ಗುಡೆಕೋಟೆಯಲ್ಲಿ ರೈತರ ಪಶುಗಳಿಗೆ ಮೇವು ವಿತರಣಾ ಕೇಂದ್ರ ಉದ್ಘಾಟನೆ.
ಗುಡೆಕೋಟೆ ಮಾರ್ಚ್.25

ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಹಶೀಲ್ದಾರ್ ರಾಜ್ ಪಿರಂಗಿ ರೈತರಿಗೆ ಮೇವು ವಿತರಿಸಿ, ಮೇವು ಬ್ಯಾಂಕ್ ಉದ್ಘಾಟಿಸಿದರು. ಕಳೆದ ವರ್ಷ ಮುಂಗಾರು, ಹಿಂಗಾರು ವೈಫಲ್ಯ ದಿಂದ ತಾಲ್ಲೂಕು ಬರ ಪೀಡಿತವಾಗಿದ್ದು, ಪಶು ಸಂಗೋಪನೆ ಇಲಾಖೆಯ ಸಮೀಕ್ಷೆಯಂತೆ ಕೂಡ್ಲಿಗಿ ತಾಲೂಕಿನ ವ್ಯಾಪ್ತಿಯಲ್ಲಿ ಮೇವಿನ ಕೊರತೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಇಲ್ಲಿ ಮೇವಿನ ಬ್ಯಾಂಕ್ ತೆರೆಯಲಾಗಿದೆ ಎಂದು ಹೇಳಿದರು. ನಿಯಮಾನುಸಾರ ಪ್ರತಿ ಜಾನುವಾರಿಗೆ ನಿರ್ದಿಷ್ಟ ತೂಕದ ಮೇವನ್ನು ವಿತರಿಸಲಾಗುತ್ತಿದೆ. ಮೇವಿನ ಕೊರತೆ ಇರುವ ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಪ್ರತಿ ಜಾನುವಾರಿಗೆ ಕೆಜಿಯಂತೆ ಮೇವು ವಿತರಿಸಲಾಗುತ್ತದೆ. ರೈತರು ಪ್ರತಿ ಕೆಜಿ ಮೇವಿಗೆ ₹.2 ಪಾವತಿಸಿ ಕೊಂಡೊಯ್ಯಬಹುದು. ತಾಲ್ಲೂಕಿನಲ್ಲಿ ಅಗತ್ಯ ಪ್ರಮಾಣದ ಮೇವು ಲಭ್ಯವಿದ್ದು, ಗುಡೆಕೋಟೆಯಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಸಮರ್ಪಕ ರೀತಿಯಲ್ಲಿ ಮೇವು ವಿತರಣೆ ಮಾಡಲು ಜನರ ಸಹಕಾರ ಮುಖ್ಯ ಎಂದರು. ಈ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ ಲೋಹಿತ್, ಗುಡೆಕೋಟೆ ಉಪ ತಾಹಶೀಲ್ದಾರ್ ಕೊಟ್ರಮ್ಮ, ಆರ್.ಐ ಚೌಡಪ್ಪ, ಯಶವಂತ್, ವೀರೇಶ್, ವಿಲೇಜ್ ಅಕೌಂಟರ್ ಮರಳು ಸಿದ್ದಪ್ಪ ಸೇರಿದಂತೆ ಸಿಬ್ಬಂದಿಗಳು, ಊರಿನ ಮುಖಂಡರು, ರೈತರು ಇದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ