ಫಲಿಸಿತು ಕನ್ನಡಿಗರ ಪ್ರಾರ್ಥನೆ…..! ಸ್ವಾತಿಕ್ ಪುನರ್ಜನ್ಮ…..!
ಇಂಡಿ ಏಪ್ರಿಲ್.06

ಸಾವು ಗೆದ್ದು ಬಂದ ಸ್ವಾತಿಕ್ ನ ಯಶಸ್ವಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಸಿಸ್ಟೆಂಟ್ ಕಮಿಷನರ್ ಅಬೀದ್ ಗದ್ಯಾಳ ಅವರಿಗೆ ಸನ್ಮಾಸಿ ಗೌರವಿಸುವ ಮೂಲಕ ತಾಲೂಕಾ ಮತ್ತು ಜಿಲ್ಲಾ ಆಡಳಿತ, ಜನ ಪ್ರತಿನಿಧಿ ಹಾಗೂ ಸರಕಾರದ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಅಭಿನಂದನೆ ಸಲ್ಲಿಸಿದರು.ಶುಕ್ರವಾರ ಪಟ್ಟಣದಲ್ಲಿರುವ ತಾಲ್ಲೂಕು ಅಡಳಿತ ಸೌಧದ ಉಪ ವಿಭಾಗ ಕಛೇರಿಯಲ್ಲಿ, ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ನೂತನ “ಸ್ನೇಹ ಸಂಗಮ” ಗೆಳೆಯರ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸಿದರು.ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕ ಜರುಗಿದ್ದ ಕೊಳವೆ ಬಾವಿ ದುರಂತದಲ್ಲಿ “ಸಾತ್ವಿಕ ಮೃತ್ಯುಂಜಯನಾಗಿ” ಹೊರ ಬಂದಿದ್ದಾನೆ. ಬೋರ್ ವೆಲ್ ನಲ್ಲಿ ಸಿಲುಕಿದ್ದ ಮಗುವಿನ ರಕ್ಷಣೆಯನ್ನು ಸುಮಾರು 20 ಗಂಟೆಗಳ ಕಾಲದ ನಿರಂತರ ಕಾರ್ಯಾಚರಣೆಯಲ್ಲಿ NDRF – SDRF, ಪೊಲೀಸರು, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ತಾಲೂಕಾ – ಜಿಲ್ಲಾ ಆಡಳಿತದ ಕಾರ್ಯಾಚರಣೆ ಹಾಗೂ ಅವಿರತ ಪರಿಶ್ರಮ ಸಾತ್ವಿಕ ವಿಜಯಶಾಲಿ ಆಗಿದ್ದಾನೆ ಎಂದು ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ನ್ಯಾಯವಾದಿ, ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯ ಅಧ್ಯಕ್ಷ ಎಸ್ ಬಿ ಕೆಂಬೋಗಿ ಮಾತನಾಡಿದ ಅವರು, ನಮ್ಮ ತಾಲ್ಲೂಕಿನಲ್ಲಿ ಎರಡನೇ ಹಾಗೂ ಜಿಲ್ಲೆಯಲ್ಲಿ ಇದು ಮೂರನೇ ದುರ್ಘಟನೆಯಾಗಿದೆ. ಆದರೆ ಎರಡು ಘಟನೆಯಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿದರೂ ಮಕ್ಕಳನ್ನು ಉಳಿಸಿ ಕೊಳ್ಳಲಾಗಲಿಲ್ಲ. ಆದರೆ ಈ ಬಾರಿ ಅತ್ಯಂತ ಕ್ರೀಯಾಶೀಲ, ಚುರುಕುತನ ದಿಂದ ಯೋಜಿತ ಕಾರ್ಯ ನಿರ್ವಹಣೆಯಿಂದ ಮಗುವಿನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ಪತ್ರಕರ್ತ ಶಂಕರ್ ಜಮಾದಾರ ಮಾತನಾಡಿದ ಅವರು, ಇಡೀ ರಾಜ್ಯದ ಕನ್ನಡಿಗರ ಒಕ್ಕೊರಲಿನ ಪ್ರಾರ್ಥನೆ ಯಿಂದ, ಈ ಭಾಗದ ದೈವಿ ಶಕ್ತಿ ಕೃಪೆಯಿಂದ ತಾಲೂಕಾ – ಜಿಲ್ಲಾ ಆಡಳಿತ ಹಾಗೂ ಜನ ಪ್ರತಿನಿಧಿಗಳ ಅವಿರತವಾದ ಪರಿಶ್ರಮ ದಿಂದ ಸ್ವಾತಿಕ್ ನ ಪುನರ್ಜನ್ಮವಾಯಿತು. ಭೀಮಾತೀರದ ಪಯಣ ಎಂದರೆ, ಇಲ್ಲಿ ಕಷ್ಟಕರ ನಿಲ್ದಾಣಗಳು, ಅಪಾಯಕಾರಿ ಸವಾಲುಗಳು ಹೆಚ್ಚಾಗಿವೆ. ಇಲ್ಲಿ ಜನರೊಂದಿಗೆ ಪರಸ್ಪರ ನಂಬಿಕೆ ವಿಶ್ವಾಸ ಪ್ರಾಮಾಣಿಕ ಕರ್ತವ್ಯಗಳೊಂದಿಗೆ ಮನುಷ್ಯ ಜಾತಿ “ತಾನೊಂದೆ ನೆಲಂ” ಆದಿಕವಿ ಪಂಪನ ಮಾತನ್ನು ಅನುಸರಿಸಿ ಕೊಂಡು ಸಾಗಿದರೆ ಖಂಡಿತ ಯಶಸ್ವಿ ಯಾಗಲು ಸಾಧ್ಯ. ಉಪನ್ಯಾಸಕ ಮಹಾಂತೇಶ ಪಾಟೀಲ, ಶಿಕ್ಷಕ, ಸಾಹಿತಿ ದಶರಥ ಕೋರಿ ಮಾತನಾಡಿದರು.ಈ ಸಂದರ್ಭದಲ್ಲಿ ಜೈ ಹನುಮಾನ್ ಸಹಕಾರಿ ಸಂಘದ ಅಧ್ಯಕ್ಷ ಜಗದೇವ ರಾಠೋಡ, ಉಪನ್ಯಾಸಕ ಮಕ್ತುಮ ಮುಲ್ಲಾ, ಫಯಾಜ ಭಾಗವಾನ, ಸುರೇಶ ಡೊಂಗ್ರಜ್, ಶಿವ ಶರಣ ನಾಟಿಕಾರ, ರೇವಣ್ಣ ಹತ್ತಳ್ಳಿ, ಹಣಮಂತ ಗುಡ್ಲ, ಸಾಯಿಕುಮಾರ ಪಾಟೀಲ, ರಫಿಕ್ ಚೌಧರಿ, ಸುನೀಲ ಚವ್ಹಾಣ ಹಾಗೂ ಇನ್ನೂ ಅನೇಕ ಸ್ನೇಹಿತ ಮಿತ್ರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ