ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ – ಪಿಎಸ್ಐ ಲಕ್ಕಪ್ಪ ಜೋಡಟ್ಟಿ.
ಹುನಗುಂದ ಮಾರ್ಚ್.21





ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಜೀವ ಹಾನಿಯಾಗುವುದ್ದನ್ನು ತಪ್ಪಿಸಿ ಎಂದು ಹುನಗುಂದ ಪೊಲೀಸ್ ಠಾಣೆಯ ಪಿಎಸ್‌ಐ ಲಕ್ಕಪ್ಪ ಜೋಡಟ್ಟಿ ಸಾರ್ವಜನಿಕರಿಗೆ ಹೆಲ್ಮೆಟ್ ಜಾಗೃತಿ ಮೂಡಿಸಿದರು.ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್ ಜಾಗೃತಿ ಮೂಡಿಸಿ ಮಾತನಾಡಿದ ಅವರು, ಕಳೆದ ವಾರ ಹುನಗುಂದ ಪಟ್ಟಣದ ಹೊರ ವಲಯದಲ್ಲಿ ಎರಡರಿಂದ ಮೂರು ಅಪಘಾತ ಪ್ರಕರಣಗಳು ನಡೆದಿದ್ದು.ಅದರಲ್ಲಿ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ನಡೆಸುತ್ತಿರುವರೇ ಮೃತಪಟ್ಟಿದ್ದು. ಅದಕ್ಕಾಗಿ ಸರ್ಕಾರ ಬೈಕ್ ಸವಾರ ಮತ್ತು ಹಿಂಬದಿಯ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಗೊಳಿಸಿದರೂ ಕೂಡಾ ಬೈಕ್ ಸವಾರರು ಹೆಲ್ಮೆಟ್ ಧರಸದೇ ದ್ವಿಚಕ್ರ ವಾಹನ ನಡೆಸುವುದರಿಂದ ಅಫಘಾತ ಸಂಭವಿಸಿ ತೆಲೆ ಪೆಟ್ಟು ಬಿದ್ದು ಸಾವು ನೋವುಗಳು ಸಂಭವಿಸುತ್ತಿವೆ.ರಸ್ತೆ ಅಪಘಾತದಲ್ಲಿ ಸಾವಿಗೀಡಾದವರಲ್ಲಿ ಶೇ ೬೨% ರಷ್ಟು ಜನರು ತೆಲೆಗೆ ಪೆಟ್ಟಾಗಿಯೇ ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನ ಸವಾರ ಅಪಘಾತ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ್ದರೇ ಬದಕುಳಿಯುವ ಸಾಧ್ಯತೆ ಶೇ ೮೦% ರಷ್ಟು ಇದೆ. ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೆಟ್ ಬಳಕೆ ಮಾಡುವ ಮೂಲಕ ತಮ್ಮ ಅಮೂಲ್ಯವಾದ ಜೀವವನ್ನು ರಕ್ಷಿಸಿ ಕೊಳ್ಳುವುದರ ಜೊತೆಗೆ ತಮ್ಮ ಕುಟುಂಬ ಭದ್ರತೆಯನ್ನು ಕಾಪಾಡಿ ಕೊಳ್ಳಬೇಕು.ಒಂದು ವೇಳೆ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ನಡೆಸಿದರೇ ಮೋಟಾರ್ ಕಾಯ್ದೆ ೧೯೮೮ ಪ್ರಕಾರ ಕಾನೂನು ಕ್ರಮ ಜರುಗಿಸ ಬೇಕಾಗುವುದು. ಇನ್ನು ಚಿಕ್ಕ ಚಿಕ್ಕ ಮಕ್ಕಳು ಬೈಕ್ ಓಡಿಸುವುದು ಮತ್ತು ಅವರ ಕೈಯಲ್ಲಿ ಬೈಕ್ ಕೊಡುವುದು ಅಪರಾಧವಾಗಿದೆ. ಜೀವ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದರು.ಈ ಸಂದರ್ಭದಲ್ಲಿ ಮಹಾಂತೇಶ ಹಳ್ಳೂರ,ಬಸವರಾಜ ಗೊಣ್ಣಾಗರ, ಲಕ್ಷ್ಮಣ ಗಾಯಕವಾಡ, ವಿಜಯ ಭಾವಿಕಟ್ಟಿ, ಅಮರೇಶ ಬಂಡರಗಲ್ಲ, ರಾಘು ಬಿಸನಾಳ, ಪ್ರಕಾಶ ಸಿಂಧೆ, ಸಮೀರ ಸುತಗುಂಡರ, ಮಲ್ಲಪ್ಪ ಮಜ್ಜಗಿ, ಸಿದ್ದಪ್ಪ ದೊಡಮನಿ, ಪೊಲೀಸ್ ಸಿಬ್ಬಂದಿಗಳಾದ ಬಸವರಾಜ ಗೌಡರ, ಸಿ.ಸಿ.ಪಾಟೀಲ ಸೇರಿದ್ದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ