ಸಮಾಜ ಸೇವಕ ದಿನೇಶ್ ಖಾರ್ವಿ ಅವರಿಗೆ – ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಮನವಿ.
ಉಡುಪಿ ಸ.03

ತಮ್ಮ ಪ್ರಾಣದ ಹಂಗು ತೊರೆದು ಸಮಾಜ ಸೇವೆ ಮಾಡುತ್ತಿರುವ ಮುಳುಗು ತಜ್ಞ ಹಾಗೂ ಜೀವ ರಕ್ಷಕ ದಿನೇಶ್ ಖಾರ್ವಿ, ಲೈಟ್ ಹೌಸ್, ಗಂಗೊಳ್ಳಿ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ (ಜೈ ಭೀಮ್ ನೀಲಿಪಡೆ, ಗಂಗೊಳ್ಳಿ, ಕುಂದಾಪುರ, ಉಡುಪಿ ಜಿಲ್ಲೆ) ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಸೇವೆಗಳ ವಿವರ:-
ದಿನೇಶ್ ಖಾರ್ವಿ ಅವರು ಯಾವುದೇ ಜಾತಿ, ಪಂಥ, ಭೇದವಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿದ್ದಾರೆ. ಅವರು ಇದುವರೆಗೆ ಸಮುದ್ರ, ನದಿ, ಜಲಪಾತ, ಬಾವಿ ಮತ್ತು ಕೆರೆಗಳಿಂದ 200 ಕ್ಕೂ ಹೆಚ್ಚು ಮೃತ ದೇಹಗಳನ್ನು ಮೇಲೆತ್ತಿ ಸಂಬಂಧಪಟ್ಟ ಕುಟುಂಬಗಳಿಗೆ ಹಸ್ತಾಂತರಿಸಿ ಮೃತರಿಗೆ ಮುಕ್ತಿ ನೀಡಿದ್ದಾರೆ. ಈ ಮೂಲಕ ಅವರು ನೊಂದ ಕುಟುಂಬಗಳಿಗೆ ಸಾಂತ್ವನ ನೀಡುವ ಮಹತ್ತರ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಮನವಿ ಸಲ್ಲಿಕೆ:-
ದಿನೇಶ್ ಖಾರ್ವಿ ಅವರ ಈ ಅಪೂರ್ವ ಸಮಾಜ ಸೇವೆಯನ್ನು ಗುರುತಿಸಿ, ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಕೋರಿ ದಲಿತ ಸಂಘರ್ಷ ಸಮಿತಿಯ (ಜೈ ಭೀಮ್ ನೀಲಿಪಡೆ) ಪ್ರತಿನಿಧಿಗಳು ಕರ್ನಾಟಕ ಸರ್ಕಾರದ ಸಭಾಪತಿಗಳಾದ ಸನ್ಮಾನ್ಯ ಶ್ರೀ ಯು.ಟಿ. ಖಾದರ್ ಫರೀದ್ ಅವರಿಗೆ ಲಿಖಿತ ಮನವಿ ಪತ್ರವನ್ನು ಸಲ್ಲಿಸಿದರು. ಈ ಪತ್ರದಲ್ಲಿ, ದಿನೇಶ್ ಖಾರ್ವಿ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅವರಿಗೆ ಸೂಕ್ತ ಗೌರವ ನೀಡುವಂತೆ ಮನವಿ ಮಾಡಲಾಗಿದೆ.
ಸಮಿತಿಯು, ಇಂತಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಸಮಾಜಕ್ಕೆ ಪ್ರೇರಣೆಯಾಗಿದೆ ಮತ್ತು ಇತರರೂ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಲು ಇದು ಸ್ಫೂರ್ತಿಯಾಗಲಿದೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಸಮರ್ಥಿಸಿಕೊಂಡಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ