ಕೂಡ್ಲಿಗಿ ಪತ್ರಕರ್ತರ ಧ್ವನಿ ಸಂಘಟನೆಯಿಂದ – ನೀರಿನ ಅರವಟ್ಟಿಗೆ.

ಕೂಡ್ಲಿಗಿ ಮಾರ್ಚ್.24

ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದಿಂದ, ಪಟ್ಟಣದ ಅಂಬಾಲಿ ಶುದ್ಧ ಕುಡಿಯೋ ನೀರಿನ ಘಟಕ ಸಹಯೋಗ ದೊಂದಿಗೆ. ಪಟ್ಟಣದ ಮದಕರಿ ವೃತ್ತ ಹಾಗೂ ಬೆಂಗಳೂರು ರಸ್ಥೆಯ ಪುನೀತ್ ಪುಥ್ಥಳಿ ಬಳಿ, ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಸೇವ‍ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಶುದ್ಧ ಕುಡಿಯುವ ನೀರಿ ಅರವಟ್ಟಿಗೆ ಸೇವಾ ಕೇಂದ್ರಗಳನ್ನು, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಉದ್ಘಾಟನೆ ಮಾಡಿ ಮಾತನಾಡಿದರು. ಕನಾರ್ಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ, ಉತ್ತಮ ಪತ್ರಕರ್ತರನ್ನೊಳ ಗೊಂಡಿದೆ. ಸಾಮಾಜಿಕ ಕಳಕಳಿ ಹೊಂದಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದಲ್ಲಿನ ಅಂಕು ಡೊಂಕುಗಳನ್ನು ಸರಿಪಡಿಸುವ ಮಹತ್ತರ ಕಾರ್ಯದಲ್ಲಿ ನಿರತವಾಗಿದೆ. ಜೊತೆಗೆ ಬರಗಾಲದ ಬೇಸಿಗೆಯ ಬೇಗೆಯ ಸಂದರ್ಭದಲ್ಲಿ, ಸಾರ್ವಜನಿಕರಲ್ಲಿನ ನೀರಿನ ದಾಹ ತೀರಿಸುವ ಸಲುವಾಗಿ. ಪಟ್ಟಣದ ಪ್ರಮುಖ ವೃತ್ತಗಳಾದ ಅತಿ ಹೆಚ್ಚು ಜನ ಸಂಧಿಸುವ ಮದಕರಿ ವೃತ್ತ, ಹಾಗೂ ಶ್ರೀಆಂಜನೇಯ ಪಾದಗಟ್ಟೆ ಹತ್ತಿರದ ಪುನೀತ್ ಪುಥ್ಥಳಿ ಬಳಿ. ಅಂದರೆ ಎರಡು ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಸೇವಾ ಸೇವಾ ಕೇಂದ್ರಗಳನ್ನು, ಪ್ರಾರಂಭಿಸುವ ಮೂಲಕ ಮಾನವೀಯತೆ ಮೆರೆದಿರುವುದು ಶ್ಲಾಘನೀಯವಾಗಿದೆ ಎಂದರು. ಪಟ್ಟಣ ಪಂಚಾಯ್ತಿ ಸದಸ್ಯರಾದ ತಾಳಸ ವೆಂಕಟೇಶ ಸೇರಿದಂತೆ ವಿವಿಧ ಸದಸ್ಯರು, ಕ.ಕಾ.ಪ.ಧ್ವನಿ ಸಂಘದ ಅಧ್ಯಕ್ಷ ಬಾಣದ ಮೂರ್ತಿ ಸೇರಿದಂತೆ, ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರಾದ, ಅನಿಲ್ ಕುಮಾರ ನಾಯ್ಡು, ಗುನ್ನಳ್ಳಿ ನಾರಾಯಣ. .ಜಯಮ್ಮರ ರಾಘವೇಂದ್ರ, ಬಾಣದ ಮೂಗಪ್ಪ ಹಾಗೂ ಸರ್ವ ಸದಸ್ಯರು. ಪಟ್ಟಣದ ಅಂಬಾಲಿ ಶುದ್ಧ ಕುಡಿಯುವ ನೀರಿನ ಘಟಕದ ಬಾಣದ ಹನುಮಂತಪ್ಪ, ಆಟೋ ಚಾಲಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು. ಪಟ್ಟಣದ ಹಿರಿಯ ನಾಗರಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button