ಸೌಹಾರ್ದತೆಯಿಂದ ಬದುಕುವುದೆ ನಮ್ಮ – ಜೀವಾಳ ಎಂದ ರಹೆಮತ್ ಅಲಿ.
ಮಾನ್ವಿ ಸ.01





ಮಾನ್ವಿ ಅಂದರೆ ಸಾಕು ಸೌಹಾರ್ದತೆಯ ತವರೂರು ಎಂದು ಪ್ರತೀತಿ ಇದೆ, ಹೀಗಾಗಿ ಹಿಂದೂ ಮುಸ್ಲಿಂ ಬಾಂಧವರೆಲ್ಲರೂ ಒಂದೇ ಎಂದು ಸಾರೋಣವೆಂದು ಸಹೋದರರಿಬ್ಬರಾದ ರಹೆಮತ್ ಅಲಿ ಹಾಗೂ ಹಬೀಬ್ ಅವರು ಗಣೇಶ ವಿಸರ್ಜನೆಯ ಹಿಂದೂ ಬಾಂಧವರಿಗೆ ಅನ್ನ ಸಂತರ್ಪಣೆ ಮಾಡಿ ಮಾದರಿ ಯಾಗಿದ್ದಾರೆ.
ಹಬೀಬ್ ಮತ್ತು ರಹೆಮತ್ ಅವರು ಸಾಮಾಜಿಕ ಸೇವೆ ಮಾಡುತ್ತ ದೇಶದಲ್ಲಿರುವ ಎಲ್ಲಾ ಧರ್ಮಿಯರು ಒಂದೇಯಾಗಿ ಹಬ್ಬ ಹರಿದಿನಗಳನ್ನು ಆಚರಿಸಿದಾಗ ಮಾತ್ರ ಸೌಹಾರ್ದತೆಯ ಸಂಕೇತವನ್ನು ಸಾರಿದಂತಾಗುತ್ತದೆ ಎಂಬ ಗುಣ ಸಹೋದರರಿಬ್ಬರಲ್ಲಿ ಇದೆ ಎಂದು ವೀರಶೈವ ಲಿಂಗಾಯತ ಸಮಾಜದ ತಾಲೂಕಾಧ್ಯಕ್ಷ ಅರುಣ್ ಚಂದಾ ತಿಳಿಸಿದ್ದಾರೆ.
ಗಣೇಶ ವಿಸರ್ಜನೆಯ ಹಿಂದೂ ಬಾಂಧವರು ಸಹ ರಹೆಮತ್ ಮತ್ತು ಹಬೀಬ್ ಅವರ ಸೇವೆಯನ್ನು ಮೆಚ್ಚಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಸಾಗೋಣವೆಂದು ಗಣೇಶ ವಿಸರ್ಜನೆಯ ಹಿಂದೂ ಬಾಂಧವರು ತಿಳಿಯಲು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ