ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಚುನಾವಣೆಯಲ್ಲಿ ವಿವಿಧ ಅನುಮತಿಗಳನ್ನು ನೀಡಲು ಏಕ ಗವಾಕ್ಷಿ ತಂಡ ರಚನೆ.
ಇಂಡಿ ಮಾರ್ಚ್.30

ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಚುನಾವಣೆಯಲ್ಲಿ ವಿವಿಧ ಅನುಮತಿಗಳನ್ನು ನೀಡಲು ಏಕ ಗವಾಕ್ಷಿ ತಂಡವನ್ನು ರಚಿಸಲಾಗಿದೆ ಎಂದು ಸಹಾಯಕ ಚುನಾವಣಾ ಆದಿಕಾರಿ ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.ರಾಜಕೀಯ ಪಕ್ಷಗಳು,ಅಭ್ಯರ್ಥಿಗಳು ನಡೆಸುವ ಪ್ರಚಾರದ ಸಂಬಂಧವಾಗಿ ಅನುಮತಿಗಾಗಿ ಕೊರುತ್ತಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಏಕ ಗವಾಕ್ಷಿ ಕಾರ್ಯ ಮಾಡುವದು. ಕಂದಾಯ ಇಲಾಖೆಯ ಎಸ್.ಆರ್.ಮುಜಗೊಂಡ,ಪೋಲಿಸ ಇಲಾಖೆಯ ಪಿ.ಎ.ಅರವತ್ತು, ಪುರಸಭೆಯ ಎಲ್.ಎಸ್.ಸೋಮನಾಯಕ,ತಾ.ಪಂ ವಾಯ್.ಡಿ.ಮಾದರ, ಅಗ್ನಿ ಶಾಮಕ ಇಲಾಖೆಯ ಮುಬಾರಕ ಇಂಡಿಕರ, ಲೋಕೋಪಯೋಗಿ ಇಲಾಖೆಯ ಷಣ್ಮುಖ ಚಂದನಸೇವೆ,ಹೆಸ್ಕಾಂ ಇಲಾಖೆಯ ಶರಣಪ್ಪ ಕಟ್ಟಿಮನಿ, ಸಾರಿಗೆ ಇಲಾಖೆಯ ಸಂಗನಗೌಡ ಬಿರಾದಾರ, ಆರ್.ಟಿ.ಓ ಇಲಾಖೆಯ ಕೆ.ಸುರೇಶಕುಮಾರ ತಂಡದಲ್ಲಿದ್ದಾರೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ