ಕ್ಷೇತ್ರದಲ್ಲಿ ಮೃತಪಟ್ಟಿಯಲ್ಲಿ ಅನಧಿಕೃತ ಮತದಾರರ ಸೇರ್ಪಡೆ – ಚುನಾವಣೆ ಅಧಿಕಾರಿಗೆ ಕಂಪ್ಲೇಂಟ್.
ಹುನಗುಂದ ಏಪ್ರಿಲ್.01





ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಮತ್ತು ಅವರ ಕೈ ಬಲಪಡಿಸಲು ಬಾಗಲಕೋಟ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರನ್ನು ಬಹುಮತ ದಿಂದ ಗೆಲ್ಲಿಸಲು ನಾವೆಲ್ಲರು ಸಂಘಟಿತ ಪ್ರಯತ್ನ ಮಾಡೋಣ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ತಾಲೂಕಿನ ಕೂಡಲ ಸಂಗಮದ ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಸಭಾ ಭವನದಲ್ಲಿ ಕೂಡಲ ಸಂಗಮ ಜಿಪಂ ವ್ಯಾಪ್ತಿಯ ಭೂತ ಅಧ್ಯಕ್ಷರು,ಬಿಎಲ್‌ಎ-೨ ಭೂತ ಪ್ರಮುಖರ ಮತ್ತು ಶಕ್ತಿ ಕೇಂದ್ರಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಕೆಲವು ಮತಗಟ್ಟೆಗಳ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್‌ಗರು ಅಧಿಕಾರದ ದುರಾಸೆಗೆ ಅನಧಿಕೃತ ಹೆಸರುಗಳನ್ನು ಸೇರ್ಪಡೆ ಮಾಡಿದ್ದು. ಅನಧಿಕೃತ ಮತದಾರರನ್ನು ಪಟ್ಟಿಯಲ್ಲಿ ಗುರುತಿಸಿ ಅವರ ಲೀಸ್ಟ್ನ್ ಚುನಾವಣೆ ಅಧಿಕಾರಿಗೆ ಸಲ್ಲಿಸಿ ಶುದ್ದ ಮತದಾರರ ಪಟ್ಟಿ ಮಾಡುವಲ್ಲಿ ನಮ್ಮ ನಿಮ್ಮಲ್ಲರ ಪಾತ್ರ ಮುಖ್ಯವಾಗಿದೆ. ಮೋದಿಜಿ ಅವರು ತಮ್ಮ ೨ ಅವಧಿಯಲ್ಲಿ ರೇಲ್ವೆ, ವಿಮಾನ ನಿಲ್ದಾಣ, ರಾಷ್ಟೀಯ ಹೆದ್ದಾರಿಗಳು ಸೇರಿದ್ದಂತೆ ಅನೇಕ ಅಭಿವೃದ್ದಿ ಪರ ಕಾರ್ಯಗಳನ್ನು ಮಾಡಿದ್ದು. ಅದರ ಜೊತೆಗೆ ಜನ್‌ಧನ್ ಖಾತೆ, ಉಜ್ವಲ ಯೋಜನೆಗಳ ಫಲವನ್ನು ಇಂದು ದೇಶದ ಪ್ರತಿಯೊಬ್ಬ ಫಲಾನುಭವಿಗಳು ಅದರ ಲಾಭ ಪಡೆಯುತ್ತಿದ್ದಾರೆ. ಮೋದಿ ಸರ್ಕಾರ ಪ್ರತಿಯೊಂದು ಯೋಜನೆಗಳ ಕುರಿತು ಮನೆ ಮನೆಗಳಿಗೆ ತಲುಪಿಸುವ ಕಾರ್ಯವನ್ನು ನಾವೆಲ್ಲರು ಮಾಡೋಣ ಎಂದರು.ಮುಖಂಡ ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ ಕರೋನಾ ಸಮಯದಲ್ಲಿ ಭಾರತದ ಕೆಲಸ ಮುಗಿತು ಎಂಬ ಅನ್ಯ ದೇಶಗಳ ಮಾತಿಗೆ ನಮ್ಮ ಪ್ರಧಾನಿ ನರೇಂದ್ರಜೀ ಅವರು ೨೨೧ಕೋಟಿ ವ್ಯಾಕ್ಸಿನ್‌ನ್ನು ಉಚಿತವಾಗಿ ನಿಡುವ ಮೂಲಕ ದೇಶದ ಪ್ರಜಾ ಸಂಪತ್ತನ್ನು ಉಳಿಸುವಲ್ಲಿ,೧೦ನೇ ಸ್ಥಾನದಲ್ಲಿದ್ದ ಆರ್ಥಿಕ ಸ್ಥಿತಿಯನ್ನು ೫ನೇ ಸ್ಥಾನಕ್ಕೆ ಬರುವಂತೆ ಮಾಡಿದ್ದಾರೆ ಅದಕ್ಕಾಗಿ ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡಲು ಬಾಗಲಕೋಟ ಕ್ಷೇತ್ರದ ಪಿ.ಸಿ. ಗದ್ದಿಗೌಡರ ಸೇರಿದಂತೆ ರಾಜ್ಯದ ೨೮ ಕ್ಷೇತ್ರಗಳು ಗೆಲ್ಲಿಸುವಲ್ಲಿ ನಮ್ಮ ನಿಮ್ಮೆಲ್ಲರ ಪಾತ್ರ ಮುಖ್ಯವಾಗಿದೆ ಎಂದರು. ಬಿಜೆಪಿ ಉಪಾಧ್ಯಕ್ಷ ವೀರೇಶ ಉಂಡೋಡಿ ಮಾತನಾಡಿ ದೇಶದ ಸಂಸ್ಕೃತಿ, ಮತ್ತು ಹಿಂದುತ್ವ ಮತ್ತು ದೇಶ ಏಳ್ಗೆಗೆ ಮೋದಿಯವರು ಬೇಕು. ಭೂತ ಮಟ್ಟದಿಂದಲೆ ಸಂಘಟಿತ ತತ್ವ ಸಿದ್ದಾಂತಗಳ ಜೊತೆಗೆ ಮತದಾರರ ಮನ ಗೆಲ್ಲಲು ನಾವು ನೀವೆಲ್ಲರು ಶ್ರಮಿಸಿ ೫ ನೇ ಬಾರಿಗೆ ಪಿ.ಸಿ. ಗದ್ದಿಗೌಡರ ಅವರನ್ನು ಗೆಲ್ಲಿಸ ಬೇಕೆಂದರು. ಹಿರಿಯರಾದ ಎಸ್.ಎಸ್. ಪಾಟೀಲ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಮೂಗನೂರಮಠ,ಮುಖಂಡ ರಾಜಕುಮಾರ ಬಾದವಾಡಗಿ ಮಾತನಾಡಿದರು. ನ್ಯಾಯವಾದಿ ಎಂ.ಎಲ್. ಶಾಂತಗೇರಿ,ಗ್ರಾಮೀಣ ಅಧ್ಯಕ್ಷ ಮಹಾಂತಗೌಡ ತೊಂಡಿಹಾಳ,ಶರಣಪ್ಪ ಹಲಕಾವಟಿಗಿ,ಸೋಮಶೇಖರ ಬಂಡಿವಡ್ಡರ,ಅಶೋಕ ಕಮತಗಿ,ಅಪ್ಪು ಆಲೂರ,ಅಖಂಡೇಶ ಪತ್ತಾರ,ಬಸವರಾಜ ಬಡ್ಡಿ ಸೇರಿದ್ದಂತೆ ಅನೇಕರು ಇದ್ದರು.ಬಸವರಾಜ ಹುನಕುಂಡಿ ಸ್ವಾಗತಿಸಿ ನಿರೂಪಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ