ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಹೇಳುವಂತ ತಾಯಿ ಇರಬೇಕು-ಸತೀಶ್ ಶೆಟ್ಟಿ.
ಕಂದಗಲ್ಲು ಮಾರ್ಚ್.18





ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕಂದಗಲ್ಲು ಗ್ರಾಮದಲ್ಲಿ ದಿ 18 ಮಾರ್ಚ್ 2024 ಸೋಮವಾರ ಕಾರ್ಯಕ್ಷೇತ್ರದ ವರಸಿದ್ಧಿವಿನಾಯಕ ಜ್ಞಾನ ವಿಕಾಸ ಕೇಂದ್ರದಲ್ಲಿ 3 ತಿಂಗಳುಗಳ ಕಾಲ ನಡೆಸಿದ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಗಂಗಾ ನಾಯ್ಕ ಉದ್ಘಾಟಕರಾಗಿ ಹೊಸಪೇಟೆ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಸತೀಶ್ ಶೆಟ್ಟಿ ಹಾಗೂ ಮುಖ್ಯ ಅತಿಥಿಗಳಾಗಿ ಕೇಂದ್ರದ ಹಿರಿಯರಾದ ಶ್ರೀಮತಿ ರತ್ನಮ್ಮ ಹಾಗೂ ಗ್ರಾಮ ಪಂಚಾಯತ ಸೆಕ್ರೆಟರಿ ಕೊಟ್ರಗೌಡ್ರ ಮತ್ತು ಕೊಟ್ಟೂರು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಯುತ ನವೀನ್ ಕುಮಾರ ಹೆಚ್ ಡಿ ಟೈಲರಿಂಗ್ ತರಬೇತಿ ಶಿಕ್ಷಕಿಯಾದ ಶ್ರೀಮತಿ ಶ್ರುತಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಸಾವಿತ್ರಿ ಎನ್ ಜೆ ಸೇವಾ ಪ್ರತಿನಿಧಿ ಗಂಗಮ್ಮ ಮತ್ತು vle ಸವಿತಾ ಹಾಗೂ ಕೇಂದ್ರದ ಸರ್ವ ಸದಸ್ಯರ ಸಮ್ಮುಖದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಹೊಸಪೇಟೆ ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಅವರು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವು ಮಾತೃಶ್ರೀ ಡಾ”ಹೇಮಾವತಿ ವೀ ಹೆಗ್ಗಡೆ ಅವರ ಕನಸಿನ ಕೂಸು ಎಂದೇ ಕರೆಯಲ್ಪಡುತ್ತದೆ ಎಂದು ಹೇಳಿದರು.ಈ ಕಾರ್ಯಕ್ರಮವು ವಿಶೇಷವಾಗಿ ಮಹಿಳೆಯರ ಅಭಿವೃದ್ಧಿಗಾಗಿ ಇರುವ ಕಾರ್ಯ ಕ್ರಮ. ಈ ಕಾರ್ಯಕ್ರಮದಡಿಯಲ್ಲಿ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ನೀಡಿದ್ದು ಎಲ್ಲಾ ಸದಸ್ಯರು ಈ ತರಬೇತಿಯ ಸದುಪಯೋಗವನ್ನು ಪಡೆದು ಕೊಳ್ಳಬೇಕು ಜೊತೆಗೆ ಕುಟುಂಬದ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುವುದು ಎಂದು ಹೇಳಿದರು. ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಸಂಸ್ಕಾರ ನೀಡುವುದು ತಾಯಿಯ ಜವಾಬ್ದಾರಿಯಾಗಿದೆ ಕುಟುಂಬದ ಆಗು ಹೋಗುಗಳ ಬಗ್ಗೆ ತಿಳಿದುಕೊಂಡು ವ್ಯವಹಾರ, ಉದ್ಯೋಗ ಮಾಡುವದು ಇದು ಪ್ರತಿಯೊಬ್ಬ ಮಹಿಳೆಯ ಜವಾಬ್ದಾರಿ ಎಂದು ಹೇಳಿದರು ಜೊತೆಗೆ ತರಬೇತಿ ಪೂರೈಸಿದ 25 ಜನ ಸದಸ್ಯರಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ..ಕೊಟ್ಟೂರು