ಅಮೃತ ಯೋಜನಯಡಿ ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು – ಜಿ.ಎಚ್.ಶ್ರೀನಿವಾಸ್.
ತರೀಕೆರೆ ಅಕ್ಟೋಬರ್.30

ಅಜ್ಜಂಪುರ ತಾಲೂಕು ಕೇಂದ್ರವಾಗಿದ್ದು, ಕುಡಿಯುವ ನೀರಿನ ತೊಂದರೆ ನಿವಾರಿಸಲು ಅಮೃತ 2.0 ಯೋಜನೆಯಡಿ ರೂ 25.32 ಕೋಟಿಗಳ ಅನುದಾನದಲ್ಲಿ ಚಾಲನೆ ನೀಡಲಾಗಿದೆ ಎಂದು ಶಾಸಕ ಜಿಎಚ್ ಶ್ರೀನಿವಾಸ್ ಹೇಳಿದರು. ಅವರು ಶನಿವಾರ ಪಟ್ಟಣದ ಶಬರಿಗಿರಿ ನಗರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪಟ್ಟಣ ಪಂಚಾಯಿತಿ ಅಜ್ಜಂಪುರ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ, ಅಮೃತ್ ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಯೋಜನೆಯಲ್ಲಿ 2 ಲಕ್ಷ ಲೀಟರ್ ಸಾಮರ್ಥ್ಯದ ಶುದ್ಧ ನೀರಿನ ಸಂಗ್ರಹಣಾ ತೊಟ್ಟಿ ನಿರ್ಮಾಣ, ಹಾಗೂ ಪಂಪ ಹೌಸ್ ನಿರ್ಮಾಣ, 10 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಟ್ಯಾಂಕ್ ನಿರ್ಮಾಣ,41.56 ಕಿಲೋ ಮೀಟರ್ ಉದ್ದದ ಉತ್ತಮ ಗುಣಮಟ್ಟದ ಕ್ವಾಲಿಟಿ ಪೈಪ್ ಹಾಕಿ, ಗುಣಮಟ್ಟದ ಕಾಮಗಾರಿ ಮಾಡಬೇಕು. ಗುತ್ತಿಗೆದಾರರಾದ ಬೆಂಗಳೂರಿನ ಮ!! ಗಿಡ್ಡಿ ಗೌಡ ಕಂಟ್ರಾಕ್ಟರ್ ರವರು ಕಾಮಗಾರಿಯನ್ನು 2025ರೊಳಗೆ ಪೂರ್ಣಗೊಳಿಸಿ, 5 ವರ್ಷಗಳ ಕಾಲ ನಿರ್ವಹಣೆಯನ್ನು ಮಾಡಬೇಕು. ಮತ್ತು ಪ್ರತಿ ಮನೆ ಮನೆಗೂ ಸಹ ನಲ್ಲಿಗಳನ್ನು ಅಂದರೆ 3639 ಗೃಹ ಸಂಪರ್ಕಗಳನ್ನು ಮಾಡಬೇಕು. ಅಮೃತ ಯೋಜನೆ ಅಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಯೋಜನೆಯು ಸದ್ಬಳಕೆಯಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ, ಮತ್ತು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಟರಾಜ್, ಹಾಗೂ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಅಣ್ಣಪ್ಪ, ಅಭಿಯಂತರರಾದ ಶಿಲ್ಪಾರವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ