ಬಂಜಾರ ಸಮಾಜಕ್ಕೆ ಕಿವಿಮಾತು ಹೇಳಿದ ಸಂತೋಷ ಪಾಟೀಲ.
ಸಿಂದಗಿ ಏಪ್ರಿಲ್.01

ಭಾರತ ಇತಿಹಾಸದಲ್ಲಿ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಜಿ ಸಾಧನೆ ಅಮೊಘವಾದುದ್ದು ಹಿಂದುಳಿದ ವರ್ಗದ ಜನರಿಗಾಗಿ ವಿಶೇಷವಾಗಿ ಬಂಜಾರ ಸಮುದಾಯದವರಿಗೆ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವು ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸುವುದರ ಮೂಲಕ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಿ ಅವುಗಳನ್ನು ಅಭಿವೃದ್ಧಿ ಪಣ ತೊಟ್ಟಿದೆ ಹಾಗೂ ಲಂಬಾಣಿ ಜನಾಂಗದವರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಮಂತ್ರಿಸ್ಥಾನ ನೀಡಿದೆ ಈಗಿನ ಲೋಕಸಭಾ ಚುನಾವಣೆ ಕಲಬುರಗಿಯಲ್ಲಿ ಡಾ,ಉಮೇಶ್ ಜಾಧವ ಅವರಿಗೆ ನಮ್ಮ ಕೇಂದ್ರ ಸರ್ಕಾರ ಟಿಕೆಟ್ ನೀಡಿದೆ, ಕರ್ನಾಟಕ ಕಾಂಗ್ರೆಸ್ ಸರ್ಕಾರವು ಲಂಬಾಣಿ ಜನಾಂಗದವರಿಗೆ ಯಾವುದೇ ಮಂತ್ರಿಸ್ಥಾನವನ್ನು ನೀಡಿಲ್ಲ ಹಾಗೂ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಸಮಾಜಕ್ಕೆ ಟಿಕೆಟ್ ನ್ನು ನೀಡಿಲ್ಲ ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಲಂಬಾಣಿ ಸಮಾಜದವರು ಯಾವುದೇ ಊಹಾಪೋಹಗಳಿಗೆ ಕಿವಿ ಗೊಡದೆ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡಲು ಹಾಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ರಮೇಶ್ ಜಿಗಜಿಣಗಿ ಯವರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಬೇಕು, ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು ನಿಮ್ಮ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ, ನಿವು ಅದಕ್ಕೆ ಕಿವಿ ಕೊಡದೆ ನಿಮ್ಮ ಸಮಾಜದ ಅಭಿವೃದ್ಧಿಗಾಗಿ ಸತತವಾಗಿ ನಾವು ಶ್ರಮಿಸುತ್ತಿದ್ದೇವೆ, ಎಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಿಂದಗಿ ತಾಲ್ಲೂಕ ಭಾರತೀಯ ಜನತಾ ಪಕ್ಷದ ಮಂಡಳ ಅಧ್ಯಕ್ಷರಾದ ಸಂತೋಷಗೌಡ ಪಾಟೀಲ, ಡಂಬಳ ಅವರು ತಿಳಿಸಿದರು,
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ