ಪಡಗಾನೂರ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ – ಶಾಸಕ ರಾಜುಗೌಡ ಪಾಟೀಲ.
ಪಡಗಾನೂರ ಮಾರ್ಚ್.11

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ಸುಮಾರು 50 ಲಕ್ಷ ರೂಪಾಯಿ ವೆಚ್ಚದ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ಶ್ರೀ ರಾಜುಗೌಡ ಪಾಟೀಲ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ 5 ಲಕ್ಷ ರೂಪಾಯಿ ಒದಗಿಸಿರುವುದಾಗಿ ತಿಳಿಸಿದರು. ಅದರಂತೆ ಪಡಗಾನೂರದಿಂದ ಬಮ್ಮನಹಳ್ಳಿಗೆ ಹೋಗುವ ರಸ್ತೆಗೆ ಅನುದಾನ ಮಂಜೂರಿ ನೀಡಲಾಗಿದ್ದು ಕೂಡಲೇ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸುವುದಾಗಿ ತಿಳಿಸಿದರು ಇದರಂತೆ ಗ್ರಾಮಸ್ಥರ ಬೇಡಿಕೆಯಾದ ಶುದ್ಧ ನೀರಿನ ಘಟಕವನ್ನು ಸಹ ಮುಂದಿನ ದಿನಮಾನಗಳಲ್ಲಿ ಸ್ಥಾಪಿಸಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು ಸರಕಾರದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅನುದಾನದ ಕೊರತೆ ಇದ್ದರೂ ಸಹ ತಾವು ಸಂಬಂಧಿಸಿದ ವಿವಿಧ ಇಲಾಖೆಗಳ ಸಚಿವರ ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಇಲಾಖೆ ಗಳ ವತಿಯಿಂದ ಅನುದಾನವನ್ನು ಪಡೆದು ಆದ್ಯತೆಯ ಮೇಲೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವದಾಗಿ ತಿಳಿಸಿದರು ಮುಂದೆಯೂ ಸಹ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು ಸುಮಾರು 20 ಸಾವಿರಕ್ಕಿಂತ ಹೆಚ್ಚಿನ ಮತಗಳಿಂದ ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರ ಜನರ ಋಣವನ್ನು ಪ್ರಾಮಾಣಿಕವಾಗಿ ಮಾಡಿ ತೀರಿಸುವುದಾಗಿ ತಿಳಿಸಿದರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಸಚಿವರನ್ನು ನಿರಂತರ ಭೇಟಿ ಮಾಡುತ್ತಾ ಮನವಿ ಸಲ್ಲಿಸಿದ್ದೇನೆ ಆಡಳಿತ ಸೌಧ ಕ್ರೀಡಾಂಗಣ ರಸ್ತೆ ಅಭಿವೃದ್ಧಿ ಶಾಲಾ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ತಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಶ್ರಮ ವಹಿಸುತ್ತೇನೆಂದು ತಿಳಿಸಿದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪ್ರತಿನಿಧಿ ಗುರುರಾಜ ಆಕಳವಾಡಿ ಮುಳ ಸಾವಳಗಿ ಪಿಕೆಪಿಎಸ್ ಅಧ್ಯಕ್ಷರಾದ ಸಂಗನಗೌಡ ಪಾಟೀಲ. ವೇ. ಅಯ್ಯಪ್ಪ ಸ್ವಾಮಿಗಳು ಹಿರೇಮಠ. ಗ್ರಾಮದ ಹಿರಿಯರಾದ ಬಸನಗೌಡ ಪಾಟೀಲ. ಶಾಂತಗೌಡ ಪಾಟೀಲ. ಸುಭಾಸ ಹೊಸಟ್ಟಿ. ಸಿದ್ದು ಹ ದರಿ. ಗ್ರಾಮ ಪಂಚಾಯತ್ ಸದಸ್ಯರಾದ ಬಿರು ಹಳ್ಳಿ. ಶಿವಪ್ಪ ನಾಯ್ಕೋಡಿ. ಸುರೇಶ ರಾಥೋಡ. ರಾಜಕುಮಾರ. ಸಿಂದಗೇರಿ. ಸಿದ್ದು ಬೆಳ್ಳಿ. ರಾಜು ರಾಥೋಡ. ಶರಣು ನಾಟಿಕಾ ರ. ಜೆಡಿಎಸ್ ಮುಖಂಡರಾದ ಎ ಡಿ ಮುಲ್ಲಾ. ಹನುಮಂತರಾಯಗೌಡ ಬಿರಾದಾರ. (ಭೈರಾ ವಡಗಿ)ಸುನಿಲ ಮಾಗಿ. ಬಾಬು ದೇಗಡಿ. ಅಯ್ಯಪ್ಪ . ಸಾತಿಹಾಳ ಸೇರಿದಂತೆ ಪಡಗಾನೂರ ಗ್ರಾಮಸ್ಥರು ಮುಖಂಡರು ತಾಲೂಕಿನ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ.ದೇವರ ಹಿಪ್ಪರಗಿ