“ಉದ್ಯೋಗಸ್ತ ಮಹಿಳೆಯ ಸಂಕಷ್ಟ”….!

ಭಾರತದಲ್ಲಿ, ಕಳೆದ ಕೆಲವು ದಶಕಗಳಲ್ಲಿ ಪುರುಷರ ಪ್ರಾಬಲ್ಯ ಹೊಂದಿದ್ದ ವೃತ್ತಿಗಳಿಗೆ ಪ್ರವೇಶಿಸುವ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಇಂದು, ಭಾರತೀಯ ವೃತ್ತಿಪರ ಮಹಿಳೆಯೊಬ್ಬರು ಕಾರ್ಪೊರೇಟ್ ಕಚೇರಿಯನ್ನು ನಿರ್ವಹಿಸುವುದಕ್ಕಿಂತ ಹೆಚ್ಚಿನದನ್ನು ಮಾಡಬಹುದು. ಅವರು ಕಂಪನಿಯ ಕಾರ್ಯಾಚರಣೆಗಳನ್ನು ನಿರ್ವಹಿಸಬಹುದು ಮತ್ತು ಉದ್ಯಮಿಯಾಗಬಹುದು.




ಆದಾಗ್ಯೂ, ದುಡಿಯುವ ಮಹಿಳೆಯರ ಸಮಸ್ಯೆಯೆಂದರೆ ಅದು ಅಡೆತಡೆಗಳಿಂದ ತುಂಬಿರುತ್ತದೆ.
ಪ್ರಗತಿ ಸಾಧಿಸಿದ್ದರೂ, ಭಾರತೀಯ ಮಹಿಳೆಯರು ಇನ್ನೂ ಒಂದು ನಿರ್ದಿಷ್ಟ ಸವಾಲುಗಳನ್ನು ಎದುರಿಸುತ್ತಿದ್ದಾರೆ, ಅವುಗಳಲ್ಲಿ ಕೆಲವು ಆಳವಾಗಿ ಬೇರೂರಿರುವ ಸಾಮಾಜಿಕ ರೂಢಿಗಳಿಗೆ ಸಂಬಂಧಿಸಿವೆ. ಅಂತಹ ಒಂದು ನಡೆಯುತ್ತಿರುವ ಸಮಸ್ಯೆಯೆಂದರೆ ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯ , ಇದು ಅವಕಾಶಗಳನ್ನು ಮಿತಿಗೊಳಿಸುತ್ತದೆ, ನ್ಯಾಯಯುತ ಪ್ರಾತಿನಿಧ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಮಹಿಳೆಯರಿಗೆ ಅವರ ಪುರುಷ ಪ್ರತಿರೂಪಗಳಿಗೆ ಹೋಲಿಸಿದರೆ ಅಸಮಾನ ಅನುಭವಗಳನ್ನು ಸೃಷ್ಟಿಸುತ್ತದೆ. ಈ ಸಮಸ್ಯೆಗಳು ಹೆಚ್ಚಾಗಿ ಗಮನಹರಿಸದೆ ಉಳಿಯುತ್ತವೆ ಮತ್ತು ಭಸ್ಮವಾಗುವುದು, ವೃತ್ತಿ ಬೆಳವಣಿಗೆ ಸ್ಥಗಿತಗೊಳ್ಳುವುದು ಮತ್ತು ಕೆಲವು ಸಂದರ್ಭಗಳಲ್ಲಿ, ಕಾರ್ಯಪಡೆಯಿಂದ ಬೇಗನೆ ನಿರ್ಗಮಿಸಲು ಕಾರಣವಾಗಬಹುದು.
ಮಾನಿನಿ, ಲಲಿತೆ, ವನಿತೆ, ಸ್ತ್ರೀ, ಹೆಣ್ಣು ಮುಂತಾದ ಹೆಸರಿನಿಂದ ಕರೆಯಲ್ಪಡುವ ಮಹಿಳೆಯು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಅನುರಿಣಿತಳು.”ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎನ್ನುವ ನಾಣ್ನುಡಿಯಂತೆ ಹೆಣ್ಣು, ಮಕ್ಕಳ ಹಾಗೂ ಕುಟುಂಬದ ಉದ್ಧಾರದೆಡೆಗೆ ಸದಾ…. ಶ್ರಮಿಸುವ “ಆದಿಶಕ್ತಿ”ಎಂದೇ ಹೇಳಬಹುದು.ಹಾಗೆ ನೋಟಿದಾಗ ಉದ್ಯೋಗಸ್ಥ ಮಹಿಳೆ ಯಾದರಂತೂ….. ಎಲ್ಲವನ್ನೂ ಅಂದರೆ ಮನೆ, ಉದ್ಯೋಗದ ಸ್ಥಳ, ಕುಟುಂಬ, ಸಿಬ್ಬಂದಿ ವರ್ಗ, ನೆರೆಹೊರೆ ಇವೆಲ್ಲವನ್ನೂ ಸರಿದೋಗಿಸಲು ಮತ್ತು ಅವಳ ಕರ್ತವ್ಯಕ್ಕೆ ನ್ಯಾಯ ಒದಗಿಸಲು ಅವಳು ಪಡುವ ಪಾಡು ಅಷ್ಟಿಷ್ಟಲ್ಲ.ಅವಳ ವೃತ್ತಿ ಅಲ್ಲದೆ ಪ್ರವೃತ್ತಿಗಳಲ್ಲೂ…. ಕೂಡ ತೊಡಗಿಸಿಕೊಂಡು ಸಮಯವನ್ನು ಹೊಂದಿಸಿ ಅದರಲ್ಲೂ ಮೇಲ್ಪಂತಿ ಸಾಧಿಸಲು ಯೋಚಿಸುತ್ತಾಳೆ ಹಾಗೂ ಯೋಜಿಸುತ್ತಾಳೆ. ಅಷ್ಟೇ…… ಅಲ್ಲದೆ ಕಾಲಕ್ಕೆ ತಕ್ಕಂತೆ update ಆಗಿ ಧರಿಸುಗಳನ್ನು ಧರಿಸುವುದು ಅಷ್ಟೇ ಅಲ್ಲ ಈಗಿನ ತಾಂತ್ರಿಕ ಯುಗಕ್ಕೆ ಹೊಂದಿಕೊಂಡು ಎಲ್ಲವನ್ನು ಆನ್ಲೈನ್ನಲ್ಲಿ ಅಪ್ಡೇಟ್ ಮಾಡಲು ಸಿದ್ದಳಿರುತ್ತಾಳೆ.
ಇತಿಹಾಸವನ್ನು ಒಮ್ಮೆ ನೋಡಿದಾಗ 12ನೇ ಶತಮಾನದ ಅಕ್ಕಮಹಾದೇವಿ…. ಉದ್ಯೋಗಸ್ಥಳ ಅಲ್ಲದಿದ್ದರೂ ಸಮಾಜದಲ್ಲಿನ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ ಅನೇಕ ಸಾಮಾಜಿಕ ಕಟ್ಟುಪಾಡುಗಳನ್ನು ತೊರೆದು ಮುಂದಡಿ ಇರುತ್ತಾಳೆ. ಇವುಗಳನ್ನೆಲ್ಲ ನೋಡಿದಾಗ ಮಹಿಳೆ “”ಸರ್ವಶಕ್ತಳು”ಎಂದೆನಿಸುತ್ತದೆ.

ವಿಜಯಕಲಾ.ಟಿ ಎಂ
ಲೇಖಕಿ, ಚಳ್ಳಕೆರೆ