ತಹಶೀಲ್ದಾರ್ ಕಚೇರಿಯ ಆವರಣದಲ್ಲಿ -ಜನರ ನೀರಿನ ತಣಿಸಲು ಕರವೇ ಕಾರ್ಯಕರ್ತರಿಂದ ನೀರಿನ ಅರವಟ್ಟಿಗೆ ಆರಂಭ.
ಹುನಗುಂದ ಮಾರ್ಚ್.16

ಬಿರು ಬಿಸಲಿಗೆ ಬಸವಳಿದ ತಾಲೂಕಿನ ನಾನಾ ಗ್ರಾಮಗಳಿಂದ ತಮ್ಮ ಕೆಲಸ ಕಾರ್ಯಗಳ ನಿಮಿತ್ಯ ತಹಶೀಲ್ದಾರ್ ಕಚೇರಿಗೆ ಆಗಮಿಸುವ ರೈತರು ಮತ್ತು ಸಾರ್ವಜನಿಕರ ನೀರಿನ ದಾಹವನ್ನು ತಣಿಸಲು ಶುಕ್ರವಾರ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಎಚ್.ಶಿವರಾಮೇಗೌಡ್ರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ೨ ತಿಂಗಳವರಗೆ ಉಚಿತ ನೀರಿನ ಅರವಟ್ಟಿಗೆಯನ್ನು ಆರಂಭಿಸುವ ಮೂಲಕ ಸಾರ್ವಜನಿಕರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.ಹೌದು ಮಾ.೧೩ ರಂದು ಉದಯಕಾಲ ಪತ್ರಿಕೆಯಲ್ಲಿ ಹುನಗುಂದ ತಹಶೀಲ್ದಾರ ಕಾರ್ಯಾಲಯದಲ್ಲಿ ಕುಡಿಯುವ ನೀರಿಗೆ ಬರ ಎನ್ನುವ ವರದಿ ಪ್ರಕಟವಾದ ಬೆನ್ನಲ್ಲೆ ಅದನ್ನು ಓದಿದ ಎಚ್.ಶಿವರಾಮೇಗೌಡ್ರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಹಶೀಲ್ದಾರ ಕಚೇರಿಯ ಮುಂದೆ ಎರಡು ನೀರಿನ ಅರವಟ್ಟಿಗಳನ್ನು ನಿರ್ಮಿಸಿ ಕಚೇರಿಗೆ ಬರುವ ಸಾರ್ವಜನಿಕರ ನೀರಿನ ದಾಹವನ್ನು ತೀರಿಸಲು ಮುಂದಾಗಿರುವುದು ಆ ಸಂಘಟನೆಯ ಕಾರ್ಯಕರ್ತರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.ತಹಶೀಲ್ದಾರ ನಿಂಗಪ್ಪ ಬಿರಾದಾರ ಅರವಟ್ಟಿಗೆಯನ್ನು ಉದ್ಘಾಟಿಸಿ ಮಾತನಾಡಿ ಬೇಸಿಗೆ ಬೀಸಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಬಿಸಲಿನ ತಾಪವನ್ನು ತಣಿಸಲು ನೀರಿನ ಅರವಟ್ಟಿಗೆಗಳು ಅವಶ್ಯ. ನೀರಿನ ದಾಹ ತೀರಿಸುವುದು ಪುಣ್ಯದ ಕಾರ್ಯ ಅಂತಹ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಕೆಯ ಅಧ್ಯಕ್ಷರು ಮತ್ತು ಕಾರ್ಯಕರ್ತರು ಮಾಡಿದ್ದು ನಿಜಕ್ಕೂ ಸ್ವಾಗತಾರ್ಹವಾಗಿದೆ. ಇನ್ನು ಇಂತಹ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಈ ಸಂಘಟನೆಯಿಂದ ನಡೆಯಲಿ ಎಂದು ಶುಭ ಹಾರೈಸಿದರು.ಎಚ್.ಶಿವರಾಮೇಗೌಡ್ರ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಶರಣು ಗಾಣಗೇರ ಮಾತನಾಡಿ ಈ ಬಾರಿ ಮಳೆಯ ಅಭಾವ ದಿಂದ ಬೇಸಿಗೆ ಬಿಸಿಲು ಜೋರಾಗಿದೆ. ಬೇಸಿಗೆಯಲ್ಲಿ ಅನ್ನಕ್ಕಿಂತಲ್ಲೂ ನೀರು ಬಹಳ ಮುಖ್ಯ. ತಹಶೀಲ್ದಾರ ಕಚೇರಿಯಲ್ಲಿ ನೀರಿನ ಬರ ಎನ್ನುವ ಸುದ್ದಿಯನ್ನು ಓದಿದೆ. ನಿತ್ಯ ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಇಲ್ಲಿಗೆ ಜನರು ಬರುತ್ತಾರೆ ಅವರ ನೀರಿನ ದಾಹವನ್ನು ತಣಿಸಲು ಅರವಟ್ಟಿಗೆಯನ್ನು ನಿರ್ಮಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ತಾಲೂಕಾ ಕಾರ್ಮಿಕ ಘಟಕದ ಅಧ್ಯಕ್ಷ ಸಿದ್ದಪ್ಪ ಮೂಲಿಮನಿ, ತಾಲೂಕ ಗೌರವ ಕಾರ್ಯದರ್ಶಿಗಳಾದ ಸಂಗಣ್ಣ ನೇಗಲಿ,ತಮ್ಮಣ್ಣ ಸೂಡಿ, ಉಪಾದ್ಯಕ್ಷ ಶ್ರೀಕಾಂತ ಗಗನದ,ಪ್ರಧಾನ ಕಾರ್ಯದರ್ಶಿ ಹುಸನಪ್ಪ ಪೂಜಾರಿ,ಇಳಕಲ್ಲ ಕರವೇ ಮಹಿಳಾ ಘಟಕದ ಉಪಾಧ್ಯಕ್ಷೆ ಅನುಸೂಯ ಐಲಿ,ಪ್ರಧಾನ ಕಾರ್ಯದರ್ಶಿ ರೂಪ ಮಾನಸ್,ಇದ್ದಲಗಿ ಗ್ರಾಮ ಘಟಕದ ಅಧ್ಯಕ್ಷ ಬಸಯ್ಯ ಮಂಟೇದೇವರಮಠ, ಸಂಘಟನಾ ಕಾರ್ಯದರ್ಶಿ ಅಶೋಕ ನಾಡಗೌಡ್ರ ಸೇರಿದ್ದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ