ಮಹಾನ ಬಿಸಲಿಗೆ ಬತ್ತಿ ಬರಿದಾದ ಮಲಪ್ರಭೆ ಒಡಲು:ಹನಿ ನೀರಿಗಾಗಿ ಹಾಹಾಕಾರ – ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.

ಹುನಗುಂದ ಮಾರ್ಚ್.17

ಮಳೆಯ ಅಭಾವ ದಿಂದ ಮಹಾ ಬಿಸಿಲಿಗೆ ಈ ಬಾರಿ ಫಬ್ರುವರಿ ಕೊನೆಯ ವಾರದಲ್ಲೇ ಮಲಪ್ರಭೆಯ ನದಿಯ ಒಡಲು ಬತ್ತಿ ಬರಿದಾಗಿದ್ದು.ನೀರಿಲ್ಲದೇ ಮಲಪ್ರಭೆ ಭಣಗುಡುತ್ತಿರುವ ಹಿನ್ನೆಲ್ಲೆಯಲ್ಲಿ ನದಿ ಪಾತ್ರದಲ್ಲಿರುವ ತಾಲೂಕಿನ ಮೂವತ್ತಕ್ಕೂ ಹೆಚ್ಚು ಗ್ರಾಮಗಳ ರೈತರು ಸಧ್ಯ ಕಂಗಾಲಾಗಿದ್ದರೇ ಕುಡಿಯುವ ನೀರಿಗಾಗಿ ಜನ ಜಾನುವಾರಗಳು ತಾತ್ವರ ಪಡುವ ಸ್ಥಿತಿ ನಿರ್ಮಾಣವಾಗಿದೆ.ಹೌದು ಮಳೆಗಾಲದಲ್ಲಿ ಮಲಪ್ರಭೆ ತನ್ನ ಒಡಲು ತುಂಬಿಕೊಂಡು ಮಹಾಪುರವನ್ನು ಸೃಷ್ಠಿ ಮಾಡಿ ನದಿ ಪಾತ್ರದ ಜನರನ್ನು ನಿದ್ದೆಗೆಡಿಸುವ ನದಿಯು ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ಬೀಕರ ಬರಗಾಲ ಆವರಿಸಿ ನದಿಯಲ್ಲಿ ಅಲ್ಪ ಪ್ರಮಾಣದಲ್ಲಿ ತುಂಬಿಕೊಂಡಿದ್ದ ನೀರು ಬೇಸಿಗೆಯ ಮಹಾನ ಬಿಸಿಲಿಗೆ ಫೆಬ್ರುವರಿ ಮೊದಲವಾರ ದಿಂದಲೇ ಮಲಪ್ರಭೆಯು ಭೂಮಿಯೊಳಗೆ ಅಡಗಿ ಹೋಗಿದ್ದಾಳೆ. ಇದರಿಂದ ನದಿಯ ಎಡ ಬಲ ದಂಡೆಯಲ್ಲಿರುವ ಸಾವಿರಾರು ಹೆಕ್ಟರ್ ಜಮೀನಗಳಲ್ಲಿ ಶೇಂಗಾ, ಕಬ್ಬು, ಹಲಸಂದಿ ಸೇರಿದ್ದಂತೇ ಅನೇಕ ಬೆಳಗಳು ನದಿಯಲ್ಲಿ ನೀರು ಖಾಲಿಯಾಗಿದ್ದರಿಂದ ಬೆಳಗಳು ಒಣಗುವ ಸ್ಥಿತಿಗೆ ತಲುಪಿದ್ದು. ಮಲಪ್ರಭೆಯನ್ನೇ ನಂಬಿದ ರೈತರಿಗೆ ಸಧ್ಯ ಆತಂಕದ ಛಾಯೆ ಆವರಿಸಿ ಬರಗಾಲದ ಈ ಸ್ಥಿತಿಯಲ್ಲಿ ಅಲ್ಪ ಸ್ವಲ್ಪ ಬೆಳಯನ್ನಾದರೂ ಉಳಿಸಿ ಕೊಳ್ಳಲು ಬರಿದಾದ ನದಿಯಲ್ಲಿ ಬೊಗಸೆ ನೀರಿಗಾಗಿ ಚಿಕ್ಕ ಚಿಕ್ಕ ಒರತೆಗಳನ್ನು ತೋಡುವ ಪರಸ್ಥಿತಿ ಬಂದೊದಗಿದೆ.ಜನ ಜಾನುವಾರು-ಪಶು ಪಕ್ಷಿಗಳ ನೀರಿಗಾಗಿ ಹಾಹಾಕಾರ-ಒಂದು ಕಡೆ ನೆತ್ತಿ ಸುಡುವ ಬಿಸಲು ಇನ್ನೊಂದಡೆ ಬತ್ತಿ ಬರಿದಾದ ನದಿ,ಭಯಂಕರ ಬಿಸಿಲಿನ ತಾಪಕ್ಕೆ ತನ್ನೊಡಲಿನ ಮಕ್ಕಳಿಗೆ ನೀರು ನೀರು ಎನ್ನುವ ಪರಿಸ್ಥಿತಿಯನ್ನು ಸೃಷ್ಠಿ ಮಾಡುವಂತೆ ಮಲಪ್ರಭೆ ಸಂಪೂರ್ಣ ಬತ್ತಿ ಬರಿದಾಗಿದ್ದಾಳೆ. ಮಲಪ್ರಭೆಯ ಒಡಲಿನಲ್ಲಿ ತೊಟ್ಟು ನೀರಿಗಾಗಿ ಜನ ಜಾನುವಾರುಗಳು ಮತ್ತು ಪಶು ಪಕ್ಷಿಗಳು,ಆಡು,ಕುರಿಗಳು ನೀರಿನ ದಾಹವನ್ನು ತೀರಿಸಿಕೊಳ್ಳಲು ಮರಭೂಮಿಯಲ್ಲಿ ಓಯಾಸಿಸ್ ಹುಡಿಕಿದ್ದಂತೆ ಹುಡಕಾಡುವ ಸ್ಥಿತಿ ನಿರ್ಮಾಣವಾಗಿದೆ.ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುವ ಸಾಧ್ಯತೆ-ಈ ಬಾರಿ ಮಳೆಯಿಲ್ಲದೇ ನದಿ,ಭಾವಿ,ಹಳ್ಳ ಕೊಳ್ಳಗಳು ಸಂಪೂರ್ಣ ಬತ್ತಿ ಹೋಗಿದ್ದು.ಅದರಲ್ಲೂ ಕೊಳವೆ ಭಾವಿಗಳು ಕೂಡಾ ಮಳೆಯಿಲ್ಲದೇ ಅಂತಂರ್ಜಲ ಕಡಿಮೆಯಾಗಿ ನಿಂತು ಹೋಗುವ ಸ್ಥಿತಿಗೆ ಬಂದಿವೆ.ಇದರಿಂದ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.ಹನಿ ನೀರಿಗೂ ಜನರು ಪರದಾಡುವ ಸ್ಥಿತಿ ಬರುತ್ತಾ ಎನ್ನುವ ರೀತಿಯಲ್ಲಿ ಈ ಬಾರಿಯ ಬಿಸಿಲು ಸೃಷಿಯಾಗುತ್ತಿದೆ.ಬರಿದಾದ ಮಲಪ್ರಭೆ ಅಕ್ರಮ ಮರಳು ದಂಧೆಕೋರ ತಾಣವಾಗಲಿದೆ-ಮಲಪ್ರಭೆ ಸಂಪೂರ್ಣ ಬರಿದಾಗಿ ಕಾಯ್ದು ಕುಳಿತ ಅಕ್ರಮ ಮರಳು ದಂಧೆಕೋರರಿಗೆ ಹೇಳಿ ಮಾಡಿಸಿದ ಸಮಯವಾಗಿದೆ. ಇಷ್ಟು ದಿನ ಮರಳು ದಂಧೆಕೋರರು ನದಿಯ ತಟ್ಟದಲ್ಲಿದ್ದ ಹೊಲಗಳಲ್ಲಿ ಹಳ್ಳ,ಕೊಳ್ಳಗಳಲ್ಲಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದರು. ಸಧ್ಯ ಮಲಪ್ರಭೆ ನದಿಯ ನೀರು ಬತ್ತಿದ್ದರಿಂದ ಇನ್ನು ನದಿಯ ಒಡಲಿಗೆ ಕೈ ಹಾಕಿ ನಿತ್ಯ ನಿರಂತರ ಮರಳು ಲೋಟಿ ಮಾಡುವ ಸಮಯ ಒದಗಿ ಬಂದಿದೆ.***ಬಾಕ್ಸ್ ಸುದ್ದಿ****ಮಲಪ್ರಭೆ ನೀರು ಮಾರ್ಚ ಕೊನೆಯವರಿಗೂ ಇರುತ್ತೇ ಎಂದುಕೊಂಡು ಈ ಭಾಗದ ರೈತರು ಹಲಸಂದಿ,ಶೇಂಗಾ ಸೇರಿದ್ದಂತೆ ದ್ವಿದಳ ದಾನ್ಯಗಳನ್ನು ಬಿತ್ತನೆ ಮಾಡಿದ್ದು ಸಧ್ಯ ನದಿಯ ನೀರು ಖಾಲಿಯಾಗಿ ಒಣಗುತ್ತಿವೆ.ಬೆಳೆ ಉಳಿಸಿಕೊಳ್ಳಲು ಒರತೆ ತೋಡುವ ಸ್ಥಿತಿ ಬಂದಿದೆ.ಮಂಗಳಪ್ಪ ವಡಗೇರಿ ರೈತರು ಮೇದಾನಾಪೂರ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button