ಅಳುವಿನ ಅಂಚಿನಲ್ಲಿರುವ ಪಕ್ಷಿ ಸಂತತಿ ರಕ್ಷಣೆಗಾಗಿ ಕಾಳು, ನೀರಿನ ವ್ಯವಸ್ಥೆ.
ಕೂಡ್ಲಿಗಿ ಮಾರ್ಚ್.30

ಮನುಷ್ಯ ಸಕಾಲದಲ್ಲಿ ನೀರು ದೊರಕದಿದ್ದರೆ ಪ್ರತಿಭಟನೆ ಹಾದಿ ಹಿಡಿದಾದರೂ ಬದಲಿ ವ್ಯವಸ್ಥೆ ಮಾಡಿ ಕೊಳ್ಳುತ್ತಾನೆ. ಆದರೆ ನೀರೇ ಸಿಗದಿದ್ದರೆ ಮೂಕ ಪ್ರಾಣಿ ಪಕ್ಷಿಗಳ ಸ್ಥಿತಿ ಏನಾಗಬಹುದು? ಎಂದು ಯೋಚಿಸಿ ತಲ್ಲಣಿಸಿದ ಯುವ ಹೃದಯಗಳು ರಸ್ತೆ ಬದಿ, ಅರಣ್ಯ ಪರಿಸರದಲ್ಲಿ ನೀರಿನ ವ್ಯವಸ್ಥೆ ಮಾಡುತ್ತ ಸಹೃದಯರಿಂದ ಭೇಷ್ ಅನ್ನಿಸಿ ಕೊಳ್ಳುತ್ತಿವೆ. ತಾಲೂಕಿನ ಪೂಜಾರಹಳ್ಳಿ ಗ್ರಾಮದ ಯುವ ಹೃದಯಗಳು, ಪರಿಸರ ಪ್ರೇಮಿಗಳು ಸತೀಶ್ ಟಿ.ಎನ್ ಪೂಜಾರಹಳ್ಳಿ ವೈಭವ ಶಾಲೆಯ ಶಿಕ್ಷಕರು ಹೊಸಹಳ್ಳಿ, ಸ್ನೇಹಿತರಾದ ತಿಪ್ಪೇಶ್ ಮತ್ತು ಸಹೋದರಿ ನೇತ್ರ ಹಾಗೂ ಬೃಂದಾ, ತೇಜ್ ಇವರ ಸಹಕಾರದಿಂದ ನಿರುಪಯುಕ್ತವಾಗಿ ಬಿದ್ದಿರುವ ನೂರಾರು ನೀರಿನ ಖಾಲಿ ಬಾಟಲಿಗಳನ್ನು ಕತ್ತರಿಸಿ ಅವುಗಳಿಗೆ ದಾರ ಹಾಕಿ ಗಿಡಗಳ ಪೊದೆಗಳಲ್ಲಿ ನೇತಾಕಿ ಅದರಲ್ಲಿ ನೀರು ಹಾಕಿದ್ದಾರೆ. ಮತ್ತೆ ಕೆಲವು ಕಡೆಗಳಲ್ಲಿ ಜೋಳದ ಕಾಳುಗಳನ್ನು ಒದಗಿಸುವ ಮೂಲಕ ಮೂಕ ಕಾಡು ಪ್ರಾಣಿ, ಪಕ್ಷಿಗಳಿಗೆ ನೆರವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪ್ರಸಕ್ತ ಬೇಸಿಗೆ ದಿನಗಳಲ್ಲಿ ತಾಲೂಕಿನಲ್ಲಿ ಬಿಸಿಲಿನ ತಾಪಮಾನ ಏರಿದ್ದರಿಂದ ಪಕ್ಷಿಗಳು ಮಧ್ಯಾಹ್ನದಲ್ಲಿ ಹೆಚ್ಚಿಗೆ ಕಂಡು ಬರುತ್ತದೆ. ಅವರಿಗೆ ಸಮಯ ಸಿಕ್ಕಾಗ ಬೆಳಗ್ಗೆ ಮತ್ತು ಸಂಜೆ ನೀರು ಹಾಕುವ ಮೂಲಕ ಮೂಕ ಪಕ್ಷಿಗಳ ಬಾಯಾರಿಕೆ ತಣಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ದಿನ ನೂರಾರು ಪಕ್ಷಿಗಳು ಅಲ್ಲಿಗೆ ಬಂದು ನೀರು ಕುಡಿದು ದಣಿವಾರಿಸಿ ಕೊಳ್ಳುತ್ತಿದೆ, ಈ ಯುವ ಹೃದಯಗಳು ಶ್ರಮದಿಂದಾಗಿ ಇಲ್ಲಿನ ಪಕ್ಷಿಗಳು ಹನಿ ನೀರಿಗಾಗಿ ಅಲೆಯುವುದು ತಪ್ಪಿದಂತಾಗಿದೆ.ಪೂಜಾರಹಳ್ಳಿ, ಹೂಡೇಂ, ಜುಮ್ಮೊಬನಹಳ್ಳಿ ಸುತ್ತಮುತ್ತ ಅರಣ್ಯ ಪ್ರದೇಶ ಇದ್ದು ಸಾಕಷ್ಟು ಪ್ರಾಣಿ, ಪಕ್ಷಿಗಳು ಇವೆ. ಈ ಬಾರಿ ತೀವ್ರ ಮಳೆ ಕೊರತೆಯಿಂದ ಕೆರೆ, ಕುಂಟೆಗಳಲ್ಲಿ ನೀರು ಸಂಗ್ರಹವಾಗದೇ ಪಕ್ಷಿಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಪ್ರತಿ ಶನಿವಾರ, ಭಾನುವಾರ ಸಮೀಪದ ಕಾಡು ಪ್ರದೇಶ, ರಸ್ತೆ ಬದಿಯಲ್ಲಿ ಹೋಗಿ ಪಕ್ಷಿಗಳಿಗೆ ಕುಡಿವ ನೀರು ಮಾತ್ರವಲ್ಲದೇ ಜೋಳದ ಕಾಳುಗಳನ್ನು ಸಹ ಒದಗಿಸಿ ಬರುತ್ತಿದ್ದೇವೆ.- ಸತೀಶ್ ಟಿ.ಎನ್ ಪೂಜಾರಹಳ್ಳಿ, ವೈಭವ ಶಾಲೆಯ ಶಿಕ್ಷಕರು ಹೊಸಹಳ್ಳಿ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ