ಮಾನವ ಸರಪಳಿ ಮೂಲಕ ಮತದಾನ ಜಾಗೃತಿ.
ಹುನಗುಂದ ಮಾರ್ಚ್.30

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಪಂಚಾಯತಿ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸುವುದರ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಬಳಿಕ ಕಾರ್ಯನಿರ್ವಾಹಕ ಅಧಿಕಾರಿ ತಾರಾ ಎನ್ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಬಳಿಕ ತಾಲೂಕ ಪಂಚಾಯತಿಯಿಂದ ಸಂಗಮೇಶ್ವರ ದೇವಸ್ಥಾನದವರೆಗೆ ಜಾಥಾ ಮೂಲಕ ಮತದಾನ ಮೂಡಿಸಲಾಯಿತು. ಬಳಿಕ ಸಾರ್ವಜನಿಕರೊಂದಿಗೆ ಮಾನವ ಸರಪಳಿ ಮೂಲಕ ಜಾಗೃತಿ ಮೂಡಿಸಿ, ಬಳಿಕ ಕಾರ್ಯನಿರ್ವಾಹಕ ಅಧಿಕಾರಿ ತಾರಾ ಎನ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಾಮಾಜಿಕ ಪರಿಶೋಧನಾ ಅಧಿಕಾರಿ ಬಸವರಾಜ ಔರಸಂಗ , ಸಹಾಯಕ ನಿರ್ದೇಶಕ ಮಹಾಂತೇಶ್ ಕೋಟಿ (ಗ್ರಾ) , ತಾ.ಪಂ ಅಧಿಕ್ಷಕರು ಎಚ್ ಎಂ ಕುರಹಟ್ಟಿ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಎನ್ ಎರ್ ಎಲ್ ಎಂ ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣಾಜೀ ಪವಾರ್ , ತಾ.ಪಂ. ಸಿಬ್ಬಂದಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

