ಕ್ರೂಸರ್ ಓವರ್ ಟೇಕ್ ಮಾಡುವ ಭರದಲ್ಲಿ ತೊಗರಿ ಕಟಾವು ಯಂತ್ರಕ್ಕೆ ಮುಖಾಮುಖಿ ಡಿಕ್ಕಿ – ಐದು ಸ್ಥಳದಲ್ಲಿ ಸಾವು.
ಬಿಳೇಬಾವಿ ಡಿ.07

ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿ ಸಮೀಪದ ಬಿಳೆಬಾವಿ ಕ್ರಾಸ್ ಹತ್ತಿರ ಭೀಕರ ರಸ್ತೆ ಅಪಘಾತ ಅಪಘಾತದಲ್ಲಿ ವಿಜಯಪುರ ತಾಲೂಕಾ ಅಲಿಯಾಬಾದ್ ಗ್ರಾಮದ ಭೀಮನಗೌಡ ಸಂಕನಾಳ ಎಂಬುವರ ಫ್ಯಾಮಿಲಿ ಶುಕ್ರವಾರ ದಂದು ಅಲಿಯಾಬಾದ ದಿಂದ ಹುಣಸಿಗಿ ತಾಲೂಕಿನ ಅಗ್ನಿ ಎಂಬ ಗ್ರಾಮಕ್ಕೆ ಕನ್ಯಾ ನೋಡಲು ಹೋಗಿದ್ದರು.
ವಾಪಸ್ ಬರುವಾಗ ಬಿಳೆಬಾವಿ ಕ್ರಾಸ್ ಬಳಿ ತೊಗರಿ ಕಟಾವ್ ಮಷೀನು ಮತ್ತು ಕಾರಿಗೆ ದುರಂತ ಸಂಭವಿಸಿದೆ ಕಾರಿನಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳು ಮೂವರು ಗಂಡು ಮಕ್ಕಳು ಐದು ಜನ ಮೃತಪಟ್ಟಿದ್ದಾರೆ ದುರಂತ ಸ್ಥಳಕ್ಕೆ ತಾಳಿಕೋಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ