ಹುನಗುಂದದಲ್ಲಿ ಅದ್ದೂರಿ ಹೋಳಿ ಹಬ್ಬದ ಬಣ್ಣದಾಟ ಮತ್ತು ಅಣಕು ಶವದ ಸೋಗು.

ಹುನಗುಂದ ಮಾರ್ಚ್.27

ಬಣ್ಣಾ…. ನನ್ನೊಲವಿನ ಬಣ್ಣ….! ನಮ್ಮ ಬದುಕಿನ ಬಣ್ಣಾ….! ಎನ್ನುವ ಹಾಗೆ ವಸಂತ ಮಾಸದ ಆಗಮನಕ್ಕೆ ಬಣ್ಣ ಬಣ್ಣಗಳ ಚಿತ್ತಾರದ ಮೂಲಕ ದೊಡ್ಡವರಿಂದ ಹಿಡಿದು ಚಿಕ್ಕ ಚಿಕ್ಕ ಮಕ್ಕಳು ಸಹ ಯಾವದೇ ಜಾತಿ,ಮತ,ಪಂಥವೆಂಬ ಬೇಧ ಭಾವವಿಲ್ಲದೇ ಹುನಗುಂದ ಪಟ್ಟಣ ಸೇರಿದ್ದಂತೆ ತಾಲೂಕಿನಾದ್ಯಂತ ಹೋಳಿ ಹಬ್ಬದ ಬಣ್ಣದಾಟವನ್ನು ಸಡಗರ ಸಂಭ್ರಮ ದಿಂದ ಆಚರಿಸಿದರು.ಒಂದು ಕಡೆಗೆ ಹಲಗೆ ಸದ್ದು. ಇನ್ನೊಂದೆಡೆಯಲ್ಲಿ ಅಣಕು ಶವದ ಸೋಗು ಮತ್ತು ಹೆಣದ ಮುಂದೆ ಹಾಸ್ಯ ಬರಿತ ಮಾತುಗಳ ಮೂಲಕ ಅಳುವುದು. ಮೊತ್ತೊಂದು ಕಡೆಗೆ ಕಲರಪುಲ್ ಬಣ್ಣದಾಟ ಇದು ಹೋಳಿ ಹಬ್ಬದ ವಿಶೇಷವಾಗಿತ್ತು.ಸೋಮವಾರ ರಾತ್ರಿ ವಿವಿಧ ಕಡೆಗಳಲ್ಲಿ ಕಾಮ ದಹನ ಪ್ರಕ್ರಿಯೆಯನ್ನು ಮುಗಿಸಿ ಮರುದಿನ ಸುಡುವ ಬಿರು ಬಿಸಿಲಿನ ನಡೆವೆಯೂ ವಯಸ್ಸಿನ ಬೇಧವಿಲ್ಲದೇ ಎಲ್ಲಾರು ಪರಸ್ಪರು ಬಣ್ಣ ಎರಚುವ ಮೂಲಕ ಅನೇಕ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಅಣಕು ಶವದ ಸೋಗು- ಪಟ್ಟಣದ ದರಗಾದ ಓಣಿ,ಮೇನ ಬಜಾರ,ಸಂಗಮೇಶ್ವರ ಓಣಿ,ಕಂಠಿಯರ ಓಣಿ,ಕುಂಬಾರ ಓಣಿಯಲ್ಲಿ ಸೇರಿದ್ದಂತೆ ಅನೇಕ ಪ್ರಮುಖ ರಸ್ತೆಯಲ್ಲಿ ಟ್ರ್ಯಾಕ್ಟರದಲ್ಲಿ ಹೆಣದ ಸೋಗು ಹಾಕಿ ರಸ್ತೆಯುದ್ದಕ್ಕೂ ಜನರನ್ನು ನಕ್ಕು ನಗಿಸಿದರು ಪುರುಷ ಕಲಾವಿದರೇ ಇದರಲ್ಲಿ ಭಾಗವಹಿಸುತ್ತಾರೆ. ಮಹಿಳೆಯ ವೇಷದಲ್ಲಿ ಪುರುಷ ಪಾತ್ರದ ವ್ಯಕ್ತಿಯು ಹೆಣದ ಮುಂದೆ ಕುಳಿತು ವಿವಿಧ ರೀತಿಯಲ್ಲಿ ಅವರನ್ನು ಬಣ್ಣಿಸುವ ರೀತಿ ಅಳುತ್ತಿದ್ದರೇ ಹೆಣದ ಸಂಬಂಧಿ ವೇಷಧಾರಿ ಕಲಾವಿದರು ಅಳುತ್ತ, ಬೊಬ್ಬೆ ಹಾಕುತ್ತ ಹೆಣದ ಕಡೆಗೆ ಓಡೋಡಿ ಬಂದು ಟ್ರ್ಯಾಕ್ಟರ್ ಹತ್ತಿ ಹೆಣದ ಮುಂದೆ ಅವರೊಂದಿಗಿನ ಪ್ರೀತಿ,ವ್ಯವಹಾರ,ಜಗಳ ಸಂಬಂಧಿಸಿದ್ದಂತೆ ಬೊಬ್ಬೆ ಹೊಡೆದು ಅಳುವುದು ನೋಡಗರನ್ನು ನಗೆಯಗಡಲಿನಲ್ಲಿ ಮುಳುಗಿಸಿ ಬಿಡುವಂತೆ ಕಂಡು ಬಂದಿತು.ಚಿಕ್ಕ ಮಕ್ಕಳ ಬಣ್ಣದಾಟ-ಹೋಳಿ ಹಬ್ಬದ ಅಂಗವಾಗಿ ಮಂಗಳವಾರ ಬೆಳಂ ಬೆಳಿಗ್ಗೆ ಚಿಕ್ಕ ಚಿಕ್ಕ ಮಕ್ಕಳ ಕೈಯಲ್ಲಿ ನೀರು ತುಂಬಿದ ಬಣ್ಣ ಬಾಟಲಿ, ಇನ್ನೊಂದು ಮಗುವಿನ ಕೈಯಲ್ಲಿ ಬಣ್ಣ ತುಂಬಿದ ಬಂದೂಕುಗಳನ್ನು ಹಿಡಿದು ಪರಸ್ಪರ ಪ್ರೀತಿ ವಿಶ್ವಾಸದಿಂದ ಬಣ್ಣದಲ್ಲಿ ಮಿಂದೆದ್ದಿರುವುದು ಮತ್ತೊಂದು ವಿಶೇಷವಾಗಿತು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button