ಹುನಗುಂದ ಕೆ.ಎಸ್.ಆರ್.ಟಿ.ಸಿ ನೂತನ ಘಟಕ ವ್ಯವಸ್ಥಾಪಕ ಅರವಿಂದ ಭಜಂತ್ರಿಯವರಿಗೆ ಸಮುದಾಯ ದಿಂದ ಸನ್ಮಾನ.
ಹುನಗುಂದ ಮಾರ್ಚ್.15

ಪಟ್ಟಣದ ಕರ್ನಾಟಕ ರಾಜ್ಯ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಹುನಗುಂದ ಘಟಕದ ನೂತನ ಘಟಕ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿದ ಅರವಿಂದ ಭಜಂತ್ರಿ ಅವರನ್ನು ತಾಲೂಕಿನ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಮಂಗಳವಾರ ಹುನಗುಂದ ಡೀಪೋದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಮುಖಂಡ ಬಸವರಾಜ ಹೊಸಮನಿ ಮಾತನಾಡಿ ಡಾ,ಬಾಬಾಸಾಹೇಬ ಅಂಬೇಡ್ಕರ ಅವರ ಕೊಟ್ಟ ಸಂವಿಧಾನ ಶೋಷಿತ ಸಮುದಾಯದವರು ಉನ್ನತ ಹುದ್ದೆಯನ್ನು ಪಡೆಯುತ್ತಾರೆ ಎನ್ನುವುದ್ದಕ್ಕೆ ಅರವಿಂದ ಭಜಂತ್ರಿ ಅವರು ಒಂದು ತಾಜಾ ಉದಾಹರಣೆ. ನಮ್ಮವರೊಬ್ಬರು ಘಟಕ ವ್ಯವಸ್ಥಾಪಕರಾಗಿ ಹುನಗುಂದ ಘಟಕಕ್ಕೆ ಬಂದಿದ್ದು ಸಮುದಾಯಕ್ಕೆ ಸಂತಸದ ಸಂಗತಿಯಾಗಿದೆ. ಹುನಗುಂದ ಮತ್ತು ಇಳಕಲ್ಲ ಘಟಕದಲ್ಲಿ ಸಾಕಷ್ಟು ಜನ ಎಸ್.ಸಿ ಮತ್ತು ಎಸ್.ಟಿ ನೌಕರರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು. ಅವರೆಲ್ಲರಿಗೂ ಒಳ್ಳೆಯ ಮಾರ್ಗದರ್ಶನ ಮಾಡುತ್ತಾ ಅವರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಮೂಲಕ ಘಟಕದ ಕೀರ್ತಿಯನ್ನು ರಾಜ್ಯದಲ್ಲಿ ಹೆಚ್ಚಿಸುವ ಕಾರ್ಯವನ್ನು ಮಾಡಬೇಕು ಎಂದರು.ಸನ್ಮಾನ ಸ್ವೀಕರಿಸಿ ನೂತನ ಘಟಕ ವ್ಯವಸ್ಥಾಪಕ ಅರವಿಂದ ಭಜಂತ್ರಿ ಮಾತನಾಡಿ ನಮ್ಮವರು ಎನ್ನುವ ಅಭಿಮಾನವನ್ನು ಇಟ್ಟಕೊಂಡು ಬಂದು ನನ್ನ ಸನ್ಮಾನಿಸಿದ್ದಕ್ಕೆ ನಾನು ಯಾವಾಗಲೂ ಚಿರ ಋಣಿಯಾಗಿದ್ದೇನೆ. ನೀವು ಇಟ್ಟುಕೊಂಡ ಆಸೆ ಆಕಾಂಕ್ಷೆಗಳಿಗೆ ಚೂತಿ ತರದ್ದಂತೆ ನಡೆದುಕೊಂಡು ಹುನಗುಂದ ಘಟಕವನ್ನು ರಾಜ್ಯದಲ್ಲಿಯೇ ಒಂದು ಮಾದರಿ ಘಟಕವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದರು.ಮುಖಂಡ ಹನಮಂತ ನಡುವಿನಮನಿ ಮಾತನಾಡಿ ಹುನಗುಂದ ತಾಲೂಕಿನ ಅನೇಕ ಗ್ರಾಮಗಳಿಂದ ವಾಸ್ಕೋ ಪಟ್ಟಣಕ್ಕೆ ದುಡಿಮೆ ಮಾಡಲು ಹೋಗುತ್ತಿದ್ದು. ಇಳಕಲ್ಲ ಘಟಕದಿಂದ ಒಂದೇ ಒಂದು ಬಸ್ ವ್ಯವಸ್ಥೆ ಇರೋದರಿಂದ ಆ ಬಸ್ ಇಳಕಲ್ಲದಲ್ಲಿಯೇ ತುಂಬಿ ಬರುತ್ತಿದ್ದು.ಇದರಿಂದ ಹುನಗುಂದದಿಂದ ವಾಸ್ಕೋಕ್ಕೆ ಪ್ರಯಾಣಿಸುತ್ತಿರುವ ಸಾಕಷ್ಟು ಜನರಿಗೆ ತೊಂದರೆ ಯಾಗುತ್ತಿದೆ.ದಯವಿಟ್ಟು ಹುನಗುಂದ ಘಟಕದಿಂದ ವಾಸ್ಕೋಕ್ಕೆ ಒಂದು ಬಸ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಶ್ಯಾಮ ಮುದೋಳ, ಮಹಾಂತೇಶ ಭಜಂತ್ರಿ, ಮುತ್ತಣ್ಣ ಭಜಂತ್ರಿ, ಮುದಕಪ್ಪ ಪೂಜಾರಿ, ಶಿವಪುತ್ರಪ್ಪ ಭಜಂತ್ರಿ, ರವಿ ಮಾದರ, ವಿಜಯ ಭಾವಿಕಟ್ಟಿ, ಮಲ್ಲಿಕಾರ್ಜುನ ಹೊಸಮನಿ, ಚಾಲಕ ಕನಕಪ್ಪ ಮಾದರ ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ