ಗ್ರಾಮೀಣ ಪ್ರತಿಭೆ ಎಂ.ಚಂದನಗೆ ಎಂ.ಎಸ್ಸಿ ಅಗ್ರಿಯಲ್ಲಿ ಚಿನ್ನದ ಪದಕ.
ಕೆ. ಕೋಡಿಹಳ್ಳಿ ಮಾರ್ಚ್.24

ಕೊಟ್ಟೂರು ತಾಲೂಕಿನ ಕೆ. ಕೋಡಿಹಳ್ಳಿ ಎಂಬ ಕುಗ್ರಾಮದ ರೈತ ಕುಟುಂಬದ ಮೂಲಿಮನಿ ಬಸವರಾಜ ಮತ್ತು ಭಾರತಿ ದಂಪತಿಗಳ ಪ್ರಥಮ ಸುಪುತ್ರಿ, ಎಂ.ಚಂದನ ಎಂಬ ವಿದ್ಯಾರ್ಥಿ ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಎಂಎಸ್ಸಿ ಕೃಷಿ ಅರ್ಥಶಾಸ್ತ್ರದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮೂಡಿಗೆರಿಸಿ ಕೊಂಡಿದ್ದಾಳೆ. ಘನ ರಾಜ್ಯಪಾಲರಾದ ಕೆ ಥಾವರ್ ಚಂದ್ ಗೇಹಲ್ಲೋಟ್ ಪ್ರಶಸ್ತಿ ಪ್ರಧಾನ ಮಾಡಿದರು. ಹಾಗೂ ಕೃಷಿ ಸಚಿವರಾದ ಚಲುವರಾಯ ಸ್ವಾಮಿ, ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಶ್ರೀ ಡಾ ಎಸ್ ವಿ ಸುರೇಶ ಇವರು ಉಪಸ್ಥಿತರಿದ್ದರು.ವಿದ್ಯಾರ್ಥಿಯ ಸಾಧನೆಗೆ ಮಹಾದೇವ ತಾತನವರ ಆಶೀರ್ವಾದ ಮತ್ತು ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ, ತಂದೆ ತಾಯಿ ಬಂಧುಗಳು ಹಾಗೂ ಕೆ.ಕೋಡಿಹಳ್ಳಿ ಮತ್ತು ಕೋಗಳಿ ಗ್ರಾಮದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಉನ್ನತ ವ್ಯಾಸಂಗಕ್ಕೆ ಶುಭ ಹಾರೈಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ ಕೊಟ್ಟೂರು