ಯುವ ಜನತಾದಳ ವಿಭಾಗಕ್ಕೆ ಶ್ರೀ ಶೈಲ ಎಸ್.ಬಿರಾದಾರ ಅಧ್ಯಕ್ಷರಾಗಿ ಆಯ್ಕೆ.
ಇಂಡಿ ಮಾರ್ಚ್.30

ಇಂಡಿ ಪಟ್ಟಣದ ಭೀರಪ್ಪ ನಗರದ ನಿವಾಸಿ ಶ್ರೀಶೈಲ ಎಸ್.ಬಿರಾದಾರ ಅವರನ್ನು ಇಂಡಿ ತಾಲೂಕಾ ಯುವ ಜನತಾದಳ (ಜಾತ್ಯಾತೀತ) ವಿಭಾಗಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಪಕ್ಷದ ಮುಖಂಡರಾದ ಬಿ.ಡಿ. ಪಾಟೀಲ ಅವರ ಶಿಫಾರಸಿನ ಮೇರೆಗೆ ನೇಮಕ ಮಾಡಿ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇಮಕಾತಿ ಆದೇಶ ನೀಡಿದ್ದಾರೆ.ಪಕ್ಷದ ತತ್ವ ಹಾಗೂ ಸಿಧ್ಧಾಂತಗಳಿಗೆ ಬಧ್ಧರಾಗಿ ಇಂಡಿ ತಾಲೂಕಿನಲ್ಲಿ ಯುವ ಜನತಾದಳ ವಿಭಾಗವನ್ನು ಪರಿಣಾಮಕಾರಿಯಾಗಿ ಸಂಘಟಿಸಿ ಬಲವರ್ಧನೆ ಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ