ಕೂಡ್ಲಿಗಿ ತಾಲೂಕಿಗೆ ಟಾಪರ್ ಹೊಸಹಳ್ಳಿ ಇಂದು ಕಾಲೇಜಿನ ವಿದ್ಯಾರ್ಥಿನಿಯರು.
ಕಾನಾ ಹೊಸಹಳ್ಳಿ ಏಪ್ರಿಲ್.12

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100% ಫಲಿತಾಂಶ ದಾಖಲಿಸುವ ಮೂಲಕ ಕಾನ ಹೊಸಹಳ್ಳಿ ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೂಡ್ಲಿಗಿ ತಾಲ್ಲೂಕಿಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಇಂದು ಕಾಲೇಜಿನ ಕಲಾ ವಿಭಾಗದಲ್ಲಿ ವಿಶ್ವನಾಥ್ ಕೆ.ಜಿ 581- 600, 94.67% ತಾಲ್ಲೂಕು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ವಾಣಿಜ್ಯ ವಿಭಾಗ ವಿದ್ಯಾರ್ಥಿಯಾಗಿರುವ ಇವರು ೬೦೦ಕ್ಕೆ 568-94.67% ಅಂಕಗಳನ್ನು ಗಳಿಸಿ ತಾಲ್ಲೂಕಾ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಅಲ್ಲದೆ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಸಹನ 555-92.05% ಅಂಕ ಪಡೆದು, ಗಮನ ಸೆಳೆದಿದ್ದಾರೆ. ಇಂದು ಪದವಿ ಪೂರ್ವ ಕಾಲೇಜಿಗೆ ಶೇ.100% ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 54 ವಿದ್ಯಾರ್ಥಿಗಳ ಪೈಕಿ 54 ಮಂದಿ ಉತ್ತೀರ್ಣರಾಗಿದ್ದಾರೆ.

28 ಮಂದಿ ಅತ್ಯುನ್ನತ ಶ್ರೇಣಿ ಹಾಗೂ ಪ್ರಥಮ ಶ್ರೇಣಿ 23 ವಿದ್ಯಾರ್ಥಿಗಳು ಮತ್ತು 3 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಗೊಂಡಿದ್ದಾರೆ. ತಾಲ್ಲೂಕಿಗೆ ಟಾಪರ್ ಆಗಿರುವ ವಿದ್ಯಾರ್ಥಿಗೆ ಕಾನ ಹೊಸಹಳ್ಳಿಯ ಇಂದು ಕಾಲೇಜು ಆಡಳಿತ ಮಂಡಳಿಯವರು, ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಭೋದಕ ಮತ್ತು ಭೋದಕೇತರ ವರ್ಗದ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ.