ಕಿಡಿಗೇಡಿಗಳಿಂದ ಗ್ರಾಮ ಒನ್ ಸೇವಾ ಕೇಂದ್ರಕ್ಕೆ ಬೆಂಕಿ ತಗುಲಿಸಿದ ಶಂಕೆ.
ಕಲಕೇರಿ ಏಪ್ರಿಲ್.01

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ಪಕ್ಕದಲ್ಲಿ ಬೆಳಗಿನ ಜಾವ.7.30.ಗಂಟೆಗೆ ಯಾರೋ ಕಿಡಿಗೇಡಿಗಳು ಬೆಂಕಿಯನ್ನು ಹಚ್ಚಿ ಹೋಗಿದ್ದಾರೆ. ಅದರಿಂದ ಸರ್ವಿಸ್ ವಾಯರು ಸುಟ್ಟಿದೆ ಮತ್ತು ಗ್ರಾಮ ಒನ್ ಸೇವಾ ಕೇಂದ್ರ ಒಳಗಡೆ ಎರಡು ಕಂಪ್ಯೂಟರ್ ಗಳನ್ನು ಬೆಂಕಿಯ ಜಳ ಬಡಿದು ಸುಟ್ಟಿದೆ ಗ್ರಾಮ ಒನ್ ಸೇವಾ ಕೇಂದ್ರದ ಮಾಲೀಕರಾದ ರಮೇಶ ಮೋಪಗಾರ ಇವರು ಬೆಳಗ್ಗೆ 6 ಗಂಟೆಗೆ ನಾವು ಮನೆಗೆ ಹೋದ ಮೇಲೆ ಏಳೂವರೆ ಗಂಟೆಯ ನಂತರ ನಮಗೆ ಗೊತ್ತಾಯ್ತು ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಬನ್ನಿ ಅಂತಾ ನಮ್ಮ ಫ್ರೆಂಡ್ ಫೋನ್ ಹಚ್ಚಿದ ವೇಳೆಯಲ್ಲಿ ನಾನು ಓಡಿ ಬಂದು ನೀರಿನ ಟ್ಯಾಂಕರ್ ತರಿಸಿ ನೀರನ್ನು ಹೊಡೆದು ಬೆಂಕಿಯನ್ನು ಸಂಪೂರ್ಣವಾಗಿ ಹಾರಿಸಿದ್ದಾರೆ.

ಎರಡು ಕಂಪ್ಯೂಟರ್ ಬೆಲೆ 50 ರಿಂದ 70 ಸಾವಿರ ರೂಪಾಯಿಗಳು ನಷ್ಟ ಆಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದರು. ಗ್ರಾಮ ಒನ್ ಸೇವಾ ಕೇಂದ್ರ ಸಂಬಂಧಪಟ್ಟ ಅಧಿಕಾರಿಗಳು ಇವರಿಗೆ ಸರಕಾರ ದಿಂದ ಪರಿಹಾರ ಕೊಡಿಸಬೇಕು ಎರಡು ಕಂಪ್ಯೂಟರ್ ಗಳನ್ನು ಸುಟ್ಟು ಕರಕಲಾಗಿದೆ ಆದ್ದರಿಂದ ಸರ್ಕಾರದಿಂದ ಏನಾದರೂ ನನಗೆ ಪರಿಹಾರ ಕೊಡಿಸಿ ಎಂದು ತಿಳಿಸಿದರು.ಅಂಗಡಿ ಮಾಲೀಕರಾದ ರಮೇಶ ಮೋಪಗಾರ. ಊರಿನ ಮುಖಂಡರಾದ ಹಣಮಂತ ವಡ್ಡರ. ರಾಕೇಶ್ ಕಡಿಮನಿ. ರಂಗಪ್ಪ ವಡ್ಡರ. ಮಹಾಂತೇಶ ಮೋಪಗಾರ. ಇನ್ನೂ ಹಲವಾರು ಜನರು ಸೇರಿಕೊಂಡು ಬೆಂಕಿಯನ್ನು ನೀರಿನಿಂದ ಹಾರಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ