

ಶಿಕ್ಷಕರು ವಿದ್ಯಾರ್ಥಿಗಳನ್ನು ಜೀವಂತ ಮೂರ್ತಿ ಮಾಡುವ ಶಿಲ್ಪಿಯಿದ್ದಂತೆ ಅಂತಹ ಶಿಲ್ಪಿ ದೇಶದ ಕೀತಿ೯ ಮಕ್ಕಳಿಗೆ ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ಸಿಗಬೇಕು,ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಶಿಕ್ಷಣ ಪಡೆದು ಗುರಿ ಮುಟ್ಟುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು. ಆದರೆ ಪ್ರಾಚೀನ ಕಾಲದ ಶಿಕ್ಷಣ ಪದ್ಧತಿಗೂ ಈಗಿನ ಶಿಕ್ಷಣ ಪದ್ಧತಿಗೂ ಸ್ವಲ್ಪ ವ್ಯತ್ಯಾಸವಿದೆ. ಆಗಿನ ಕಾಲದಲ್ಲಿ ಶಿಕ್ಷಕರು ಶಿಲೆಯನ್ನು ರೂಪಿಸುವ ಶಿಲ್ಪಿಯಾಗುತ್ತಿದ್ದರು. ಆದರೆ ಈಗಿನ ಶಿಕ್ಷಣ ಪದ್ಧತಿಯಲ್ಲಿ ಶಿಲೆಯನ್ನು ರೂಪುಗೊಳ್ಳುವ ಮತ್ತು ವಿಕಾರಗಳು ಅದಕ್ಕೆ ಸಂಭಂದಿಸಿದ ಎಲ್ಲಾ ಅಸ್ತ್ರದ ಸಲಕರಣೆ ಈಗ ವಿದ್ಯಾರ್ಥಿಗಳ ಕೈಯಲ್ಲೆ ಸರ್ಕಾರ ಒದಗಿಸಿದೆ. ಅದನ್ನು ರೂಪು ಗೊಳ್ಳುವುದು ಬಿಡುವುದು ವಿದ್ಯಾರ್ಥಿಗಳ ಬಿಟ್ಟುಕೊಟ್ಟ ವಿಷಯವಾಗಿದೆ. ಆದರೆ ಈ ಶಿಲೆಗಳ ಕೆತ್ತನೆಗೆ ಶಿಕ್ಷಕರು ಕೇವಲ ಮಾಗ೯ ದಶ೯ಕರಾಗುತ್ತಾರೆ. ಒಳ್ಳೆಯ ಮಾಗ೯ ದಶ೯ನದಲ್ಲಿ ನಡೆದರೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಸತ್ಯ ಸಾಕ್ಷಾತ್ಕಾರ ವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.ಇಲ್ಲವಾದರೆ ಶಿಲೆಯ ತುಣುಕುಗಳಂತೆ ಗುಡಿಯ ಹೊರಗೆ ಪಾದ ದಡಿಯಲ್ಲಿ ಕಸ್ಟ ಅನುಭವಿಸ ಬೇಕಾಗುತ್ತದೆ .ಕೈಯಲ್ಲಿರುವ ಕನ್ನಡಿ ದುರುಪಯೋಗ ಪಡಿಸಿಕೊಳ್ಳಬೇಡಿ ಇದು ಅನುಭವದ ಮಾತು ಎಂದು ಹೇಳಿದರು. ವಿಶೇಷವಾಗಿ ಶಿರಶ್ಯಾಡ ಗ್ರಾಮದ ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಸ್.ಎ.ಪೂಜಾರಿ ನುರಿತ,ಅನುಭವಿ, ಶಿಕ್ಷಕರು ಮಾತನಾಡಿ-ಇಂಡಿ ತಾಲೂಕಿನ ಕ್ಷೇತ್ರದಲ್ಲಿ ಹೆಚ್ಚು ಸರ್ಕಾರಿ ನೌಕರಿ ಪಡೆದ ಗ್ರಾಮವೆಂದರೆ ಅದು ನಾದ ಬಿಕೆ.ಈ ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರ ಬಹಳವಿದೆ. ಶಿಕ್ಷಣ ಕ್ಷೇತ್ರದಲ್ಲಿ ಎತ್ತಿದ ಕೈ. – ಯಾರೂ ಮಕ್ಕಳಿಗಾಗಿ ಆಸ್ತಿ, ಅಂತಸ್ತು,ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿರಿ ಅಷ್ಟೇ ಅಲ್ಲದೆ ಯಾವುದೇ ಒಂದು ಕಟ್ಟಡಕ್ಕೆ ತಳ ವಿನ್ಯಾಸ ನೀಲ ನಕ್ಷೆ ಎಷ್ಟು ಮುಖ್ಯವೋ ಅಷ್ಟೇ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪ್ರಮುಖ ತಳಪಾಯ ಈ ಪ್ರಾಥಮಿಕ ಹಂತವಾಗಿದೆ. ಮನೆಯೇ ಮೊದಲು ಪಾಠ ಶಾಲೆ ,ಜನನೀ ತಾನೆ ಮೊದಲು ಗುರು ಎಂಬಂತೆ ನಂತರ ಮಕ್ಕಳ ಎರಡನೆಯ ಹಂತವೇ ಶಾಲೆಯಾಗಿದೆ.ಅಷ್ಟೇ ಅಲ್ಲದೆ ನಮ್ಮ ಈ ಸರ್ಕಾರಿ ಶಾಲೆಯಿಂದ ಪ್ರತಿ ವಷ೯ ವಿವಿಧ ವಸತಿ ಶಾಲೆಗಳಿಗೆ ಸಿ.ಇ.ಟಿ ಪಾಸು ಮಾಡಿಕೊಂಡು ಹೋಗುತ್ತಿರುವುದು ನಮ್ಮ ಗ್ರಾಮಕ್ಕೂ ಶಾಲೆಗೂ ಖುಷಿ ವಿಷಯ. ಇದು ಪಾಲಕ -ಮಿತ್ರರ -ಗ್ರಾಮಸ್ಥರ ಶಾಲೆಯ ಎಸ್.ಡಿ.ಎಮ್.ಸಿ.ಸದಸ್ಯರ ಆಶಿವಾ೯ದ ಎಂದು ಹೇಳಿದರು. ಶ್ರೀ ಸಿದ್ಧಾರೂಢ ಯ ಕೊಳ್ಳೂರ “ವಿಜ್ಞಾನ ವಸ್ತು ಪ್ರದರ್ಶನ” ಉದ್ಘಾಟನೆ ಮಾಡಿ, ನಂತರ ಮಾತನಾಡಿ- ಜಗತ್ತು ಪ್ರಗತಿ ಯಾಗುತ್ತಿರುವುದು ಶಿಕ್ಷಣದಿಂದ . ಶಿಕ್ಷಣದಲ್ಲಿ ಯಾವುದೇ ರೀತಿಯ ಭೇಧ-ಭಾವವಿಲ್ಲದೆ, ಶಿಕ್ಷಕರಿಗೆ,ಹಿರಿಯರಿಗೆ ಗೌರವಯುತವಾಗಿ ನಡೆದು ಕೊಳ್ಳಬೇಕು.ಅಹಂ ತೊರೆದು ಶಿಕ್ಷಣ ಪಡೆಯಬೇಕು.ಈ ವಿಜ್ಞಾನ ವಸ್ತು ಪ್ರದರ್ಶನದಂತೆ ವಿದ್ಯಾರ್ಥಿಗಳಾದ ತಾವು ಮುಂದೊಂದು ದಿನ ವಿಜ್ಞಾನಿಯಾಗಳಾಗ ಬೇಕೆಂದು ಹಿತನುಡಿ ಹೇಳಿದರು. ವಿಶೇಷವಾಗಿ ಈ ಕಾಯ೯ಕ್ರಮದಲ್ಲಿ ತಾಲೂಕಾ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ ಶ್ರೀ ಅರವಿಂದಗೌಡ ಬಿರಾದಾರ (ಶಿರಶ್ಯಾಡ) ಶ್ರೀಮತಿ ರೂಪಾ ಎಲ್ ಕೆ (ನಾದ ಬಿಕೆ)ಇವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.ವೇದಿಕೆಯ ಮೇಲೆ ಶ್ರೀ ಧಮ೯ಗೌಡ ಸಿ ಅವಜಿ.ಶ್ರೀ ಸೋಮಯ್ಯ ಪಂ ಮಠಪತಿ.ಉಪನ್ಯಾಸಕರಾದ ಆಲಮೇಲ ಎ ಕೆ ನಂದಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಶಿವಾನಂದ ಎಂ ಉಪ್ಪಾರ.ಶ್ರೀ ಸಿದ್ಧಾರೂಢ ಯ ಕೊಳ್ಳೂರ.ಶ್ರೀ ಸೋಮಶೇಖರ ಮ್ಯಾಕೇರಿ.ಶ್ರೀ ಎಸ್.ಎ.ಪೂಜಾರಿ.(ಮು.ಗು) ಶ್ರೀ. ಎಸ್.ವ್ಹಿ.ಹರಳಯ್ಯ.(ಅಧ್ಯಕ್ಷರು ಫ್ರೌ.ಶಾ.ಶಿ.ಸಂ.ಇಂಡಿ). ಶ್ರೀ ಎಸ್ ಡಿ ಪಾಟೀಲ.(ಸ.ನೌ ಸಂ.ಇಂಡಿ) ಶ್ರೀ ಮಲ್ಲಿಕಾರ್ಜುನ ನೇದಲಗಿ . ಶ್ರೀ ಬಿ ಎನ್ ಜಮಾದಾರ.ಶ್ರೀ ಪಿ ಎಮ್ ನಾದ. ಶ್ರೀ ಎ.ಎಸ್.ನಾಗಣಿ.ಸ್ವಾಗತವನ್ನು ಮುಖ್ಯಗುರುಗಳಾದ ಶ್ರೀ ಎಸ್ ಜೆ ಹಿಳ್ಳಿಯವರು ಮಾಡಿದರು.ನಿರೂಪಣೆಯನ್ನು ಎಸ್ ಎಮ್ ಕುಂಬಾರ (ಶಿಕ್ಷಕರು)ನಿವ೯ಹಿಸಿದರು.ಶ್ರೀ ಬಿ ಎಸ್ ವಾಲಿ( ಶಿಕ್ಷಕರು ) . ಶ್ರೀ ಬಿ ಎಸ್ ಪಾಟೀಲ (ಶಿಕ್ಷಕರು) ಶ್ರೀ ಎ ಬಿ ರವತಗಾಂವ(ಶಿಕ್ಷಕರು) ಶ್ರೀ ಜ್ಯೋತಿ ಪರಗೊಂಡ. (ಶಿಕ್ಷಕಿಯರು) ಶ್ರೀಮತಿ ರೂಪಾ ಎಲ್ ಕೆ.(ಶಿಕ್ಷಕಿಯರು) ಶ್ರೀ ರಿಶಾಲದಾರ (ಶಿಕ್ಷಕಿಯರು) ಹಾಗೂ ಎಸ್ ಡಿ ಎಮ್ ಸಿ ಸದಸ್ಯರು, ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button