ದೇವರ ಹಿಪ್ಪರಗಿ ವಿಜಯಪುರ ಕಾಂಗ್ರೇಸ್ ಅಭ್ಯರ್ಥಿಗೆ ಗೆಲುವು ಖಚಿತ.
ಪಡಗಾನೂರ ಮಾರ್ಚ್.31

ಕಾಂಗ್ರೇಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ಬಂದಿರುವ ಕಾರಣ ಈ ಬಾರಿ ವಿಜಯಪುರ ಎಸ್ ಸಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಾಜು ಆಲಗೂರ ಅವರಿಗೆ ಗೆಲುವಿಗೆ ಕೈ ಜೋಡಿಸ ಬೇಕೆಂದು ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಹೇಳಿದರು, ಲೋಕಸಭಾ ಚುನಾವಣೆಯ ಪ್ರಚಾರ ನಿಮಿತ್ತವಾಗಿ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಡಗಾನೂರ ಗ್ರಾಮ ಹಾಗೂ ತಾಂಡಾ, ದೇವೂರ ಗ್ರಾಮ ಹಾಗೂ ತಾಂಡಾ ಮಣ್ಣೂರ ಗ್ರಾಮ, ತಾಂಡಾ ಜಾಲವಾದ, ಇಬ್ರಾಹಿಮಪುರ ಬೊಮ್ಮನಜೋಗಿ, ಈ ಎಲ್ಲಾ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದರು.

ಪ್ರತಿ ಗ್ರಾಮ ಮನೆ ಮನೆಗೆ ಹೋಗಿ ಕಾಂಗ್ರೇಸ್ ಗ್ಯಾರಂಟಿ ಯೋಜನೆಗಳು ಬಗ್ಗೆ ಹೆಣ್ಣು ಮಕ್ಕಳಿಗೆ ಯುವಕರಿಗೆ ಮಾಹಿತಿ ನೀಡಬೇಕು ಹತ್ತು ವರ್ಷ ಕೇಂದ್ರ ಸರ್ಕಾರ ಸುಳ್ಳು ಭರವಸೆ ಯಿಂದ ಜನ ಸಾಮಾನ್ಯರು ಬೇಸತ್ತು ಹೋಗಿದ್ದಾರೆ ಬಡ ವರ್ಗದ ಜನರು ಉದ್ಯೋಗವಿಲ್ಲದೆ ಯುವ ಜನತೆ ಕಣ್ಣಿರು ಹಾಕುವಂತಾಗಿದೆ, ಇದಕ್ಕೆ ತಕ್ಕಂತೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳಿಂದ ಗೆಲಿಸಬೇಕು ಎಂದು ಮನವಿ ಮಾಡಿದರು.

ಈ ಪ್ರಚಾರದಲ್ಲಿ ಭಾಗವಹಿಸುವ ತಾಲ್ಲೂಕಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಯಾದ ಸರಿತಾ ನಾಯಕ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದ ಪ್ರಕಾಶ ಗುಡಿಮನಿ, ಎಂ ಎಂ ಪಾಟೀಲ ನಜೀರ್ ಬೀಳಗಿ ಪರಶುರಾಮ ದಿಂಡವಾರ ಸುನೀಲ್ ಕನಮಡಿ ಬಾಷೇಸಾಬ ಹಳ್ಳಿ ಸಿದ್ದನ ಗೌಡ ಬಿರಾದಾರ,, ಅಡಿವೆಪ್ಪ ಕೊಂಡಗೂಳಿ ಸುನಂದಾ ಸೊನಳ್ಳಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು,ದೇವರ ಹಿಪ್ಪರಗಿ ವಿಧಾನಸಭೆ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತಯ ಕೇಂದ್ರಗಳಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಪ್ರಚಾರ ನಡೆಸಲಾಗುತ್ತದೆ ಹಾಗೂ ಕಾಂಗ್ರೇಸ್ ಅಭ್ಯರ್ಥಿಯಾಗಿ ರಾಜು ಆಲಗೂರ ಅವರು ಭಾಗವಹಿಸುತ್ತಾರೆ, ಏಪ್ರಿಲ್ 1 ರಂದು ಸಂಜೆ ಆರು ಗಂಟೆಗೆ ಕೋರವಾರ ಜಿಲ್ಲಾ ಪಂಚಾಯತಿ ಕೇಂದ್ರದಲ್ಲಿ ಏಪ್ರಿಲ್ 4 ರಂದು ನಾಲ್ಕು ಗಂಟೆಗೆ ಇಟಗಿ ಜಿಲ್ಲಾ ಪಂಚಾಯತ ಕೇಂದ್ರ ದಲ್ಲಿ ಸಂಜೆ ಆರು ಗಂಟೆಗೆ ವಡವಡಗಿ ಜಿಲ್ಲಾ ಪಂಚಾಯತಿ ಕೇಂದ್ರದಲ್ಲಿ ಏಪ್ರಿಲ್ 7 ರಂದು 9=00 ಗಂಟೆಗೆ ಹುಣಶ್ಯಾಳ ಜಿಲ್ಲಾ ಪಂಚಾಯತಿ ಕೇಂದ್ರದಲ್ಲಿ 11=00 ಗಂಟೆಗೆ ಕಲಕೇರಿ ಜಿಲ್ಲಾ ಪಂಚಾಯತಿ ಕೇಂದ್ರದಲ್ಲಿ, 2=00 ಗಂಟೆಗೆ ಸಂಜೆ 4=00 ಗಂಟೆಗೆ ಕುದುರಿ ಸಾಲವಾಡಗಿ ಜಿಲ್ಲಾ ಪಂಚಾಯತಿ ಕೇಂದ್ರಗಳಲ್ಲಿ ಈ ರೀತಿ ಚುನಾವಣೆಯ ಪ್ರಚಾರ ಸಭೆಗಳು ನಡೆಯಲಿದೆ ಎಂದು ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ ದೇವರ ಹಿಪ್ಪರಗಿ.