ಎಂ ಮಾಂತೇಶ್ ಗ್ರಾ. ಪಂ. ಅಧ್ಯಕ್ಷರಾಗಿ ಅವಿರೋಧ ಆಯ್ಕೆ.
ನಿಂಬಳಗೇರೆ ಮಾರ್ಚ್.12

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ನಿಂಬಳಗೇರೆ ಗ್ರಾಮ ಪಂಚಾಯಿತಿಯಲ್ಲಿ ಎಂ ಮಾಂತೇಶ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಎರಡನೇ ಅವಧಿಗೆ ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ನಿಂಬಳಗೇರೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ರಾಜಶೇಖರ್ ಗೌಡ ಆಯ್ಕೆಯಾಗಿದ್ದರು.

ಆದರೆ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದು, ತೆರವಾದ ಅಧ್ಯಕ್ಷರ ಸ್ಥಾನಕ್ಕೆ ಎಂ ಮಾಂತೇಶ್ ತಂದೆ ಸಣ್ಣ ಓಬಪ್ಪ ಎಂಬುವರು ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದು ಎಂ ಮಾಂತೇಶ್ ರವರು ಆಯ್ಕೆಯಾಗಿದ್ದಾರೆ ಎಂದು ನಿಯೋಜಿತ ಚುನಾವಣೆ ಅಧಿಕಾರಿಯಾಗಿ ಜಿ ಕೆ ಅಮರೇಶ್ ತಹಸಶೀಲ್ದಾರರು ಕೊಟ್ಟೂರು ಇವರು ಹೇಳಿದರು.ಈ ಸಂದರ್ಭದಲ್ಲಿ ಎಂ ಪ್ರಶಾಂತ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಾಧ್ಯಕ್ಷರಾದ ಮಂಗಳಮ್ಮ ವೆಂಕಟೇಶ್ ಮತ್ತು ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು