ಕಸಾಪ ದತ್ತಿ ನಿಧಿ ಕಾರ್ಯಕ್ರಮದಲ್ಲಿ ವಚನ ಗಾಯನ ಮಾಡಿದ – ಅನುಶ್ರೀ, ಶ್ರೀನಿಧಿ ಬಂಡೆ.
ವಿಜಯಪುರ ಏಪ್ರಿಲ್.01

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ರವಿವಾರದಂದು ಜರುಗಿದ ದತ್ತಿನಿಧಿ ಕಾರ್ಯಕ್ರಮದಲ್ಲಿ ನಾಗಠಾಣ ಗ್ರಾಮದ ಅವಳಿ ಹೆಣ್ಣು ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಶರಣ ಶ್ರೇಷ್ಠ ಬಸವಣ್ಣನವರ ವೇಷಧಾರಿಗಳಾಗಿ ವಚನಗಳನ್ನು ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ಸಾನಿಧ್ಯ ವಹಿಸಿದ್ದ, ಮನುಗೂಳಿ ವಿರಕ್ತ ಮಠದ ಶ್ರೀ ಮ ನಿ ಪ್ರ ವಿರತೀಶಾನಂದ ಸ್ವಾಮೀಜಿ, ಅನುಶ್ರೀ-ಶ್ರೀನಿಧಿ ಅವರ ವಚನ ಗಾಯನದ ಪ್ರತಿಭೆಯನ್ನು ಮೆಚ್ಚಿ ಸನ್ಮಾನಿಸಿ, ಮಕ್ಕಳಿಗೆ ಬಾಲ್ಯದಿಂದಲೇ ವಚನಗಳನ್ನು ಹೇಳುವ ರೂಢಿ ಮಾಡಿಸಿದಾಗ, ಅವರು ಸಂಸ್ಕಾರಯುತವಾಗಿ ಬೆಳೆದು ಸತ್ಪ್ರಜೆಗಳಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ.ಆಯ್ ಜಿ ಮ್ಯಾಗೇರಿ, ವಿಶ್ರಾಂತ ಮುಖ್ಯ ಅಧ್ಯಾಪಕಿ ಶಾರದಾ ಐಹೊಳ್ಳಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಹಿರಿಯ ಸಾಹಿತಿ ಡಾ.ವ್ಹಿ ಡಿ ಐಹೊಳ್ಳಿ,ಸಾಹಿತಿಗಳಾದ ಜಯಶ್ರೀ ಹಿರೇಮಠ, ಸುಜಾತಾ ಹ್ಯಾಳದ, ಗಣ್ಯ ವಾಪಾರಸ್ಥರಾದ ಎಸ್ ಎಂ ಹಣಮಶೆಟ್ಟಿ, ಎಸ್ ಕೆ ಇಂಗಳೇಶ್ವರ, ವಿಜಯಪುರ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ಅಧೀಕ್ಷಕಿ ಶಶಿಕಲಾ ನಾಯ್ಕೋಡಿ, ಶಿಕ್ಷಕ ಪ್ರಭು ಅಳ್ಳಗಿ, ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ,ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಮಾಧವ ಗುಡಿ, ಸುಭಾಷ ಕನ್ನೂರ, ಶಿಕ್ಷಕರಾದ ಸಂತೋಷಕುಮಾರ ಬಂಡೆ, ಎ ಎ ವಾಲೀಕಾರ, ಶಿಲ್ಪಾ ಭಿಸ್ಮೆ, ಶೋಭಾ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ