ಕೊಟ್ಟೂರಿನಲ್ಲಿ ದ್ವಿತೀಯ ಬಾರಿ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿ ಏರ್ಪಡಿಸಿದೆ.
ಕೊಟ್ಟೂರು ಡಿಸೆಂಬರ್.21

ತಾಲೂಕಿನಲ್ಲಿ ದ್ವಿತೀಯ ಬಾರಿ ಮಹಿಳಾ ಮತ್ತು ಪುರುಷರ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿಯನ್ನು ನಡೆಸಲಾಗುವುದು ಎಂದು ಶ್ರೀ ಗುರು ಕೊಟ್ಟೂರೇಶ್ವರ ಖೋ ಖೋ ಸ್ಪೋರ್ಟ್ಸ್ ಕ್ಲಬ್ ನ ತಾಲೂಕಾ ಅಧ್ಯಕ್ಷ ಶಂಕರ್ ರವರು ತಿಳಿಸಿದರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶ್ರೀ ಗುರು ಕೊಟ್ಟೂರೇಶ್ವರ ಸ್ಪೋರ್ಟ್ಸ್ ಕ್ಲಬ್ ಹಾಗೂ ವಿಜಯನಗರ ಖೋ ಖೋ ಸ್ಪೋರ್ಟ್ಸ್ ಕ್ಲಬ್ ಮತ್ತು ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ಬೆಂಗಳೂರು ಇವರ ಸಂಯೋಗದಲ್ಲಿ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿ ಜನವರಿ 19 ರಿಂದ ಪ್ರಾರಂಭ ಗೊಂಡು ಮೂರು ದಿನಗಳ ಕಾಲ ಸಿಪಿಎಡ್ ಕಾಲೇಜ್ ಮೈದಾನದಲ್ಲಿ ನಡೆಯುವ ಖೋ ಖೋ ಪಂದ್ಯಾವಳಿಯಲ್ಲಿ ಸುಮಾರು 20 ಜಿಲ್ಲೆಗಳಿಂದ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಪುರುಷ ತಂಡಗಳು 16 ಮಹಿಳಾ ತಂಡಗಳು 08 ಭಾಗವಹಿಸಲಾಗಿದೆ ಎಂದು ಹೇಳಿದರು.

ಕಾರ್ಯದರ್ಶಿ ಲಿಂಗನಾಯ್ಕ ರವರು ಮಾತನಾಡಿ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿಗೆ ಬರುವ ಎಲ್ಲಾ ಕ್ರೀಡಾಪಟುಗಳಿಗೆ ಊಟ, ವಸತಿ, ಸಾರಿಗೆ ವ್ಯವಸ್ಥೆಯನ್ನು ಕ್ರಮಬದ್ದವಾಗಿ ನೋಡಿ ಕೊಳ್ಳಲಾಗುವುದು ಮೂರು ದಿನಗಳ ಕಾಲ ನಡೆಯುವ ಪಂದ್ಯವನ್ನು 10 ಸಾವಿರ ಜನ ಕುಳಿತು ವೀಕ್ಷಣೆ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಇದರಲ್ಲಿ ಜಯಶೀಲರಾದ ತಂಡದವರಿಗೆ ಪ್ರಥಮ ಬಹುಮಾನ 50 ಸಾವಿರ ದ್ವಿತೀಯ ಬಹುಮಾನ 40 ಸಾವಿರ ತೃತೀಯ ಬಹುಮಾನ 30 ಸಾವಿರ ಹಾಗೂ ಚತುರ್ಥಿ ಬಹುಮಾನವಾಗಿ 20 ಸಾವಿರ ನಗದು ರೂಪದಲ್ಲಿ ಇದರ ಜೊತೆಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಕೆ. ಗುರು ಬಸವರಾಜ್ ಕಾನೂನು ಸಲಹೆಗಾರರು ಗುರು ಕೊಟ್ಟೂರೇಶ್ವರ ಸ್ಪೋರ್ಟ್ಸ್ ಕ್ಲಬ್, ಕಾರ್ತಿಕ್, ಗಿರೀಶ್, ಮುಂತಾದವರು ಇದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು