ದೇಶದಲ್ಲಿ ಬಿಜೆಪಿ ದುರಾಡಳಿತ ದಿಂದ ರಾಜ್ಯಗಳಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ – ಮುತ್ತಣ್ಣ ಮೇತ್ರಿ ಆರೋಪ.
ಜಮಖಂಡಿ ಏಪ್ರಿಲ್.02





ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ವರ್ಷ ಗತಿಸಿದರೂ ಕೂಡ ಯಾವುದೇ ಅಭಿವೃದ್ಧಿ ಮಾಡದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಮತ್ತು ಸಂವಿಧಾನದ ಬಗ್ಗೆ ಮಾತನಾಡುತ್ತಾ ಹತ್ತು ವರ್ಷ ಕಾಲಹರಣ ಮಾಡಿದರು ಅನಂತಕುಮಾರ್ ಹೆಗಡೆ ಅಂತಾ ಸಂಸದರು ಇನ್ನೊಂದು ಬಾರಿ ಮೋದಿ ಅವರು ಪ್ರಧಾನಮಂತ್ರಿಯ ಆದರೆ ಸಂವಿಧಾನವನ್ನೇ ಬದಲಾಯಿಸುತ್ತಿವೆ ಅಂತ ಬಾಯಿ ಬಾಯಿ ಬಡೆದು ಕೊಳ್ಳುತ್ತಿದ್ದಾರೆ ಎಡ ಬಲ ಸಮುದಾಯದ ಪ್ರಜ್ಞಾವಂತ ಕಾರ್ಯಕರ್ತರು ಮತ್ತು ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಬಾಗಲಕೋಟೆ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರ ಗೆಲುವು ನಿಶ್ಚಿತ ಎಂದು ದಲಿತ ಮುಖಂಡ ಮುತ್ತಣ್ಣ ಮೇತ್ರಿ ಜಮಖಂಡಿ ಅಭಿಪ್ರಾಯ ಪಟ್ಟರು ಮಹಾರಾಷ್ಟ್ರ ರಾಜ್ಯದಲ್ಲಿ ಎಸ್ಸಿ ಎಸ್ಟಿ ಮೀಸಲಾತಿಯನ್ನು ರದ್ದುಪಡಿಸ ಬೇಕೆಂದು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ ಕರ್ನಾಟಕದಲ್ಲಿ ಬಿಜೆಪಿಯ ಕೆಲ ಸಂಸದರು ಸಂವಿಧಾನವನ್ನೇ ಬದಲಾಯಿಸುತ್ತಿವೆ ಎಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು ಕೂಡ ಕ್ಯಾರೆ ಅನ್ನುತ್ತಿಲ್ಲ ಮೋದಿಯವರು, ನಿರುದ್ಯೋಗ ಯುವಕರಿಗೆ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತಿವೆ ಅಂತ ಸುಳ್ಳು ಹೇಳಿದರು ಸ್ವಿಸ್ ಬ್ಯಾಂಕಿನಿಂದ ಬ್ಲಾಕ್ ಮನಿ ತಂದು ಬಡವರ ಅಕೌಂಟಿಗೆ 15 ಲಕ್ಷ ಹಾಕುತ್ತೇವೆ ಅಂತ ಸುಳ್ಳು ಹೇಳಿದರು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 100 ಸ್ಮಾರ್ಟ್ ಸಿಟಿಗಳನ್ನು ನಿರ್ಮಾಣ ಮಾಡುತ್ತೇವೆ. ಅಂತಾ ನಂಬಿಸಿದರು ಇಂಥ ಸುಳ್ಳುಗಳನ್ನು ಹೇಳಿ ದೇಶದ ಯುವಕರನ್ನು ದಾರಿ ತಪ್ಪಿಸಿದರು ಬಾಗಲಕೋಟೆ ಲೋಕಸಭೆಗೆ 20 ವರ್ಷ ಸಂಸದರಾಗಿ ಆಯ್ಕೆಯಾದ ಪಿ ಸಿ ಗದ್ದಿಗೌಡರವರು ಬಾಗಲಕೋಟ ಜಿಲ್ಲೆಯನ್ನು ಯಾವುದೇ ಅಭಿವೃದ್ಧಿ ಮಾಡಲಿಲ್ಲ ಸಂಸತ್ತಿನಲ್ಲಿ ಯಾವುದೇ ಒಂದು ಪ್ರಶ್ನೆ ಕೇಳಲಿಲ್ಲ 20 ವರ್ಷ ಆದರೂ ಕೂಡ ಬಾಗಲಕೋಟ್ ಕುಡಚಿ ರೈಲ್ವೆ ಕಾಮಗಾರಿ ಪೂರ್ಣವಾಗಲಿಲ್ಲ, ಇಂತಹ ಸಂಸದರು ನಮಗೆ ಬೇಕಾ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಬಡವರಿಗೆ ದೀನ ದಲಿತರಿಗೆ ಅಲ್ಪಸಂಖ್ಯಾತರಿಗೆ ಹಿಂದುಳಿದ ವರ್ಗದವರಿಗೆ ರಾಜ್ಯದ ಎಲ್ಲಾ ವರ್ಗದವರಿಗೂ ಕೂಡ ಐದು ಗ್ಯಾರಂಟಿಗಳನ್ನು ಕೊಟ್ಟು ಬಡವರನ್ನು ಸದೃಢ ಮಾಡಿದೆ ಕಾಂಗ್ರೆಸ್ ಸರ್ಕಾರ, ಹಿಂದೊಮ್ಮೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ದಲಿತರಿಗೆ ಭೂ ಒಡೆತನ ಯೋಜನೆಯಲ್ಲಿ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಿದರು ದಲಿತರ ಮನೆಗಳ ಮೇಲೆ ಇದ್ದ ಸಾಲವನ್ನು ಮನ್ನಾ ಮಾಡಿದರು ಈ ಬಾರಿ ಬಾಗಲಕೋಟೆ ಲೋಕಸಭೆಗೆ ಯುವ ಪ್ರತಿಭೆ 20 ವರ್ಷದಲ್ಲಿ ಆಗದ ಕೆಲಸವನ್ನು ಕೇವಲ 5 ವರ್ಷದಲ್ಲಿ ಮಾಡುವ ಭರವಸೆಯನ್ನು ಹೊತ್ತು ಬಂದಿರುವ ಸಂಯುಕ್ತ ಪಾಟೀಲ್ ಅವರ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು ಪತ್ರಿಕಾ ಪ್ರಕಟಣೆಯಲ್ಲಿ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರಾದ ಮುತ್ತಣ್ಣ ಮೇತ್ರಿ ದಾನೇಶ್ ಘಾಟಗೆ ವಿಲಾಸ ನಡುವಿನಮನಿ ಮಾರುತಿ ಮರೆಗುದ್ದಿ ಸಂಜು ಪೂಜಾರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.