ಚಿತ್ತರಗಿ ಕಾರ್ಮಿಕರ ಆಯವ್ಯಯ ತಯಾರಿಕೆ ಅಭಿಯಾನಕ್ಕೆ ಚಾಲನೆ.
ಹಡಗಲಿ ಅಕ್ಟೋಬರ್.6

ಕಾರ್ಮಿಕರ ಆಯವ್ಯಯ ತಯಾರಿಸುವ ಸಲುವಾಗಿ ಅಕ್ಟೋಬರ್ ರಿಂದ ಒಂದು ತಿಂಗಳವರೆಗೆ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಡಗಲಿ ಗ್ರಾಮದಲ್ಲಿ ಬೇಡಿಕೆಗಳನ್ನು ಸ್ವೀಕರಿಸುವ ಮೂಲಕ ಚಾಲನೆ ನೀಡಲಾಯಿತು.ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮಸ್ಥರಿಗೆ ಹಾಗೂ ಗ್ರಾಪಂ ಸದಸ್ಯರಿಗೆ 2023-24ನೇ ಸಾಲಿನ ಕಾರ್ಮಿಕರ ಆಯವ್ಯಯ ತಯಾರಿಸುತ್ತಿದ್ದು, ವೈಯಕ್ತಿಕ ಕಾಮಗಾರಿಗಳ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ವೈಯಕ್ತಿಕ ಕಾಮಗಾರಿಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದು ತಿಳಿಸಿದರು.ಬಳಿಕ ಎಸ್ಸಿ ಕಾಲೋನಿಗೆ ಭೇಟಿ ನೀಡಿ ದನದ ಶೆಡ್, ಕೃಷಿ ಹೊಂಡ ಬದು ನಿರ್ಮಾಣ, ಬಚ್ಚಲು ಗುಂಡಿ ಸೇರಿದಂತೆ ನರೇಗಾ ಯೋಜನೆಯಡಿ ಸಿಗುತ್ತಿರುವ ವೈಯಕ್ತಿಕ ಕಾಮಗಾರಿಗಳ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಜೊತೆಗೆ ಮಹಿಳೆಯರು ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಯಿತು. ಬಳಿಕ ಕೂಲಿ ಕಾರ್ಮಿಕರ ಬೇಡಿಕೆ ಪಡೆಯಲಾಯಿತು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಂಗಪ್ಪ ಯತ್ತಲ್ಲದಡ್ಡಿ, ಗ್ರಾಪಂ ಉಪಾಧ್ಯಕ್ಷೆ ಅಕ್ಕಮಹಾದೇವಿ ಪೂಜಾರ, ಸದಸ್ಯರಾದ ಬಸವರಾಜ ಬನ್ನಟ್ಟಿ, ಯಮನವ್ವ ಛಲವಾದಿ, ಅಕೌಂಟೆಂಟ್ ಹನಮಂತ ಮಾಗಿ, ವಾಟರಮನ್ ಗಳಾದ ಹನಮಂತ ಹಗೇದಾಳ, ಸಂಗಪ್ಪ ಅಂಗಡಿ, ಸಿಪಾಯಿ ರಸೋಲ್ ಸಾಬ ತೆಗ್ಗಿನಮನಿ ಉಪಸ್ಥಿತರಿದ್ದರು.