ಲಚ್ಯಾಣ ಗ್ರಾಮದಲ್ಲಿ ನಿರಂತರ 9 ದಿನಗಳ ಪ್ರವಚನ ಕಾರ್ಯಕ್ರಮ ಯಶಸ್ವಿ ಗೊಳಿಸಿಲು ಗ್ರಾಮಸ್ಥರು ನಿರ್ಧಾರ.

ಲಚ್ಯಾಣ ಮಾರ್ಚ್.30

ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಆರಾದ್ಯದೇವ ಶ್ರೀ ಮಲ್ಲಯ್ಯ ದೇವಸ್ಥಾನ ಕಟ್ಟಡ ಮರು ನಿರ್ಮಾಣ ಕಾರ್ಯದ ಪ್ರಾರಂಭೋತ್ಸವ ಏ.9 ರಂದು ಜರುಗಲಿದೆ. ಈ ನಿಮಿತ್ಯ ಏ.1 ರಿಂದ 9 ರ ವರೆಗೆ ಬಂಥನಾಳದ ಶ್ರೀ ಡಾ. ವೃಷಭಲಿಂಗ ಮಹಾ ಶಿವಯೋಗಿಗಳ ಸಾನಿಧ್ಯದಲ್ಲಿ ಜರುಗಲಿರುವ ಪ್ರವಚನ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಗ್ರಾಮಸ್ಥರು ನಿರ್ಧರಿಸಿದರು.ಗ್ರಾಮದ ಶ್ರೀ ಮಲ್ಲಯ್ಯ ಮಂದಿರದ ಆವರಣದಲ್ಲಿ ಬುಧವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಕೆಲ ಗಣ್ಯರು ಮಾತನಾಡಿ, ನಿರಂತರ 9 ದಿನಗಳ ಪ್ರವಚನ ಕಾರ್ಯಕ್ರಮವನ್ನು ಚಡಚಣ ತಾಲೂಕಿನ ತದ್ದೇವಾಡಿಯ ಶ್ರೀ ಮಹಾಂತಯ್ಯ ಶಾಸ್ತ್ರಿಗಳು ನಿತ್ಯ ಸಂಜೆ 7.30 ರಿಂದ 8.30 ರ ವರೆಗೆ ನಡೆಸಿ ಕೊಡಲಿದ್ದಾರೆ ಎಂದು ವಿವರಿಸಿದರು.ಬೇಸಿಗೆಯ ಈ ದಿನಗಳಲ್ಲಿ ಶಾಲೆಗಳಿಗೆ ರಜೆ ಇರುತ್ತದೆ. ಇತ್ತ ರೈತರು ಸುಗ್ಗಿ ಕಾಲದ ಕೃಷಿ ಕೆಲಸಗಳನ್ನು ಮುಗಿಸಿ ಕೊಂಡು ಕೊಂಚ ಬಿಡುವಿನ ವೇಳೆಯಲ್ಲಿ ಇದ್ದಾರೆ. ಮತ್ತೊಂದೆಡೆ ಗ್ರಾಮದ ಶಿಕ್ಷಕರು ಈಗ ವಿಶ್ರಾಂತಿಯ ಗಳಿಗೆಯಲ್ಲಿದ್ದಾರೆ. ಸಮಯೋಚಿತ ಈ ಕಾರ್ಯಕ್ರಮದಿಂದ ಸರ್ವರಿಗೂ ಪ್ರಯೋಜನವಾಗಲಿದೆ. ಶಾಲಾ ಮಕ್ಕಳಿಗೂ ನಿತ್ಯ ಉತ್ತಮ ಸಂಸ್ಕಾರ ದೊರಲಿದೆ ಆದ್ದರಿಂದ ಈ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸೋಣ ಎಂದು ಅಗತ್ಯವಾದ ನೆಲ ಹಾಸು, ಸೌಂಡ ಸಿಸ್ಟಂ, ವಿದ್ಯುತ್ ದೀಪ, ಕುಡಿಯುವ ನೀರು, ನಿತ್ಯ ಅನ್ನ ಪ್ರಸಾದ, ಹೂ ಮಾಲೆಯ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಈ ಸಭೆಯಲ್ಲಿ ತಾಲೂಕು ಪಂಚಾಯತ ಸದಸ್ಯ ಗಂಗಾಧರ ಪಾಟೀಲ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಶೋಕಗೌಡ ಪಾಟೀಲ, ಗ್ರಾಮ ಪಂಚಾಯತ ಸದಸ್ಯ ಸುರೇಶ ವಾಲಿ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಮಲಕಣ್ಣಾ ಗುಬ್ಯಾಡ, ನಿವೃತ್ತ ಶಿಕ್ಷಕ ವಿ.ಎಂ. ಕರಾಳೆ, ಈರಣ್ಣ ಅಹಿರಸಂಗ, ಮಹಾದೇವ ಕಾಸಾರ, ಸಂಗನಬಸವ ಬಿರಾದಾರ, ಡಿ.ಎ. ಮುಜಗೊಂಡ, ರಾಜಶೇಖರ ನಿಂಬರಗಿ, ಮಹೇಶ ಸಂಭಾಜಿ, ರಾಜಶೇಖರ ಪಾಟೀಲ, ಕಲ್ಲನಗೌಡ ಬಿರಾದಾರ, ಬಸವರಾಜ ಹೊಸಮನಿ, ಅಪ್ಪಾಶ ಮೈದರಗಿ, ಉಮೇಶ ಬಿರಾದಾರ, ಚನ್ನಬಸು ಮುಜಗೊಂಡ, ಮಲ್ಲೇಶಿ ಕರಾಳೆ, ಸದಾಶಿವ ಬೊಳಗೊಂಡ, ಶಂಕರಗೌಡ ಬಿರಾದಾರ, ಈರಣ್ಣ ಮುಜಗೊಂಡ, ರಮೇಶ ಅಹಿರಸಂಗ, ನಿಲಿನ್ ಕಿರಣಗಿ, ಅಕ್ಷಯ ಮುಜಗೊಂಡ, ಬಸವರಾಜ ಲಾಳಸೇರಿ, ಕುಲಂಕಾರ ಬಿರಾದಾರ, ಸುರೇಶ ಬಿದರಕೋಟಿ, ಈರಣ್ಣ ಬಿರಾದಾರ ಹಾಗೂ ಸತೀಶ ಕರಾಳೆ ಸೇರಿದಂತೆ ಗ್ರಾಮದ ಹಲವು ಭಕ್ತರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button