ಶ್ರೀ ಸದಾಶಿವ ಚಂದ್ರಗಿರಿ ದೇವಿ ಜಾತ್ರಾ ಹಾಗೂ ಶ್ರೀ ಹನುಮಾನ ದೇವರ ಓಕಳಿಯ ಕಾರ್ಯಕ್ರಮ.
ಕುಂಬಾರಹಳ್ಳ ಏಪ್ರಿಲ್.08

ಕುಂಬಾರಹಳ್ಳ ಆದಿಶಕ್ತಿ ಶ್ರೀ ಚಂದ್ರಗೀರಿ ದೇವಿ ಹಾಗೂ ಚಕ್ರವರ್ತಿ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವವು ಏಪ್ರಿಲ್ 9 ರಿಂದ 11 ರವರೆಗೆ ಅದ್ದೂರಿಯಾಗಿ ನಡೆಯಲಿದೆ ಏಪ್ರಿಲ್ 9 ರಂದು ಮುಂಜಾನೆ ಮಹಿಳೆಯರಿಗಾಗಿ ಸೈಕ್ಲಿಂಗ್ ಸ್ಪರ್ಧೆ ಅದೇ ದಿನ ಜೋಡು ಕುದುರೆ ಗಾಡಿ ಸ್ಪರ್ಧೆ ರಾತ್ರಿ 10.30 ಕ್ಕೆ ಹನುಮಾನ್ ನಾಟ್ಯ ಸಂಘ ಕುಂಬಾರಹಳ್ಳ ಇವರ ಅರ್ಪಿಸುವ ಶಿವಾಜಿ ಮೆಲೋಡಿ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮ ಜರಗುವುದು ಏಪ್ರಿಲ್ 10 ರಂದು ಮುಂಜಾನೆ 7 ಗಂಟೆಗೆ ಪುರುಷರಿಗಾಗಿ ಸೈಕಲ್ ಸ್ಪರ್ಧೆ ಇದಾದ ನಂತರ ಸಂಗ್ರಾಣಿ ಕಲ್ಲು ಎತ್ತುವುದು ಮತ್ತು ಮಹಿಳೆಯರಿಗಾಗಿ ಮ್ಯೂಸಿಕಲ್ ಚೇರ್ಸ್ ಸ್ಪರ್ಧೆ ಮಧ್ಯಾಹ್ನ ನಿರೋಕಳಿ ರಾತ್ರಿ 10.30 ಕ್ಕೆ ಬಸವೇಶ್ವರ ನಾಟ್ಯ ಸಂಘ ಕುಂಬಾರಹಳ್ಳ ಇವರಿಂದ ನಾಟಕ ಜರುಗುವುದು ಏಪ್ರಿಲ್ 11 ರಂದು ಮುಂಜಾನೆ 8 ಕ್ಕೆ ಕರಡಿ ಮದಾಲಿಸಿ 11 ಗಂಟೆಗೆ ಪಂಕ್ತಿ ಮಧ್ಯಾಹ್ನ 3 ಗಂಟೆಗೆ ಹಾಲೋಕಳಿ ಇದಾದ ನಂತರ 4 ಗಂಟೆಗೆ ರಾಷ್ಟ್ರಮಟ್ಟದ ಸುಪ್ರಸಿದ್ಧ ಜಂಗಿ ನಿಕಾಲಿ ಕುಸ್ತಿಗಳು ರಾತ್ರಿ 10:30ಕ್ಕೆ ಸದಾಶಿವ ನಾಟ್ಯ ಸಂಘ ಕುಂಬಾರಹಳ್ಳ ಇವರಿಂದ ನಾಟಕ ಪ್ರದರ್ಶನಗಳು ನಡೆಯಲಿವೆ ಎಂದು ಶ್ರೀ ಚಂದ್ರಗಿರಿ ದೇವಿ ಹಾಗೂ ಚಕ್ರವರ್ತಿ ಸದಾಶಿವ ಅಜ್ಜನವರ ಮಠದ ಸ್ವಾಮೀಜಿಗಳಾದ ಶ್ರೀ ಜಗದೀಶಯ್ಯ ಚ ಮಠಪತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.