ಪಿ.ಆರ್.ಓ ಮತ್ತು ಎಪಿ.ಆರ್.ಓ ಗಳಿಗೆ ತರಬೇತಿ ಚುನಾವಣೆ ಮಾರ್ಗಸೂಚಿ ಪಾಲಿಸಿ.
ಇಂಡಿ ಏಪ್ರಿಲ್.08

ಚುನಾವಣೆ ಆಯೋಗದ ಮಾರ್ಗಸೂಚಿಯ ಅನುಸಾರ ಕಾರ್ಯ ನಿರ್ವಹಿಸಬೇಕು ಎಂದು ಸಹಾಯಕ ಚುನಾವಣೆ ಅಧಿಕಾರಿ ಮತ್ತು ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ಆದರ್ಶ ಪ್ರೌಢ ಶಾಲೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲಾ ಪಿಆರ್‌ಒ ಮತ್ತು ಎಪಿಆರ್‌ಓ ಇವರಿಗೆ ಚುನಾವಣೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಮಾಕ ಪೋಲ, ಅದರ ಕಾರ್ಯ ವಿಧಾನ,ಮತ್ತು ನಿಜವಾದ ಮತದಾನದ ಆರಂಭದ ಬಗ್ಗೆ ತಿಳಿಸಿದರು.ಚುನಾವಣೆ ಪೂರ್ವ ಹೋದ ನಂತರ ಮಾಡುವ ಕಾಗದಗಳ ಮತ್ತು ವಿವಿಧ ನಮೂನೆ ಕಾಗದದ ಎಲ್ಲಾ ವಿವರ ಮತ್ತು ಇವಿಎಮ್, ವಿವಿಪ್ಯಾಡ ಕುರಿತು ಮಾಹಿತಿ ನೀಡಿದರು.ಅದರಂತೆ ೧೯ ಜನ ಮಾಸ್ಟರ್ ಟ್ರೇರ‍್ಸ ತರಬೇತಿದಾರರು ವಿವಿಧ ಕೋಣೆಗಳಲ್ಲಿ ಚುನಾವಣೆ ನಡೆಸುವ ಕುರಿತು ವಿವರವಾದ ಮಾಹಿತಿ ನೀಡಿದರು.ತರಬೇತಿಯಲ್ಲಿ ೩೭೯ ಪಿಆರ್‌ಒ ಮತ್ತು ೫೫೪ ಎಪಿಆರ್‌ಒ ಭಾಗವಿಹಿಸಿ ಚುನಾವಣೆ ತರಬೇತಿ ಪಡೆದರು.ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವಪ್ಪ ಮುರಗಿ,ತಹಸೀಲ್ದಾರ ಮಂಜುಳಾ ನಾಯಕ, ಇಒ ನೀಲಗಂಗಾ ಬಬಲಾದ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಚುನಾವಣೆ ಶಿರಸ್ತೆದಾರ ಆರ್.ಬಿ.ಮೂಗಿ, ರವಿ ಮಡಿವಾಳರ, ಕೆವಿಕೆ ಮುಖ್ಯಸ್ಥ ಶಿವಶಂಕರಮೂರ್ತಿ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ, ಶಿರಸ್ತೆದಾರ ಬಸವರಾಜ ರಾವೂರ, ಮತ್ತಿತರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ