“ಕಗ್ಗತ್ತಲ ದಾರಿಗೆ ವಿಜ್ಞಾನದ ದೀವಿಗೆ”…..

ಮುಂಜಾನೆಯ ಪೇಸ್ಟ್ ಬ್ರಶ್
ಬಿಸಿ ಬಿಸಿ ಕಾಫಿ ಕಪ್
ತಿಂಡಿ ತಟ್ಟೆ, ಪುಟ್ಟ ಬಟ್ಟೆ
ಕಾಲಿಂಗ್ ಬೆಲ್ ಹೊರಟ ಬೈಕ್
ಎಲ್ಲವೂ ವಿಜ್ಞಾನದ ಕೊಡುಗೆ
ಬರೆಯುವ ಪೆನ್ ಗೀಚುವ ಪುಸ್ತಕ
ತೆಗೆಯುವ ಫೈಲ್ ಕೈಯಾಡಿಸುವ ಮೌಸ್
ರಿಂಗಣಿಸುವ ಫೋನ್ ಕುಳಿತ ಚೇರ್
ತಿರುಗುವ ಫ್ಯಾನ್ ಸುಂದರ ಕೊಠಡಿ
ಎಲ್ಲವೂ ವಿಜ್ಞಾನದ ಕೊಡುಗೆ.
ಗಿಜಿ ಗಿಜಿ ಗುಡುವ ಬಸ್ ಸ್ಟ್ಯಾಂಡ್,
ಡಿಜೆ ಸೌಂಡ್ ಕರ್ಕಶ ಹಾರನ್
ಉಸಿರುಗಟ್ಟಿಸುವ ಹೊಗೆ, ಟ್ರಾಫಿಕ್ ಜಾಮ್
ಕೆರೆಗೆ ಹರಿಯುವ ಕಾರ್ಖಾನೆ ನೀರು
ಎಲ್ಲವೂ ವಿಜ್ಞಾನದ ಕೊಡುಗೆ.
ಬೇಡವೇ ಬೇಡ ಇಂದಿನ ಯುಗ ಎಂದು
ಕಣ್ಮುಚ್ಚಿ ಹಿಂದಿರುಗಿ ನೋಡು
ಅದೇ ಹಳೆ ಶಿಲಾಯುಗದ ಕಥೆ
ಸೊಪ್ಪು ಸೆದೆ ಸುತ್ತಿಕೊಂಡ ಮನುಜ
ಗೆಡ್ಡೆ ಗೆಣಸು ತಿಂದ ಬದುಕು
ರಕ್ತಸಿಕ್ತ ಪ್ರಾಣಿ ಕೊಂದು
ಹಸಿಯ ಮಾಂಸ ತಿಂದ ರೀತಿ
ಚಳಿ ಮಳೆಗೆ ನೆಂದ ರೀತಿ
ಗುಡುಗು ಮಿಂಚು ಕಂಡು ಹೆದರಿ
ಅಡಗಿ ಕುಳಿತ ಬಂಡೆ, ಪೊಟರೆ!
ಮನುಜ ಕಣ್ ತೆರೆದು ನೋಡು
ಈಗ ಎಷ್ಟೊಂದು ಅಜಗಜಾಂತರ!
ಇದುವೇ ನಾಗರಿಕತೆ.
ವಿಜ್ಞಾನವು ನಮಗೆ ವರವು
ಸದ್ಬಳಕೆ ಮಾಡಿದರೆ ಬೆಳಕು
ದುರ್ಬಳಕೆ ಆದರೆ ಅದೇ ಕಗ್ಗತ್ತಲು!
ಮಹಮದ್ ಅಲಿ ಎಂ.ಐ
ಶಿಕ್ಷಕರು, ಚಳ್ಳಕೆರೆ