ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ಮಹಿಳಾ ದಿನಾಚರಣೆ.

ಹಾಸನ ಏಪ್ರಿಲ್.12

ಹಾಸನದ ದೊಡ್ಡಪುರ ಗೆಟ್ ಬಳಿ ಇರುವ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಹಾಸನ ಜಿಲ್ಲಾ ಘಟಕ 11:04:2024 ರಂದು ಒಕ್ಕಲಿಗರ ಸಮುದಾಯದ ಬಹುಮುಖ ಪ್ರತಿಭೆ ಮಹಿಳಾ ಸಾಧಕಿಯಾದಂತಹ ಸಾಹಿತಿ, ಸಮಾಜ ಸೇವಕಿ, ಶಿಕ್ಷಕಿ, ಪತ್ರಕರ್ತೆ, ಸಾಮಾಜಿಕ ಚಿಂತಕಿಯಾದಂತಹ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರನ್ನು ಉದ್ಘಾಟಕಿಯಾಗಿ ಮತ್ತು ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಮಹಿಳಾ ಸಾಧಕಿ ಎಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ಮಹಿಳಾ ದಿನಾಚರಣೆಯ ಕುರಿತು ಕಾರ್ಯಕ್ರಮ ಕುರಿತಾಗಿ ಮಾತನಾಡಿದರು. ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹವನ್ನು ನೀಡಬೇಕು. ಬೆಂಬಲ ನೀಡಿ ಸಹಕಾರ ನೀಡಬೇಕು. ಮಹಿಳೆಯು ತಮ್ಮ ಹಕ್ಕುಗಳ ಬಗ್ಗೆ ಧೈರ್ಯವಾಗಿ ಪ್ರಶ್ನಿಸುವಂತೆ ಆಗಬೇಕು. ಆಗ ಮಾತ್ರ ಮಹಿಳೆಯ ಶೋಷಣೆಯು ಮುಕ್ತವಾಗುತ್ತದೆ. ಪ್ರತಿಯೊಂದು ಮನೆಯಿಂದಲೇ ಮಹಿಳೆಗೆ ಪ್ರೋತ್ಸಾಹ ಮತ್ತು ಗೌರವ ನೀಡುವಂತಾಗ ಬೇಕು . ಇಂದು ಅವಿಭಕ್ತ ಕುಟುಂಬಗಳು ನಶಿಸಿ ಹೋಗುತ್ತಿವೆ. ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿರುವುದು ಸಂಸ್ಕೃತಿಯ ಕೊರತೆಗೆ ಕಾರಣವಾಗುತ್ತಿದೆ. ಸಾಹಿತ್ಯ ಲೋಕದಲ್ಲಿ ಮಹಿಳೆಯು ಹೆಚ್ಚಾಗಿ ತೊಡಗಿಸಿ ಕೊಳ್ಳಬೇಕು.

ಆಗ ಮಾತ್ರ ನಮ್ಮ ಕನ್ನಡವನ್ನು ಉಳಿಸಲು ಸಾಧ್ಯ. ಪ್ರತಿಯೊಬ್ಬ ಮಹಿಳೆಯು ವಿದ್ಯಾವಂತಳಾಗಬೇಕು. ಮತ್ತು ಪ್ರತಿಭೆಗಳ ಮುಖಾಂತರ ಸಮಾಜದಲ್ಲಿ ಗುರುತಿಸಿ ಕೊಳ್ಳುವಂತೆ ಆಗಬೇಕು. ಒಳ್ಳೆಯ ಕಾರ್ಯಗಳಿಗೆ ಹಠ ಚಲದಿಂದ ಮುನ್ನುಗ್ಗಬೇಕು. ಮಾನಿನಿಯರಿಗೆ ಪುರುಷರಿಂದ ಪ್ರೋತ್ಸಾಹ ಹೆಚ್ಚಾಗಿ ದೊರೆಯಬೇಕು. ಯಾರು ಸಹಕಾರ ನೀಡದಿದ್ದಾಗ ಅವರಿಗೆ ಅವರೇ ಗುರು ಆಗಿ ಕಾರ್ಯ ನಿರ್ವಹಿಸುವಂತಹ ಶಕ್ತಿ ಸಿಗಬೇಕು. ಮಹಿಳೆಯು ಅಪಾರವಾದ ಶಕ್ತಿಯನ್ನು ಹೊಂದಿದವಳು. ಮಹಿಳೆಯರು ಹೆಚ್ಚು ಹೆಚ್ಚಾಗಿ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿ ಕೊಳ್ಳುವ ಕಾರ್ಯವನ್ನು ಮಾಡುವುದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಹೇಳಿದರು. ಆ ನಂತರದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಹಾಸನ ಜಿಲ್ಲಾಧ್ಯಕ್ಷರಾದಂತಹ ತಾರಾಮಣಿ ಹಾಸನ್ ರವರು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಗುರುತಿಸಿ ಕೊಳ್ಳುವ ಕಾರ್ಯವನ್ನು ಮಾಡಬೇಕಿದೆ. ಎಷ್ಟೇ ಸಮಾನತೆ ಇದೆ ಎಂದರು ಪೂರ್ಣ ಪ್ರಮಾಣದ ಸಮಾನತೆ ಹೆಣ್ಣು ಮಕ್ಕಳಿಗೆ ಸಿಕ್ಕಿಲ್ಲ ಅಂತಹ ಸಮಾನತೆಯನ್ನು ಮಹಿಳೆ ಪಡೆಯುವಲ್ಲಿ ಯಶಸ್ವಿಯಾಗ ಬೇಕಾದರೆ ಧೈರ್ಯವಾಗಿ ಮುನ್ನುಗ್ಗ ಬೇಕೆಂದು ತಿಳಿಸಿದರು.ರಾಜ್ಯ ಖಜಾಂಜಿಯಾದಂತ ಧರಣಿ ನಾಗೇಶ್ ರವರು ಸಂಘದ ಉದ್ದೇಶಗಳ ಬಗ್ಗೆ ತಿಳಿಸಿದರು. ಮಹಿಳಾ ದಿನಾಚರಣೆಯ ಆಚರಣೆಯ ಪ್ರಯುಕ್ತ ಮಹಿಳೆಯರಿಗೆ ಹಲವಾರು ಸ್ಪರ್ಧೆಗಳನ್ನು ಮಾಡಿ ವಿಜೇತರಿಗೆ ಬಹುಮಾನಗಳನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರು ವಿತರಿಸಿದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ವಸಂತ ಮಹದೇವಿ, ನಿರೂಪಣೆಯನ್ನು ತಾರಮಣಿ ಬೇಲೂರು, ವಂದನಾರ್ಪಣೆಯನ್ನು ಇಂದ್ರಾಣಿ ಎಂಡಿ ರವರು ಜಿಲ್ಲಾಧ್ಯಕ್ಷರಾದಂತಹ ಶಿವಣ್ಣ, ಲವ ರಾಜ್ಯ ಸಂಚಾಲಕಿಯಾದಂತಹ ಸುಧಾಮಣಿ, ಸಂಘದ ಪದಾಧಿಕಾರಿಗಳಾದಂತಹ ಮತ್ತು ಸದಸ್ಯರಾದಂತಹ ರಾಧಾ, ಸುಧಾ, ವಸಂತ, ಮೀನಾಕ್ಷಿ, ಮಹಾದೇವಿ, ಸವಿತಾ ಬೇಲೂರು, ಮೇಘನ, ಶಿವಮ್ಮ, ಶಕುಂತಲಾ ಇನ್ನೂ ಹಲವಾರು ಸದಸ್ಯರುಗಳು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button