ಹತ್ತು ಸಾವಿರ ಜಾನುವಾರುಗಳಿಗೆ ಲಸಿಕೆ ಕಾರ್ಯಕ್ರಮ.
ಇಂಡಿ ಏಪ್ರಿಲ್.08

ತಾಲೂಕಿನ ಹತ್ತು ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ| ರಾಜಕುಮಾರ ಅಡಕಿ ಹೇಳಿದರು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಾತಪುರ ಗ್ರಾಮ, ಹೊಲ ಹಾಗೂ ಅಡವಿ ವಸ್ತಿಗಳಲ್ಲಿರುವ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 48 ಸಿಬ್ಬಂದಿ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ತೊಡಗಿದ್ದು ಪ್ರತಿಯೊಬ್ಬ ಸಿಬ್ಬಂದಿ ವಿವಿಧ ಗ್ರಾಮಗಳಿಗೆ ತೆರಳಿ 80ರಿಂದ 100 ಜಾನುವಾರುಗಳಿಗೆ ಏ.30ರವರೆಗೆ ಲಸಿಕೆ ಹಾಕಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಜಯಪ್ರಕಾಶ ಕರಣೆ, ರಾಮಣ್ಣ ಉಪ್ಪಾರ, ಜಾವೇದ್ ಬಾಗವಾನ, ರಮೇಶ ನರಳೆ ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ