ಕುದರ ಗುಂಡ ಕೆರೆಗೆ ನೀರು ತುಂಬಿಸುವಂತೆ ರೈತರಿಂದ ಶಾಸಕರಿಗೆ ಒತ್ತಾಯ.
ಕಲಕೇರಿ ಮಾರ್ಚ್.13

ದೇವರ ಹಿಪ್ಪರಗಿ ತಾಲೂಕಿನ ಕಲಕೇರಿ ಸಮೀಪದ ಕುದರ ಗುಂಡ ಕೆರೆಗೆ ನೀರು ಇನ್ನೂ ಬರ್ತಿಲ್ಲಿ ಕಲಕೇರಿಯ ಎಲ್ಲಾ ರೈತರಿಗೆ ಸಾರ್ವಜನಿಕರಿಗೆ ದನ ಕರೆಗಳಿಗೆ ನೀರಿಲ್ಲದೆ ಪರದಾಡುವಂತೆ ಆಗಿದೆನಮ್ಮ ಭಾಗದ ಶಾಸಕರಾದ ರಾಜುಗೌಡ ಪಾಟೀಲ್ ಇವರು ತಕ್ಷಣ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಕುದರ ಗುಂಡ ಕೆರೆಗೆ ನೀರು ಬೇಗನೆ ತಲುಪುವಂತೆ ಕೆಲಸವನ್ನು ತಾವು ಮಾಡಬೇಕೆಂದು ಕಲಕೇರಿ ಗ್ರಾಮದ ಎಲ್ಲಾ ರೈತ ಬಾಂಧವರು ಸಾರ್ವಜನಿಕರು ಆಗ್ರಹ ಬೇಸಿಗೆ ದಿನದಲ್ಲಿ ಕುಡಿಯಾಕ ನೀರಿಗಾಗಿ ದನ ಕರಗಳಿಗೆ ಮತ್ತು ಜನರಿಗೆ ತುಂಬಾ ತೊಂದರೆ ಯಾಗಿದೆ ದಯವಿಟ್ಟು ಇದರ ಬಗ್ಗೆ ತಾವು ಕ್ರಮ ಕೈಗೊಳ್ಳಬೇಕು ಕೆರೆಗೆ ನೀರು ಬೇಗ ತಲುಪುವಂತೆ ಮಾಡಬೇಕೆಂದು ಒಂದು ವೇಳೆ ನೀರು ಕೆರೆಗೆ ಬರದಿದ್ದರೆ ಎಲ್ಲಾ ರೈತರು ಉಗ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟೆ