ವಿವಿಧ ಚೆಕ್ ಪೋಸ್ಟ್ ಗಳಿಗೆ ಜಿಲ್ಲಾಧಿಕಾರಿ ಭೂಬಾಲನ ಭೇಟಿ – ಪರೀಶೀಲನೆ.
ಇಂಡಿ ಮಾರ್ಚ್.29





ಲೋಕಸಭಾ ಚುನಾವಣೆಯಲ್ಲಿ ಇಂಡಿ ಕ್ಷೇತ್ರದಲ್ಲಿ ಯಾವದೇ ಅಕ್ರಮಗಳು ನಡೆಯದಂತೆ ಚುನಾವಣೆ ಆಯೋಗದ ನಿಯಮಗಳನ್ನು ಜಾರಿ ಗೊಳಿಸಿ ಅಧಿಕಾರಿಗಳು ಮತ್ತು ನೌಕರರು ಕಟ್ಟುನಿಟಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಭೂಬಾಲನ ಹೇಳಿದರು.ಅವರು ತಾಲೂಕಿನ ಚಿಕ್ಕ ಮಣೂರ ಅಗರಖೇಡ ಚೆಕ್ ಪೋಸ್ಟ, ಹಿಂಗಣಿ ಬ್ಯಾರೇಜು ಮತ್ತು ಪಟ್ಟಣದ ಆದರ್ಶ ಶಾಲೆಯ ಚುನಾವಣೆ ಭದ್ರತಾ ಕೋಣೆ ಮತ್ತು ಮಿನಿ ವಿಧಾನಸೌಧ ಭೇಟಿ ನೀಡಿ ಅಲ್ಲಿ ಸಿ ವಿಜಲ್ ಸೇರಿದಂತೆ ಚುನಾವಣೆ ಕುರಿತು ಪರೀಶಿಲಿಸಿ ಮಾತನಾಡುತ್ತಿದ್ದರು.ತಾಲೂಕಿನಲ್ಲಿ ಚೆಕ್ ಪೋಸ್ಟಗಳನ್ನು ತೆರೆಯಲಾಗಿದೆ.

ಧೂಳಖೇಡ, ಚಿಕ್ಕಮಣೂರ ಸೇರಿದಂತೆ ಇನ್ನಿತರ ಕಡೆ ಚೆಕ್ ಪೋಸ್ಟ ತೆರೆದಿದ್ದು ಈ ಭಾಗದಲ್ಲಿ ಸಂಚರಿಸುವ ವಾಹನಗಳನ್ನು ನಿರಂತರವಾಗಿ ತಪಾಸಣೆ ಮಾಡಲಾಗುತ್ತದೆ. ನಿಗದಿತ ಹಣಕ್ಕಿಂತ ಹೆಚ್ಚು ಕೊಂಡೆಯ್ಯುವದು ಕಂಡು ಬಂದಲ್ಲಿ ಸೀಜ್ ಮಾಡಲು ಸೂಚಿಸಲಾಗಿದೆ ಎಂದರು.ಒಬ್ಬ ವ್ಯಕ್ತಿಯು ೫೦ ಸಾವಿರ ರೂ ಗಳಿಗಿಂತ ಹೆಚ್ಚು ಹಣ ಕೊಂಡೆಯ್ಯುವಂತಿಲ್ಲ. ಕೊಂಡೆಯುವದಿದ್ದರೆ ಅದಕ್ಕೆ ಪೂರಕ ದಾಖಲೆಗಳನ್ನು ಹೊಂದಿರಬೇಕು. ದಾಖಲೆಗಳಿಲ್ಲದೆ ಇದ್ದಲ್ಲಿ ಸೀಜ್ ಮಾಡಲಾಗುತ್ತದೆ. ನಂತರ ಸೂಕ್ತ ದಾಖಲೆಗಳನ್ನು ಒದಗಿಸಿ ತಮ್ಮ ಹಣವನ್ನು ಬಿಡಿಸಿ ಕೊಂಡು ಹೋಗಬಹುದು ಎಂದು ತಿಳಿಸಿದರು.ಮದುವೆ ಮತ್ತು ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಒಪ್ಪಿಗೆಯ ಅಗತ್ಯವಿರುವದಿಲ್ಲ. ಆದರೆ ಬೇರೆ ಕಾರ್ಯಕ್ರಮಗಳನ್ನು ಗ್ರಾಮದಲ್ಲಾಗಲೀ, ಸಮುದಾಯ ಭವನದಲ್ಲಾಗಲಿ ನಡೆಸಬೇಕಾದರೆ ಸಂಬಂಧ ಪಟ್ಟ ಪೋಲಿಸ ಇಲಾಖೆ ಮತ್ತು ಕಂದಾಯ ಇಲಾಖೆಯ ವತಿಯಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು ಎಂದರು.ಗ್ರಾಮಗಳಲ್ಲಿ ಜಾತ್ರೆಗಳು ನಡೆಯುತ್ತಿದ್ದು ಜಾತ್ರೆಗಳಲ್ಲಿ ಚುನಾವಣೆಗೆ ಸಂಬಂದಿಸಿದಂತೆ ಯಾವದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಪಕ್ಷದ ಅಭ್ಯರ್ಥಿಗಳ ಮುಖಂಡರ ಭಾವಚಿತ್ರ ಇರುವ ಬ್ಯಾನರ್ ಗಳನ್ನು ಅಳವಡಿಸುವಂತಿಲ್ಲ. ಜಾತ್ರೆಗಳನ್ನು ನಡೆಸುವ ಸಂದರ್ಭದಲ್ಲಿ ಗ್ರಾಮದ ಮುಖಂಡರು ಚುನಾವಣೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದರು.ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ, ತಹಸೀಲ್ದಾರ ಮಂಜುಳಾ ನಾಯಕ, ಇ.ಒ ನೀಲಗಂಗಾ, ಡಿ.ವಾಯ್.ಎಸ್.ಪಿ ಜಗದೀಶ ಎಚ್.ಎಸ್,ಇಂಡಿಯ ಪಟ್ಟಣ ಸಿ.ಪಿ.ಐ ರತನಕುಮಾರ ಜಿರಗಿಹಾಳ, ಇಂಡಿ ಗ್ರಾಮೀಣ ಪಿಎಸ್ಐ ಮಂಜುನಾಥ ಹುಲಕುಂಡ, ಚುನಾವಣೆ ಶಿರಸ್ತೆದಾರ ಆರ್.ಎಸ್.ಮೂಗಿ ಮತ್ತಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ