ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ.
ಚೋರನೂರು ಏಪ್ರಿಲ್.09

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೋರನೂರು ಕಡೆಗೆ ಹೋಗುವ ರಸ್ತೆಯ ಗುಂಡಿನ ಹೊಳೆ ಹತ್ತಿರವಿರುವ ಬೀಜೋತ್ಪಾದನಾ ಕೇಂದ್ರದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ್ ಇವರ ನೇತೃತ್ವದಲ್ಲಿ ಸಿಪಿಐ ಕೂಡ್ಲಿಗಿ ಪಿಎಸ್ಐ ಕೂಡ್ಲಿಗಿ ಠಾಣೆ ಯವರು ಏಪ್ರಿಲ್ 9 ರಂದು ಬೆಳಿಗ್ಗೆ 11:15 ಗಂಟೆಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ಸುಮಾರು 370 ಗ್ರಾಂ ಗಾಂಜಾ ವಶಪಡಿಸಿ ಕೊಂಡು ಅಂದಾಜು ಬೆಲೆ 37 ಸಾವಿರ ರೂಪಾಯಿ ಗಳು ಮತ್ತು ನಗದು ಹಣ ರೂ.250 ಜಪ್ತಿ ಮಾಡಿ ಆರೋಪಿಯನ್ನು ದಸ್ತಗಿರಿ ಮಾಡಿ ಎನ್ ಡಿ ಪಿ ಎಸ್ ಕಾಯ್ದೆ ಅಡಿ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದರಿ ಕಾರ್ಯಚಣೆಯಲ್ಲಿ ಭಾಗವಹಿಸಿದ ಪೊಲೀಸ್ ಉಪಾಧೀಕ್ಷಕರು ಸಿಪಿಐ ಕೂಡ್ಲಿಗಿ ಪಿಎಸ್ಐ ಕೂಡ್ಲಿಗಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೋಲಿಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ಅವರು ಪ್ರಶಂಸಿದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ.