ಹೊಟ್ಟೆ ನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾದ ಯುವತಿ.
ಹುನಗುಂದ ಮಾರ್ಚ್.19

ಹೊಟ್ಟೆ ನೋವು ತಾಳಲಾರದೇ ಮನ ನೊಂದು ಯುವತಿಯೊರ್ವಳು ತನ್ನ ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಸೋಮವಾರ ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಹುನಗುಂದ ಪಟ್ಟಣದ ನವನಗರದ ಸ್ಟೇಡಿಯಂ ಹಿಂದಗಡೆ ನಡೆದಿದೆ.ಮೂಲತಃ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದವರಾಗಿದ್ದು. ಹಾಲಿವಸ್ತಿ ಹುನಗುಂದ ಪಟ್ಟಣದ ನವನಗರ ಸ್ಟೇಡಿಯಂ ಹಿಂದಗಡೆಯ ನಿವಾಸಿ ರತ್ನಾ ಅಂದಪ್ಪ ಗಾಣಗೇರ (೨೮) ಆತ್ಮಹತ್ಯೆಗೆ ಶರಣಾದ ಯುವತಿ.ಸ್ಥಳಕ್ಕೆ ಹುನಗುಂದ ಠಾಣೆಯ ಸಿಪಿಐ ಸುನೀಲ ಸವದಿ, ಪಿಎಸ್‌ಐ ಲಕ್ಕಪ್ಪ ಜೋಡಟ್ಟಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ